ಸ್ಥಳೀಯ ಸಂಸ್ಥೆ ಚುನಾವಣೆ : 6 ರಲ್ಲಿ ಗೆದ್ದ ಕಾಂಗ್ರೆಸ್, ಮುಗ್ಗರಿಸಿದ ಬಿಜೆಪಿ, 2 ಸ್ಥಾನ ಉಳಿಸಿಕೊಂಡ ಜೆಡಿಎಸ್

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೊಂಕಿನ ಆರ್ಭಟದ ನಡುವಲ್ಲೇ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ. 10ರ ಪೈಕಿ 6 ಸ್ಥಳೀಯ ಸಂಸ್ಥೆಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಗೆದ್ದು ಬೀಗಿದೆ.

ಆಡಳಿತ ರೂಢ ಬಿಜೆಪಿ ಸರಕಾರದ‌ ಆತಂರಿಕ ಕಚ್ಚಾಟ, ಸಚಿವರು, ಶಾಸಕರ ನಡುವೆ ಸಮನ್ವಯದ ಕೊರತೆ,‌ ಭ್ರಷ್ಟಾರ, ಕೊರೊನಾ ನಿರ್ವಹಣೆಯಲ್ಲಿ ವಿಫಲವಾಗಿರೋದು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೇಲೆ ನೇರ ಹೊಡೆತ ಬಿದ್ದಂತಿದೆ‌.

ಬಳ್ಳಾರಿ‌ ಮಹಾನಗರ ಪಾಲಿಕೆ, ರಾಮನಗರ, ಭದ್ರಾವತಿ ನಗರಸಭೆ, ತೀರ್ಥಹಳ್ಳಿ ಪುರಸಭೆ, ಬೇಲೂರು‌ ಮತ್ತು ಗುಡಿಬಂಡೆ ಪಟ್ಟಣ ಪಂಚಾಯತ್ ಗಳಲ್ಲಿ ಅಧಿಕಾರದ ಚುಕ್ಕಾಣಿ ಹೊಡಿಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಚನ್ನಪಟ್ಟಣ, ವಿಜಯಪುರದಲ್ಲಿ ಜೆಡಿಎಸ್ ಗೆಲುವು ಸಾಧಿಸಿದ್ದರೆ, ಮಡಿಕೇರಿಯಲ್ಲಿ ಮಾತ್ರವೇ ಬಿಜೆಪಿ ಗೆಲುವು ಕಂಡಿದೆ.

ಬಿಜೆಪಿಯ ಭದ್ರಕೋಟೆಯನ್ನೇ ಈ ಬಾರಿ ಕಾಂಗ್ರೆಸ್ ಧೂಳಿಪಟ ಮಾಡಿದಂತಿದೆ. ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ರೆಡ್ಡಿ ಹಾಗೂ ಶ್ರೀರಾಮುಲು ಅವರಿಗೆ ತೀವ್ರ ಮುಖಭಂಗ ಉಂಟಾಗಿದೆ. ಮಡಿಕೇರಿಯನ್ನು ಹೊರತು ಪಡಿಸಿದ್ರೆ ಉಳಿದ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಗೆಲುವು ಕಂಡಿರುವುದು ಕಾರ್ಯಕರ್ತರಿಗೆ ಹೊಸ ಉತ್ಸಾಹವನ್ನು ನೀಡಿದೆ.

Comments are closed.