ನಿಮ್ಮ ಮನೆಯಲ್ಲಿ ಟಿವಿ, ಪ್ರಿಡ್ಜ್, ಬೈಕ್ ಇದೆಯಾ ..? ಹಾಗಾದ್ರೆ ರದ್ದಾಗುತ್ತೆ ನಿಮ್ಮ BPL ಕಾರ್ಡ್..!

ಬೆಂಗಳೂರು : ಮನೆಯಲ್ಲಿ ಟಿವಿ, ಬೈಕು, ಫ್ರಿಡ್ಜ್ ಇದ್ದರೆ ಬಿಪಿಎಲ್ ಪಡಿತರ ಕಾರ್ಡ್ ರದ್ದುಗೊಳಿಸಲಾಗುವುದು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ. ಸಚಿವರ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದ್ದು, ಜನರನ್ನು ಗೊಂದಲಕ್ಕೀಡು ಮಾಡಿದೆ.

ಸಾಮಾನ್ಯವಾಗಿ ಬಿಪಿಎಲ್ ಪಡಿತರಐದು ಎಕರೆಗಿಂತ ಹೆಚ್ಚು ಜಮೀನು, ಮನೆಯಲ್ಲಿ ಟಿವಿ ಬೈಕ್ ಇದ್ದವರು ತಮ್ಮ ಬಿಪಿಎಲ್ ಕಾರ್ಡ್ ಹಿಂದಿರುಗಿಸಲು ಏಪ್ರಿಲ್ ತನಕ ಸಮಯ ನೀಡಲಾಗುತ್ತದೆ. ನಂತರ ನಮ್ಮ ಪರಿಶೀಲನೆಯಲ್ಲಿ ಇಂತಹವರು ಬಿಪಿಎಲ್ ಕಾರ್ಡ್ ಬಳಸಿಕೊಳ್ಳುತ್ತಿರುವುದು ಬೆಳಕಿಗೆ ಬಂದರೆ ದಂಡ ಮತ್ತು ಶಿಕ್ಷೆ ನೀಡಬೇಕಾದೀತು ಎಂದು ಎಚ್ಚರಿಕೆ ನೀಡಿದ್ದಾರೆ. ಅಕ್ರಮ ಬಿಪಿಎಲ್ ಕಾರ್ಡ್ ರದ್ದತಿಯ ಕುರಿತು ಹಿಂದಿನ ಸಭೆಯಲ್ಲಿ ಮಾತನಾಡಿದ್ದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ಅಧಿಕಾರಿಗಳು, ಅರೆ ಸರ್ಕಾರಿ ಅಧಿಕಾರಿಗಳು 1ಲಕ್ಷ 20ಸಾವಿರಕ್ಕಿಂತ ಹೆಚ್ಚು ಆದಾಯ ಇದ್ದವರು ಬಿಪಿಎಲ್ ಕಾರ್ಡ್ ಹೊಂದಲು ಸಾಧ್ಯವೇ ಇಲ್ಲ. ಆದರೂ ಕೆಲವರು ಇಂತಹ ಕಾರ್ಡ್ ಹೊಂದಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ.

ಹೀಗಾಗಿ ಇಂತಹ ಅಕ್ರಮ ಕಾರ್ಡ್ ಗಳನ್ನು ವಾಪಸ್ಸು ನೀಡಲು ಮಾರ್ಚ್ 31ರೊಳಗೆ ಸಮಯವಿದೆ. ಇಲಾಖೆಯಿಂದ ಸರ್ವೆ ಮಾಡಿ ಅಕ್ರಮ ಬಿಪಿಎಲ್ ಕಾರ್ಡ್ ರದ್ದುಪಡಿಸುವುದಾಗಿ ಹೇಳಿದ್ದಾರೆ. ಆದರೆ ಸಚಿವರ ಹೇಳಿಕೆ ಇದೀಗ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಟಿವಿ, ಫ್ರಿಜ್ಡ್, ಬೈಕ್ ಇದರಲ್ಲಿ ಯಾವುದಾದರೊಂದು ಇದ್ದೇ ಇರುತ್ತದೆ. ಅಲ್ಲದೇ ಬಹುತೇಕ ಬಡ ಕುಟುಂಬಗಳು 5 ಎಕರೆಗಿಂತ ಹೆಚ್ಚು ಭೂಮಿಯನ್ನು ಹೊಂದಿವೆ. ಹೀಗಾಗಿ ಸಚಿವರ ಹೇಳಿಕೆ ಇದೀಗ ಬಿಪಿಎಲ್ ಪಡಿತರ ಚೀಟಿ ಹೊಂದಿದ ಕುಟುಂಬಗಳಿಗೆ ನಡುಕ ಶುರುವಾಗಿದೆ.

Comments are closed.