ಬೀಜಿಂಗ್ : ಚೀನಾದಲ್ಲಿ ಕಾಣಿಸಿಕೊಂಡಿದ್ದ ಕೊರೊನಾ (ಕೋವಿಡ್ 19) ಅನ್ನೋ ಮಹಾಮಾರಿ ಇಂದು ವಿಶ್ವದ ಜನರ ನಿದ್ದೆಗೆಡಿಸಿದೆ. ಕೊರೊನಾ ಚೀನಾದ ಸೃಷ್ಟಿಸಿದ ಜೈವಿಕ ಅಸ್ತ್ರ ಅನ್ನೋ ಆರೋಪದ ಬೆನ್ನಲ್ಲೇ ಚೀನಾ ಕೊರೊನಾಕ್ಕೆ ಬಲಿಯಾದವರ ಸಂಖ್ಯೆಯಲ್ಲಿಯೂ ವಿಶ್ವದ ಮುಂದೆ ಸುಳ್ಳು ಹೇಳಿದೆ.

ಕೇವಲ 3 ರಿಂದ 4,000 ಮಂದಿ ಸಾವನ್ನಪ್ಪಿದ್ದಾರೆ ಅಂತಾ ಚೀನಾ ಹೇಳಿತ್ತು. ಆದರೆ ವುಹಾನ್ ಹಾಗೂ ಹುಬೆ ಪ್ರಾಂತ್ಯದಲ್ಲಿ ಸಾವನ್ನಪ್ಪಿರುವರ ಸಂಖ್ಯೆ ಎಷ್ಟು ಅನ್ನೋದನ್ನು ಚೀನಾದ ಪತ್ರಿಕೆಗಳು ಬಯಲು ಮಾಡಿವೆ.

ಚೀನಾದಲ್ಲಿ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ ಅಂತಾ ಹೇಳಲಾಗ್ತಿದೆ. ಅದರ ಜೊತೆಯಲ್ಲೇ ಚೀನಾದ ಮೊಬೈಲ್ ಕಂಪೆನಿ ತನ್ನ 80 ಲಕ್ಷ ಗ್ರಾಹಕರ ಮೊಬೈಲ್ ಸ್ವಿಚ್ ಆಫ್ ಆಗಿದೆ. ತನ್ನ ಗ್ರಾಹಕರನ್ನು ಚೀನಾ ಕೊಂದಿದೆ ಅಂತಾ ದೂರನ್ನು ಕೊಟ್ಟಿತ್ತು.

ಇದೆಲ್ಲರ ಬೆನ್ನಲ್ಲೇ ಚೀನಾ ಮಾತ್ರ ಕೊರೊನಾದಿಂದ ತನಗೆ ಏನೂ ಆಗಿಯೇ ಇಲ್ಲಾ ಅನ್ನುವಂತೆ ವಿಶ್ವದ ಮುಂದೆ ಬಿಂಬಿಸಿಕೊಳ್ಳುತ್ತಿದೆ. ಕೊರೊನಾ ಸೋಂಕನ್ನು ಸಮರ್ಥವಾಗಿ ಎದುರಿಸಿ ಗೆದ್ದಿದ್ದೇವೆ ಅಂತಾ ಬೀಗುತ್ತಿದೆ.

ಆದರೆ ಚೀನಾದ ವುಹಾನ್ ನಲ್ಲಿ ಮಾರಕ ಕೋವಿಡ್ 19 ವೈರಸ್ ಗೆ ಬಲಿಯಾದವರ ಸಂಖ್ಯೆ ಬರೋಬ್ಬರಿ 42 ಸಾವಿರ ಎಂದು ಅಂದಾಜಿಸಲಾಗಿದೆ. ಚೀನಾದ ಸ್ಥಳೀಯರೇ ಹೇಳುವಂತೆ ಪ್ರತಿನಿತ್ಯವೂ 500 ಯೂರಾನ್ಸ್ (ಅಂತ್ಯ ಸಂಸ್ಕಾರ ನೆರವೇರಿಸಲು ನೀಡುವ ಬೂದಿ) ನಿತ್ಯವೂ ಸುಮಾರು 3,500 ಮಂದಿಗೆ ಯೂರಾನ್ಸ್ ಮಡಿಕೆಗಳನ್ನು ಹಂಚಲಾಗಿದೆ.

