ಬೆಂಗಳೂರು : ರಾಸಲೀಲೆ ಸಿಡಿ ಪ್ರಕರಣದಲ್ಲಿ ಕಾಣಿಸಿಕೊಂಡಿದ್ದಾರೆನ್ನಲಾಗುತ್ತಿರುವ ಸಿಡಿಲೇಡಿಯ ಎರಡನೇ ವಿಡಿಯೋ ರಿಲೀಸ್ ಆಗಿದ್ದು, ವಿಡಿಯೋದಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಹಾಗೂ ಎಸ್ ಐಟಿ ಅಧಿಕಾರಿಗಳ ವಿರುದ್ದವೇ ಗಂಭೀರ ಆರೋಪವನ್ನು ಮಾಡಿದ್ದ, ಪೊಲೀಸರ ತನಿಖೆಯ ಬಗ್ಗೆಯೇ ಅನುಮಾನ ಹುಟ್ಟಿಸುವ ಹೇಳಿಕೆಯನ್ನು ನೀಡಿದ್ದಾಳೆ.
ತಾನು ಮಾರ್ಚ್ 12ರಂದು ಒಂದು ವಿಡಿಯೋವನ್ನು ಪೊಲೀಸ್ ಆಯುಕ್ತರಿಗೆ, ವಿಶೇಷ ತನಿಖಾ ತಂಡಕ್ಕೆ ವಿಡಿಯೋವನ್ನು ಕಳುಹಿಸಿಕೊಟ್ಟಿದ್ದೇನೆ. ಆದರೆ ನಾನು ವಿಡಿಯೋವನ್ನು ರಿಲೀಸ್ ಮಾಡಿರಲಿಲ್ಲ. ಮಾರ್ಚ್ 13ರಂದು ರಮೇಶ್ ಜಾರಕಿಹೊಳಿ ಅವರು ದೂರು ನೀಡಿದ ಬಳಿಕ ತನ್ನ ವಿಡಿಯೋವನ್ನು ರಿಲೀಸ್ ಮಾಡಲಾಗಿದೆ. ಎಸ್ ಐಟಿ ಯಾರ ಪರವಾಗಿದ್ದಾರೆಂದು ಅರ್ಥವಾಗುತ್ತಿಲ್ಲ ಎಂದು ಯುವತಿ ಪ್ರಶ್ನಿಸಿದ್ದಾಳೆ.
ಅಷ್ಟೇ ಅಲ್ಲಾ ತನ್ನ ತಂದೆ ಸ್ವಇಚ್ಚೆಯಿಂದ ದೂರನ್ನು ನೀಡಿಲ್ಲ. ನಾನು ತಪ್ಪೇ ಮಾಡಿಲ್ಲ ಅನ್ನೋದು ಪೋಷಕರಿಗೆ ಗೊತ್ತಿದೆ. ಹೀಗಾಗಿ ಅವರು ದೂರು ನೀಡುವುದಕ್ಕೆ ಸಾಧ್ಯವೇ ಇಲ್ಲಾ. ಇನ್ನು ತನ್ನ ಪೋಷಕರಿಗೆ ರಕ್ಷಣೆಯನ್ನು ನೀಡುವಂತೆಯೂ ಮನವಿಯನ್ನು ಮಾಡಿಕೊಂಡಿದ್ದಾಳೆ. ಯುವತಿಯ ಎರಡನೇ ವಿಡಿಯೋ ಇದೀಗ ಎಸ್ ಐಟಿ ತನಿಖೆಯ ಕಡೆಗೆ ಬೊಟ್ಟು ಮಾಡುವಂತೆ ಮಾಡಿದೆ.