ಭಾನುವಾರ, ಏಪ್ರಿಲ್ 27, 2025
HomeBreakingಸೋಂಕಿನ ಸಂಕಷ್ಟ ಸುಲಭವಲ್ಲ…!! ಮಜಾ ಕ್ವೀನ್ ಶ್ವೇತಾ ಚೆಂಗಪ್ಪ ಬಿಚ್ಚಿಟ್ರು ಕೊರೋನಾ ಸಜಾ…!!

ಸೋಂಕಿನ ಸಂಕಷ್ಟ ಸುಲಭವಲ್ಲ…!! ಮಜಾ ಕ್ವೀನ್ ಶ್ವೇತಾ ಚೆಂಗಪ್ಪ ಬಿಚ್ಚಿಟ್ರು ಕೊರೋನಾ ಸಜಾ…!!

- Advertisement -

ಸ್ಯಾಂಡಲ್ ವುಡ್ ಹಾಗೂ ಕನ್ನಡ ಕಿರುತೆರೆಯ ಹಲವು ಸೆಲೆಬ್ರೆಟಿಗಳು ಕೊರೋನಾ ಎರಡನೇ ಅಲೆಯಲ್ಲಿ ಸೋಂಕಿಗೆ ತುತ್ತಾಗಿದ್ದಾರೆ. ಹಿಂದೆಂದಿಗಿಂತ ಹೆಚ್ಚು ಬಾಧೆ ನೀಡುತ್ತಿರುವ ಸೋಂಕಿನ ಬಗ್ಗೆ ರೋಗದಿಂದ ಚೇತರಿಸಿಕೊಂಡ ಸೆಲೆಬ್ರೆಟಿಗಳು ವಿವರಣೆ ನೀಡಿದ್ದು ಮಜಾಟಾಕೀಸ್ ಖ್ಯಾತಿಯ ನಟಿ ಶ್ವೇತಾ ಚೆಂಗಪ್ಪ ಪುಟ್ಟ ಮಗುವಿನ ಜೊತೆ ತಾವು ಅನುಭವಿಸಿದ ಕರಾಳತೆಯನ್ನು ವಿವರಿಸಿದ್ದು, ಎಚ್ಚರವಾಗಿರಿ ಎಂದಿದ್ದಾರೆ.

ಈ ತಿಂಗಳ ಆರಂಭದಲ್ಲಿ ನನಗೆ ಜ್ವರ ಕಾಣಿಸಿಕೊಂಡಿತು. ನನ್ನ ಜೊತೆಗೆ ನನ್ನ ತಾಯಿಗೂ ಜ್ವರ ಕಾಣಿಸಿತು. ವೈದ್ಯರ ಸಲಹೆ ಮೇರೆಗೆ ಕೊರೋನಾ ಪರೀಕ್ಷೆ ಮಾಡಿಸಿಕೊಂಡೆವು. ನನಗೆ ಹಾಗೂ ನನ್ನ ತಾಯಿಗೆ ಕೊರೋನಾ ಪಾಸಿಟಿವ್ ಆಗಿತ್ತು.

ಹೀಗಾಗಿ ನನ್ನ ಪುಟ್ಟ ಮಗುವನ್ನು ಹಾಗೂ ಪತಿಯನ್ನು ಸಂಬಂಧಿಕರ ಮನೆಗೆ ಕಳುಹಿಸಲು ನಿರ್ಧರಿಸಿದೇವು.

ಆದರೆ ವೈದ್ಯರು ಮಗುವನ್ನು ದೂರ ಇಡೋದು ಬೇಡ ಎಂದರು. ಹೀಗಾಗಿ ನಾವು ಮನೆಯಲ್ಲೇ ಐಷೋಲೇಟ್ ಆದೇವು. ಆದರೆ ಮಗುವಿಗೆ ಜ್ವರ ಶುರುವಾದಾಗ ಮಾತ್ರ ನಾನು ಕುಸಿದು ಹೋಗಿದ್ದೆ. ನಾನು ಮನೆಯಲ್ಲೇ ಇದ್ದರೂ ನನ್ನ ಮಗುವನ್ನು ಎತ್ತಿಕೊಳ್ಳಲಾಗದ, ಸಂತೈಸಲಾದ ಸ್ಥಿತಿಯಲ್ಲಿದ್ದೆ. ನನ್ನ ಕೈಯಲ್ಲೇ ಔಷಧಿ ಕುಡಿಯದ ಮಗು ಇನ್ನು ಪತಿಯ ಕೈಯಿಂದ ಔಷಧಿ ಕುಡಿಯೋದು ಕಷ್ಟವಾಗಿತ್ತು. ಹೀಗಾಗಿ ಏನು ಮಾಡಬೇಕೆಂಬುದ ಅರ್ಥವಾಗದೇ ಸೋತು ಹೋಗಿದ್ದೆ.

https://www.instagram.com/tv/COSA5TFpuYp/?igshid=1dttwbdbo1oio

ಬಳಿಕ ವೈದ್ಯರ ಸಲಹೆಯಂತೆ ನಾನೇ ಗ್ಲೌಸ್, ಮಾಸ್ಕ್ ಧರಿಸಿ ಮಗುವಿಗೆ ಔಷಧಿ ನೀಡಿದೆ. 10 ದಿನಗಳಲ್ಲಿ ನನಗೆ ರೋಗಲಕ್ಷಣಗಳು ಕಡಿಮೆಯಾಯಿತು. ಬಳಿಕ ಚೇತರಿಸಿಕೊಂಡೆ. ಆದರೆ ಒಂದು ವಾರ ಮಾತ್ರ ಕೊರೋನಾ ತುಂಬ ಕಾಡಿಸಿತು. ಅಪ್ಪ ಊರಿಂದ ಪೋನ್ ಮಾಡಿದರೇ ಮಾತನಾಡಲು ಕಷ್ಟವಾಗುವಷ್ಟು ಉಸಿರು ಹಿಡಿಯುತ್ತಿತ್ತು.

ಹೀಗಾಗಿ ಕೊರೋನಾ ಎರಡನೇ ಅಲೆ ಅಷ್ಟು ಸುಲಭವಾಗಿಲ್ಲ.ಎಲ್ಲರೂ ಅಗತ್ಯ ಮುನ್ನಚ್ಚರಿಕೆ ವಹಿಸಿ ಎಂದು ನಟಿ ಶ್ವೇತಾ ಚೆಂಗಪ್ಪ ಮನವಿ ಮಾಡಿಕೊಂಡಿದ್ದಾರೆ. ಇನ್ ಸ್ಟಾಗ್ರಾಂ ಲೈವ್ ನಲ್ಲಿ ಮಾತನಾಡಿದ ಶ್ವೇತಾ ತಮ್ಮ ಕರಾಳ ಅನುಭವ ವಿವರಿಸಿ ಎಚ್ಚರಿಕೆ ವಹಿಸಿ ಎಂದು ಮತ್ತೆ ಮತ್ತೆ ಮನವಿ ಮಾಡಿದ್ದಾರೆ.  

RELATED ARTICLES

Most Popular