2 ವರ್ಷದ ಮಗು ಸೇರಿ ಕುಟುಂಬದ 25 ಮಂದಿಗೂ ಡೆಡ್ಲಿ ಕೊರೊನಾ

0

ಮುಂಬೈ : ಕೊರೊನಾ ಮಹಾಮಾರಿ ಮಹಾರಾಷ್ಟ್ರದಲ್ಲಿ ಅಟ್ಟಹಾಸವನ್ನು ಮೆರೆಯುತ್ತಿದೆ. ದಿನೇ ದಿನೇ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಸರಕಾರ ನಾನಾ ರೀತಿಯ ಕಸರತ್ತು ನಡೆಸಿದ್ರೂ ಕೊರೊನಾ ತಹಬದಿಗೆ ಬರ್ತಿಲ್ಲ. ಇದೀಗ 2 ವರ್ಷದ ಮಗುವಿಗೆ ಮಹಾಮಾರಿ ಸೋಂಕು ತಗುಲಿದ್ದು, ಕುಟುಂಬದ 25 ಮಂದಿಯೂ ಕೊರೊನಾಕ್ಕೆ ತುತ್ತಾಗಿದ್ದಾರೆ ಎಂದು ಸಾಂಗ್ಲಿ ಜಿಲ್ಲಾಧಿಕಾರಿ ಅಭಿಜಿತ್ ಚೌದರಿ ಹೇಳಿದ್ದಾರೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿರೋ ಈ ಕುಟುಂಬದ ನಾಲ್ವರು ಸದಸ್ಯರು ಇತ್ತೀಚಿಗಷ್ಠೆ ಮೆಕ್ಕಾ ಯಾತ್ರೆಗೆ ತೆರಳಿ ವಾಪಾಸಾಗಿದ್ರು. ಹೀಗೆ ಹಿಂದಿರುಗಿದ ನಾಲ್ವರಿಗೆ ಶಂಕಿತ ಕೊರೊನಾ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಗಂಟಲಿನ ದ್ರವ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ನಾಲ್ವರನ್ನು ಆಸ್ಪತ್ರೆಯ ಐಸೋಲೇಶನ್ ವಾರ್ಡ್ ನಲ್ಲಿ ಚಿಕಿತ್ಸೆ ಮುಂದುವರಿಸಲಾಗಿತ್ತು.


ಕುಟುಂಬದ ನಾಲ್ವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ಉಳಿದ ಎಲ್ಲರನ್ನೂ ಹಂತ ಹಂತವಾಗಿ ತಪಾಸಣೆಗೆ ಒಳಪಡಿಸಲಾಗಿತ್ತು. ಮಾರ್ಚ್ 21ರಂದು ಕುಟುಂಬದ ಇನ್ನೂ ಐವರಿಗೆ ಕೊರೊನಾ ಸೋಂಕು ದೃಢಪಟ್ಟಿತ್ತು.

ಹೀಗಾಗಿ ಆತಂಕ್ಕೆ ಒಳಗಾದ ಮಹಾರಾಷ್ಟ್ರ ಸರಕಾರ ಇಡೀ ಕುಟುಂಬವನ್ನೇ ಆಸ್ಪತ್ರೆಗೆ ದಾಖಲಿಸಿದೆ. ಇದೀಗ 2 ವರ್ಷದ ಮಗು ಸೇರಿದಂತೆ ಕುಟುಂಬದ 25 ಮಂದಿಗೂ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.

ಇಡೀ ಕುಟುಂಬವೇ ಕೊರೋನಾ ಸೋಂಕಿಗೆ ತುತ್ತಾಗುತ್ತಿದ್ದಂತೆಯೇ ಕುಟುಂಬದ ಸಂಪರ್ಕದಲ್ಲಿದ್ದ ಸುಮಾರು 325 ಮಂದಿಯನ್ನು ಸರಕಾರ ಹೋಮ್ ಕ್ವಾರಂಟೈನ್ ನಲ್ಲಿ ಇರುವಂತೆ ಸೂಚನೆಯನ್ನು ನೀಡಿದೆ.

ಸಾಂಗ್ಲಿಯ ಇಸ್ಲಾಂಪುರದ ತಹಸಿಲ್ನಿಲ್ಲಿ ಸಣ್ಣ ಮನೆಯಲ್ಲಿ ಇಡೀ ಕುಟುಂಬ ವಾಸವಾಗಿತ್ತು. ಹಜ್ ಯಾತ್ರೆಗೆ ತೆರಳಿದ್ದ ನಾಲ್ವರಿಗೆ ಕಾಣಿಸಿಕೊಂಡಿದ್ದ ಕೊರೊನಾ ಸೋಂಕು ಸಣ್ಣ ಮನೆಯಲ್ಲಿ ವಾಸಿಸುತ್ತಿದ್ದ ಎಲ್ಲರಲ್ಲಿಯೂ ಕಾಣಿಸಿಕೊಂಡಿದೆ.

Leave A Reply

Your email address will not be published.