ಹುಬೈ ಪ್ರಾಂತ್ಯದಲ್ಲಿ ಸುಮಾರು 7 ದಿನ ಯೂರಾನ್ಸ್ ಹಂಚಿಕೆ ಮಾಡಿದ್ರೆ, ವುಹಾನ್ ಪ್ರಾಂತ್ಯದಲ್ಲಿ ಹನ್ನೆರಡು ದಿನಗಳ ಕಾಲ ಹಂಚಿಕೆ ಮಾಡಲಾಗಿದೆ ಎಂದು ಚೀನಾದ ದ ಮೇಲ್ ಆನ್ ಲೈನ್ ವರದಿ ಮಾಡಿದೆ. ಹೀಗಾಗಿ ಚೀನಾದಲ್ಲಿ ಕೊರೊನಾಕ್ಕೆ ಲಕ್ಷಾಂತರ ಮಂದಿ ಬಲಿಯಾಗಿರೋದು ಖಚಿತವಾಗುತ್ತಿದೆ.

ಇನ್ನು ಕೊರೊನಾ ಕಾಣಿಸಿಕೊಂಡಿದ್ದ ವುಹಾನ್ ನಗರದಲ್ಲಿಯೇ ಅತೀ ಹೆಚ್ಚು ಸಂಖ್ಯೆಯಲ್ಲಿ ಜನರು ಡೆಡ್ಲಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ಚೀನಾ ಪತ್ರಿಕೆಗಳು ಪ್ರಕಟಿಸಿರೋ ವರದಿಯಂತೆ ವುಹಾನ್ ನಗರದ ಜನತೆ ಕೊರೊನಾ ಹೆಸರು ಹೇಳಿದ್ರೆ ಬೆಚ್ಚಿ ಬೀಳುತ್ತಿದ್ದಾರೆ. ಸರಕಾರ ವುಹಾನ್ ನಗರದಲ್ಲಿ ಸಾವನ್ನಪ್ಪಿರುವವರ ಸಂಖ್ಯೆಯನ್ನು ಎಲ್ಲಿಯೂ ಬಿಚ್ಚಿಟ್ಟಿಲ್ಲ.

ಆದರೆ ಸ್ಥಳೀಯರು ಹೇಳೋ ಪ್ರಕಾರ ವುಹಾನ್ ನಗರದಲ್ಲಿ ಕನಿಷ್ಠ 40 ಸಾವಿರಕ್ಕೂ ಅಧಿಕ ಮಂದಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ಇನ್ನು ಹುಬೆ ಪ್ರಾಂತ್ಯದಲ್ಲಿಯೂ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ ದೊಡ್ಡದಿದೆ. ಹುಬೈ ಪ್ರಾಂತ್ಯದಲ್ಲಿ ಕಳೆದೊಂದು ತಿಂಗಳಲ್ಲಿ ಅವಧಿಯಲ್ಲಿ ಬರೋಬ್ಬರಿ 28,000 ಶವಗಳ ಅಂತ್ಯ ಸಂಸ್ಕಾರ ನಡೆಸಲಾಗಿದೆಯಂತೆ.

