ಕೋಲ್ಕತ್ತಾ: ಹೃದಯ ಸಂಬಂಧಿ ಕಾಯಿಲೆಯಿಂದ ದೂರ ಇರಲು ಹಾಗೂ ಉತ್ತಮ ಆರೋಗ್ಯಕ್ಕಾಗಿ ಬಳಸಿ ಫಾರ್ಚೂನ್ ರೈಸ್ ಬ್ರಾನ್ ಕುಕ್ಕಿಂಗ್ ಆಯಿಲ್ ಎನ್ನುತ್ತಿದ್ದ ಸೌರವ್ ಗಂಗೂಲಿ ಇನ್ಮುಂದೆ ತೆರೆ ಮೇಲೆ ಕಾಣೋದಿಲ್ಲ. ಕಾರಣ ಹಾರ್ಟ್ ಅಟ್ಯಾಕ್.

ಬಿಸಿಸಿಐ ಅಧ್ಯಕ್ಷ ಹಾಗೂ ಮಾಜಿ ಕ್ರಿಕೇಟಿಗ ಸೌರವ್ ಗಂಗೂಲಿ ಮೊನ್ನೆ ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ವುಡ್ ಲ್ಯಾಂಡ್ಸ್ ಆಸ್ಪತ್ರೆ ಸೇರಿದ್ದು ಈಗ ಹಳೆ ಸುದ್ದಿ.

ಸಧ್ಯ ಕರ್ನಾಟಕದ ಡಾಕ್ಟರ್ ದೇವಿ ಶೆಟ್ಟಿ ಮುಂದಾಳತ್ವದಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿರುವ ಗಂಗೂಲಿ ಹೃದಯಾಘಾತದ ಎಫೆಕ್ಟ್ ಅವರ ಜಾಹೀರಾತಿನ ಮೇಲಾಗಿದೆ.

ಹೃದಯಸಂಬಂಧಿ ಕಾಯಿಲೆಯಿಂದ ದೂರ ಇಡಲು ಬಳಸಿ ಫಾರ್ಚೂನ್ ಆಯಿಲ್ ಎನ್ನುತ್ತಿದ್ದ ಗಂಗೂಲಿಯೇ ಹಾರ್ಟ್ ಅಟ್ಯಾಕ್ ಗೆ ಒಳಗಾಗುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಈ ಜಾಹಿರಾತು ಸಖತ್ ಟ್ರೋಲ್ ಆಗಿತ್ತು.

ಜನರು ಗಂಗೂಲಿ ಜಾಹೀರಾತು ಮುಂದಿಟ್ಟುಕೊಂಡು ಎಣ್ಣೆಯ ಗುಣಮಟ್ಟವನ್ನು ಟೀಕಿಸಲಾರಂಭಿಸಿದ್ದರು. ಈ ಬೆಳವಣಿಗೆಯಿಂದ ಬೇಸತ್ತ ಸಂಸ್ಥೆ ತನ್ನ ಗಂಗೂಲಿ ಪಾಲ್ಗೊಂಡ ಫಾರ್ಚೂನ್ ಕುಕ್ಕಿಂಗ್ ಆಯಿಲ್ ನ ಜಾಹೀರಾತು ಹಿಂಪಡೆದಿದೆ.
ಕೆಲವರು ಗಂಗೂಲಿಯವರೇ ದುಡ್ಡಿಗಾಗಿ ಜಾಹೀರಾತು ಒಪ್ಪಿಕೊಳ್ಳುವುದಲ್ಲ. ಗುಣಮಟ್ಟದ ಬಗ್ಗೆಯೂ ಅರಿವಿರಬೇಕು ಎಂದು ದಾದಾನನ್ನು ಕುಟುಕಿದ್ದರೇ,ಇನ್ನು ಹಲವರು ಗಂಗೂಲಿಯವರೇ ಈಗ ಹೇಳಿ ಯಾವ ಎಣ್ಣೆ ಬಳಸಬೇಕು ಎಂದಿದ್ದಾರೆ.

ಸೋಷಿಯಲ್ ಮೀಡಿಯಾದ ಟೀಕೆಯಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ಅದಾನಿ ಸಂಸ್ಥೆ ಜಾಹೀರಾತು ಹಿಂಪಡೆದಿರುವುದಾಗಿ ಘೋಷಿಸಿದ್ದು, ತಮ್ಮ ಕ್ರಿಯೇಟಿವ್ ತಂಡ ಹೊಸ ಜಾಹೀರಾತು ಸಿದ್ದಪಡಿಸಲಿದೆ ಎಂದಿದ್ದಾರೆ.