ಕೊರೊನಾ ಶಾಕ್ : ಕಾಲೇಜು ಆರಂಭವಾದ ಮೂರೇ ದಿನಕ್ಕೆ 57 ಮಂದಿಗೆ ಒಕ್ಕರಿಸಿದ ಸೋಂಕು



ಬೆಂಗಳೂರು : ರಾಜ್ಯದಲ್ಲಿ ಕಾಲೇಜು ಆರಂಭವಾಗಿ ಮೂರು ದಿನ ಕಳೆದಿದೆ. ಮೂರು ದಿನದಲ್ಲಿಯೇ ಆಘಾತಕಾರಿ‌ ಮಾಹಿತಿ ಹೊರ ಬಿದ್ದಿದ್ದು, ಬಿಬಿಎಂಪಿ ವ್ಯಾಪ್ತಿಯ ವಿದ್ಯಾರ್ಥಿಗಳು, ಉಪನ್ಯಾಸಕರು ಸೇರಿದಂತೆ ಒಟ್ಟು 57 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಬೆಂಗಳೂರಿನಲ್ಲಿ ಇದುವರೆಗೆ ವಿದ್ಯಾರ್ಥಿಗಳು, ಉಪನ್ಯಾಸಕರು ಸೇರಿದಂತೆ ಒಟ್ಟು 11 ಸಾವಿರ‌ ಮಂದಿಗೆ ಕೊರೊನಾ ತಪಾಸಣೆ ನಡೆಸಲಾಗಿದೆ. ಈ ‌ಪೈಕಿ 7,000 ಮಂದಿಯ ಕೊರೊನಾ ತಪಾಸಣಾ ವರದಿ ಈಗಾಗಲೇ ಬಂದಿದ್ದು, ಈ ಪೈಕಿ 57 ಜನರಿಗೆ ಕೊರೊನಾ‌ ಸೋಂಕು ಇರುವುದು ದೃಢಪಟ್ಟಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.

ಕಾಲೇಜುಗಳನ್ನು ಆರಂಭಿಸುವ ವೇಳೆಯಲ್ಲಿ ಕೊರೊನಾ‌ ಮಾರ್ಗಸೂಚಿಯನ್ನು ತಪ್ಪದೇ ಪಾಲಿಸುವಂತೆಯೂ ತಿಳಿಸಲಾಗಿತ್ತು. ಈ ಹಿನ್ನೆಲೆ ಯಲ್ಲಿಯೇ ಕಾಲೇಜು ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರನ್ನು ಕೊರೊನಾ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕೊರೊನಾ ವೈರಸ್ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ನವೆಂಬರ್ 17ರಂದು ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳನ್ನು ಆರಂಭಿಸಲಾಗಿತ್ತು.

ಕಾಲೇಜು ಆರಂಭವಾಗಿ ಮೂರು ದಿನ ಕಳೆದಿದ್ದರೂ ಕೂಡ ತರಗತಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ ತೀರಾ ಕಡಿಮೆಯಿದೆ. ಬಹುತೇಕ ವಿದ್ಯಾರ್ಥಿಗಳು ಕೊರೊನಾ ಭಯದಲ್ಲಿಯೇ ಕಾಲೇಜುಗಳಿಗೆ ಹಾಜರಾಗುತ್ತಿಲ್ಲ. ಈ ನಡುವಲ್ಲೇ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ಸೋಂಕು ಪತ್ತೆಯಾಗಿದೆ.

Comments are closed.