ಚೀನಾ ಸರಕಾರ ಕೊರೊನಾ ದಾಳಿಗೆ ಒಳಗಾದವರ ಅಂತ್ಯ ಸಂಸ್ಕಾರದ ಬೂದಿಯನ್ನು ರಹಸ್ಯವಾಗಿ ಸಾಗಾಟ ಮಾಡಿದೆ ಎನ್ನಲಾಗುತ್ತಿದೆ. ಚೀನಾದ ಜೈವಿಕ ಅಸ್ತ್ರ ಅಂತಾನೆ ಕರೆಯಲಾಗುತ್ತಿರೋ ಕೊರೊನಾ ವೈರಸ್ ನಿಂದ ತನ್ನ ದೇಶದಲ್ಲಿ ಮೃತಪಟ್ಟವರ ನಿಜ ಸಂಖ್ಯೆಯನ್ನು ಬಿಟ್ಟುಕೊಡಬಾರದು ಅನ್ನೋ ಉದ್ದೇಶದಿಂದಲೇ ಚೀನಾ ಸಾವನ್ನಪ್ಪಿದವರ ಸಂಖ್ಯೆಯನ್ನು ರಹಸ್ಯವಾಗಿಟ್ಟಿದೆ ಅಂತಾ ಅಂತರ್ಜಾಲ ಸುದ್ದಿ ಪತ್ರಿಕೆ ಸನ್ ಆನ್ ಲೈನ್ ವರದಿದೆ.

ಇಷ್ಟೇ ಚೀನಾದ ಮಾಧ್ಯಮಗಳು ಕೊರೊನಾ ಸಾವಿನ ಭೀಕರತೆಯನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದವು. ಅಂತ್ಯ ಸಂಸ್ಕಾರ ನಡೆಸುವ ಮನೆಗಳಿಗೆ ಲಾರಿಗಳಲ್ಲಿ ಅಂತ್ಯಸಂಸ್ಕಾರ ಬೂದಿಯನ್ನು ತುಂಬಿಸಿ ಕಳುಹಿಸುತ್ತಿರೋ ಕುರಿತು ಚಿತ್ರ ಸಹಿತವಾಗಿ ವರದಿಯನ್ನು ಪ್ರಕಟಿಸಲಾಗಿತ್ತು. ನಿಜಕ್ಕೂ ಚೀನಾ ಮಾಧ್ಯಮಗಳು ಪ್ರಕಟಿಸುತ್ತಿರೋ ವರದಿಗಳ ಪ್ರಕಾರ ಮಾರಕ ಕೊರೊನಾ ವೈರಸ್ ಗೆ ವುಹಾನ್ ಮತ್ತು ಹುಬೆ ಪ್ರಾಂತ್ಯಗಳು ಅಕ್ಷರಶಃ ನಲುಗಿ ಹೋಗಿವೆ.

ಹೊರ ಜಗತ್ತಿಗೆ ಕೊರೊನಾದ ಕರಾಳತೆಯನ್ನು ಬಿಟ್ಟುಕೊಡೋದಕ್ಕೆ ಚೀನಾ ಸಿದ್ದವಿಲ್ಲ. ಅಷ್ಟೇ ಯಾಕೆ ಕೊರೊನಾ ಪತ್ತೆ ಹಚ್ಚಿದ ವೈದ್ಯರನ್ನೇ ಬಂಧಿಸಿದ್ದ ಚೀನಾ ಸರಕಾರ ಇದೀಗ ಹಲವು ವೈದ್ಯರಿಗೂ ನಿರ್ಬಂಧ ಹೇರಿದೆ.

ವಿಶ್ವಕ್ಕೆ ಕೊರೊನಾ ಅನ್ನೋ ಮಹಾಮಾರಿಯನ್ನು ಛೂ ಬಿಟ್ಟಿರೋ ಕಪಟಿ ಚೀನಾ ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಿಗೆ ಮಾಸ್ಕ್, ವೆಂಟಿಲೇಟರ್, ಗ್ಲೌಸ್ ಒದಗಿಸೋದಾಗಿ ಹೇಳುತ್ತಿದೆ. ಇದೀಗ ರಹಸ್ಯವಾಗಿರೋ ಚೀನಾದ ಕೊರೊನಾ ರಹಸ್ಯ ಮುಂದೊಂದು ದಿನ ಬಯಲಾಗೋದು ಖಚಿತ.