ಸೆಲೆಬ್ರೆಟಿಗಳ ಮಾಲ್ಡೀವ್ಸ್ ಕನಸಿಗೆ ಬೀಗ….! ಭಾರತೀಯ ಪ್ರವಾಸಿಗರಿಗೆ ನಿಷೇಧ ಹೇರಿದ ಪ್ರವಾಸಿದ್ವೀಪ…!!

ಸ್ಯಾಂಡಲ್ ವುಡ್ ನಿಂದ ಆರಂಭಿಸಿ, ಬಾಲಿವುಡ್,ಟಾಲಿವುಡ್ ತನಕ ಎಲ್ಲರೂ ವೆಕೇಶನ್ ಗಾಗಿ ಹಾರುತ್ತಿದ್ದ ತಾಣ ಮಾಲ್ಡೀವ್ಸ್. ಆಕಾಶವನ್ನೇ ತಬ್ಬಿಕೊಂಡಂತೆ , ಕೆಳಕ್ಕೆ ನೆಲವನ್ನು ತೋರುವಂತೆ ಹಬ್ಬಿ ನಿಂತ  ಸಮುದ್ರದ ಅಲೆಗಳ ನಡುವೆ ಎಲ್ಲ ಮರೆತು ಕಳೆದುಹೋಗುತ್ತಿದ್ದ ನಟ-ನಟಿಯರಿಗೆ ಮಾಲ್ಡೀವ್ಸ್ ಆಡಳಿತ ಶಾಕ್ ನೀಡಿದೆ.

ಕೊರೋನಾ ಎರಡನೆ ಅಲೆ ಭಾರತದಲ್ಲಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ  ಸೋಂಕಿತರ ಸಂಖ್ಯೆ ಹೆಚ್ಚಿದೆ. ಹೀಗಾಗಿ ವಿಶ್ವದ  ಇತರ ರಾಷ್ಟ್ರಗಳು ಭಾರತಕ್ಕೆ ಭೇಟಿ ನೀಡದಂತೆ ತನ್ನ ನಾಗರೀಕರಿಗೆ ಸೂಚಿಸಿದೆ.  ಅಷ್ಟೇ ಅಲ್ಲ ವಿಮಾನಗಳ ಮೇಲೂ ನಿಯಂತ್ರಣ ಹೇರಿದೆ. ಆದರೆ ಕೊರೋನಾ ವ್ಯಾಪಿಸುತ್ತಿದ್ದಂತೆ ಭಾರತದ ಹಲವು ಸೆಲೆಬ್ರೆಟಿಗಳು ಮಾಲ್ಡೀವ್ಸ್ ಗೆ ಹಾರಿದ್ದರು.

ಇದನ್ನು ಗಮನಿಸಿದ ಮಾಲ್ಡೀವ್ಸ್ ಆಡಳಿತ  ಭಾರತೀಯರ ಭೇಟಿಯನ್ನು ನಿರ್ಬಂಧಿಸಿದೆ. ಏಪ್ರಿಲ್ 27 ರಿಂದ ಭಾರತೀಯ ಪ್ರವಾಸಿಗರಿಗೆ ಆತಿಥ್ಯ ನೀಡದಂತೆ ತನ್ನ ಪ್ರಮುಖ ಪ್ರವಾಸಿ ತಾಣಗಳ ಮೇಲೆ ನಿಯಂತ್ರಣ ಹೇರಿದೆ. ಹೀಗಾಗಿ ಮಾಲ್ಡೀವ್ಸ್ ನಲ್ಲಿ ಕೂಲ್ ಕೂಲ್ ವೆಕೇಶನ್ ಕಳೆದು ಎಂಜಾಯ್ ಮಾಡಿ ಕೊರೋನಾ ಸಂಕಷ್ಟ ತಪ್ಪಿಸಿಕೊಳ್ಳುವ ಪ್ಲ್ಯಾನ್ ನಲ್ಲಿದ್ದ ಸೆಲೆಬ್ರೇಟಿಗಳಿಗೆ ಶಾಕ್ ಎದುರಾಗಿದೆ.

ಈಗಾಗಲೇ ಮಾಲ್ಡೀವ್ಸ್ ಗೆ ಪ್ರಯಾಣ ಬೆಳೆಸಿದ್ದ ಬಾಲಿವುಡ್ ನ ಲವ್ ಬರ್ಡ್ಸ್ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್, ಜಾಹ್ನವಿ ಕಪೂರ್, ಟೈಗರ್ ಶ್ರಾಫ್ ಸೇರಿದಂತೆ ಹಲವರು ವಾಪಸ್ಸಾಗಿದ್ದಾರೆ. ಇನ್ನುಳಿದ ಸೆಲೆಬ್ರೆಟಿಗಳು ತಮ್ಮ ಪ್ರವಾಸ ರದ್ದುಪಡಿಸಿದ್ದಾರೆ.

‘ಇತ್ತೀಚಿಗಷ್ಟೇ ಬಾಲಿವುಡ್ ಸ್ಟಾರ್ ನವಾಜುದ್ಧೀನ್ ಸಿದ್ಧಿಕಿ ದೇಶದ ಜನರು ಕೊರೋನಾ ಸಂಕಷ್ಟದಲ್ಲಿರುವ ವಿದೇಶಕ್ಕೆ ವೆಕೆಶನ್ ಟ್ರಿಪ್ ಗೆ ತೆರಳುತ್ತಿರುವ ಸೆಲೆಬ್ರೆಟಿಗಳ ಮೇಲೆ ಕಿಡಿಕಾರಿದ್ದಲ್ಲದೇ, ದೇಶವಾಸಿಗಳ ಸಹಾಯಕ್ಕೆ ಧಾವಿಸಿ ಅದನ್ನು ಬಿಟ್ಟು ಟ್ರಿಪ್ ಪೋಟೋ ಪೋಸ್ಟ್ ಮಾಡುವ ಮುನ್ನ ಸ್ವಲ್ಪ ನಾಚಿಕೆ ಇರಲಿ ಎಂದಿದ್ದರು.

ಅಷ್ಟೇ ಅಲ್ಲ ಈಗ ಮಾಲ್ಡೀವ್ ಭಾರತೀಯರನ್ನು ನಿಷೇಧಿಸುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆರಂಭವಾಗಿದ್ದು, ಸಂಕಷ್ಟದಲ್ಲಿ ದೇಶ ತೊರೆದು ಓಡಿಹೋಗೋರು ಈಗೇನು ಮಾಡ್ತಾರೆ ಅಂತ ಜನ ಪ್ರಶ್ನೆ ಮಾಡ್ತಿದ್ದಾರೆ.

Comments are closed.