ರುಂಡ ಮುಂಡ ತುಂಡರಿಸಿ ಸಹೋದರನ ಹತ್ಯೆ : ಸ್ಯಾಂಡಲ್‌ವುಡ್ ನಟಿ ಅರೆಸ್ಟ್

ಹುಬ್ಬಳ್ಳಿ : ಪ್ರಿಯತಮನೊಂದಿಗೆ ಸೇರಿ ತಮ್ಮನನ್ನೇ ಭೀಕರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ‌ಸ್ಯಾಂಡಲ್ ವುಡ್ ನಟಿ ಶನಾಯಾ ಕಾಟ್ವೆಯನ್ನು ಪೊಲೀಸರು ಬಂಧಿಸಿದ್ದಾರೆ.

ಏಪ್ರಿಲ್ 11ರಂದು ಕೇಶ್ವಾಪುರದ ನಿರ್ಜನ ಪ್ರದೇಶದಲ್ಲಿ‌ ರಾಕೇಶ್ ಎಂಬಾತನ ಮೃತದೇಹ ರುಂಡ, ಮುಂಡ ಬೇರ್ಪಟ್ಟಿದ್ದು ಅರ್ಧಂಬರ್ಧ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಟಿ ಶನಾಯ ಕಾಟ್ವೆ ಸಹೋದರ  ರಾಕೇಶ್ ಕಾಟ್ವೆ ಎಂಬುವುದು ಖಚಿತವಾಗುತ್ತಿದ್ದಂತೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದರು.

ಪ್ರಕರಣದ ತನಿಖೆಗೆ ಇಳಿದ ಪೊಲೀಸರಿಗೆ ಶಾಕ್ ಆಗಿತ್ತು. ನಟಿ ಶನಾಯಾ ಕಾಟ್ವೆ ಹಾಗೂ ಆತನ ಬಾಯ್ ಫ್ರೆಂಡ್ ಸೇರಿಕೊಂಡು, ಆಕೆಯ ಸಹೋದರನನ್ನು ತುಂಡು ತುಂಡಾಗಿ ಕತ್ತರಿಸಿ, ದೇವರ ಗುಡಿಹಾಳ್ ಅರಣ್ಯ ಪ್ರದೇಶದಲ್ಲಿ ಬಿಸಾಕಿದ್ದರ ಅನ್ನೋದು ದೃಢಪಟ್ಟಿತ್ತು. ಪೊಲೀಸರು ಶನಾಯಳ ಪ್ರಿಯಕರ ನಿಯಾಜ್, ಸಹಚರರಾದ ಮಲ್ಲಿಕ್, ಫಿರೋಜ್, ಸೈಫುದ್ದೀನ್, ನಿಯಾಜಹೆಮೆದ್ ಕಾಟಿಗರ್, ಟೌಸಿಫ್ ಚನ್ನಾಪುರ, ಅಲ್ತಾಫ್ ಮುಲ್ಲಾ ಮತ್ತು ಅಮನ್ ಗಿರಾನಿವಾಲೆನನ್ನು ಬಂಧಿಸಿದ್ದರು.

ತನಿಖೆ ವೇಳೆ ಶನಾಯ ಮತ್ತು ನಿಯಾಜ್ ನ ಪ್ರೀತಿಗೆ ರಾಕೇಶ್ ಆಕ್ಷೇಪಿ ಸುತ್ತಿದ್ದ. ಇದೇ ಕಾರಣಕ್ಕೆ ಏಪ್ರಿಲ್ 9ರಂದು ರಾಕೇಶನ ಕತ್ತು ಹಿಸುಕಿ ನಯಾಜ್ ಕೊಂದಿದ್ದು ನಂತರ ಮೃತದೇಹವನ್ನು ಕಾರಿನಲ್ಲಿ ಮನೆಗೆ ಸಾಗಿಸಿರುವುದಾಗಿ ಬಾಯ್ಬಿಟ್ಟಿದ್ದರು.‌ಇದೀಗ ಹುಬ್ಬಳ್ಳಿಯ ಗ್ರಾಮಾಂತರ ಠಾಣೆ ಪೊಲೀಸರು, ಇದೀಗ ನಟಿ ಶನಾಯಾ ಕಾಟ್ವೆಯನ್ನು ಬಂಧಿಸಿದ್ದಾರೆ.

ತೆಲುಗಿನ ಇದಂ ಪ್ರೇಮಂ ಜೀವನಂ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಶನಾಯ, ಕನ್ನಡದ ಒಂದು ಗಂಟೆಯ ಕಥೆ ಹಾಗೂ ಛೋಟಾ ಬಾಂಬೆ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

Comments are closed.