ರಾಜ್ಯದಲ್ಲಿ ಎರಡನೇ ಅಲೆ ಕೊರೋನಾಗೆ ಜನಜೀವನ ಅಸ್ತವ್ಯಸ್ಥಗೊಂಡಿದ್ದು, ಸೋಂಕಿನ ಪ್ರಮಾಣ ಹಾಗೂ ಸಾವಿನ ಸಂಖ್ಯೆ ಎರಡೂ ಏರುತ್ತಿದೆ. ಈ ಮಧ್ಯೆ ರೋಗಿಗಳ ಸಾವಿಗೆ ಕಾರಣ, ಪರೀಕ್ಷೆಕೈಗೊಳ್ಳಬೇಕಾದ ರೀತಿ ಹಾಗೂ ಪಾಲಿಸಬೇಕಾದ ನಿಯಮಗಳ ಬಗ್ಗೆ ವಿಕ್ಟೋರಿಯಾ ವೈದ್ಯರೊಬ್ಬರು ಅರ್ಥಪೂರ್ಣವಾಗಿ ವಿವರಿಸಿದ್ದು, ಜನರು ಇನ್ನಾದರೂ ಕೊರೋನಾದ ಗಂಭೀರತೆ ಅರ್ಥ ಮಾಡಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.

ಜನರು ಸಾಮಾನ್ಯವಾಗಿ ಆರ್ಟಿಪಿಸಿಆರ್ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಆ ರಿಪೋರ್ಟ್ ನೆಗೆಟಿವ್ ಬರುತ್ತಿದ್ದಂತೆ ಮನೆಗೆ ತೆರಳುತ್ತಿದ್ದಾರೆ. ಆದರೆ ಇದು ಸರಿಯಲ್ಲ. ಇದು ರೂಪಾಂತರಿ ವೈರಸ್ ಆಗಿದ್ದು, ಲಂಗ್ಸ್ ಇನ್ ಪೆಕ್ಷನ್ ಆದರೆ ಮನುಷ್ಯನ ಸಾವಿನ ಸಾಧ್ಯತೆ ಹೆಚ್ಚು. ಹೀಗಾಗಿ ಜನರು ಕಾಳಜಿ ವಹಿಸಬೇಕು.
https://www.facebook.com/100000642028121/posts/3610447332319965/?sfnsn=wiwspwa
ಆರ್ಟಿಪಿಸಿಆರ್ ಟೆಸ್ಟ್ ನೆಗೆಟಿವ್ ಬಂದರೂ ಕೂಡ ಜ್ವರ ಹಾಗೂ ಕೆಮ್ಮು ಇರುವ ವ್ಯಕ್ತಿ thorax CT scan ಗೆ ಒಮ್ಮೆ ಒಳಗಾಗಬೇಕು. ಅದರಲ್ಲಿ ನಾವು ಸ್ಕೋರ್ ಮಾಡುತ್ತೇವೆ. 20 ಕ್ಕಿಂತ ಹೆಚ್ಚಿನ ಸ್ಕೋರ್ ಬಂದ್ರೆ ಮನುಷ್ಯ ಬದುಕುವ ಪ್ರಮಾಣ ಕಡಿಮೆ ಎಂದು ವಿಕ್ಟೋರಿಯಾ ವೈದ್ಯರು ವಿವರಿಸಿದ್ದಾರೆ.

ಅಷ್ಟೇ ಅಲ್ಲ ನಾವು ಸರ್ಕಾರಕ್ಕೂ ಈ ವಿಚಾರವನ್ನು ಮನವರಿಕೆ ಮಾಡಿಸಿದ್ದು, ಇನ್ಮುಂದೆ ಆರ್ಟಿಪಿಸಿಆರ್ ಟೆಸ್ಟ್ ಮಾತ್ರವಲ್ಲದೇ thorax CT scan ಕೂಡಾ ಕಡ್ಡಾಯಮಾಡುವಂತೆ ಸೂಚಿಸಿದ್ದೇವೆ. ಬೆಡ್ ಹಾಗೂ ಟ್ರಿಟ್ಮೆಂಟ್ ವಿಚಾರದಲ್ಲಿ ನಾವು ಫರ್ಸ್ಟ್ ಕಮ್ ಫರ್ಸ್ಟ್ ಅನ್ನೋ ನೀತಿ ಅನುಸರಿಸುತ್ತಿದ್ದೇವೆ. ಹೀಗಾಗಿ ಲಭ್ಯ ಇರುವ ಬೆಡ್ ಗಳನ್ನು ಮಾತ್ರ ನೀಡಲು ಸಾಧ್ಯ ಎಂದಿದ್ದಾರೆ.

ಕೆಲವರು ನಿರ್ಲಕ್ಷ್ಯ ತೋರುತ್ತಿದ್ದು, ಆರ್.ಟಿ.ಪಿಸಿಆರ್ ಟೆಸ್ಟ್ ಮಾಡಿಸಿ ನೆಗೆಟಿವ್ ಬರುತ್ತಿದ್ದಂತೆ ಮನೆಗೆ ವಾಪಸ್ಸಾಗುತ್ತಿದ್ದಾರೆ. ಬಳಿಕ ರೋಗ ಸ್ಥಿತಿ ಉಲ್ಬಣಿಸಿದಾಗ ವಾಪಸ್ಸಾಗುತ್ತಾರೆ. ಇದರಿಂದ ಸಾವಿನ ದವಡೆಗೆ ಸಿಲುಕುತ್ತಿದ್ದಾರೆ ಎಂದಿದ್ದು, ಇನ್ನಾದರೂ ಕಾಳಜಿ ವಹಿಸಿ ಎಂದು ವೈದ್ಯರು ವಿವರಿಸಿದ್ದಾರೆ.

ವಿಕ್ಟೋರಿಯಾ ವೈದ್ಯರು ಈ ವಿವರಣೆ ನೀಡಿರುವ ವಿಡಿಯೋ ಎಲ್ಲೆಡೆ ಸಖತ್ ವೈರಲ್ ಆಗಿದ್ದು, ಮಾಧ್ಯಮಗಳಲ್ಲೂ ಪ್ರಸಾರವಾಗಿದೆ.