ರಕ್ಷಾ ಬಡಾಮನೆ
ದಾಸವಾಳದ ಗಿಡವನ್ನು ಸಾಮಾನ್ಯವಾಗಿ ಬೇಲಿಯ ಗಿಡವಾಗಿ ಬೆಳೆಸುತ್ತಾರೆ. ದಾಸವಾಳದ ಹೂವು ಅಲಂಕಾರಕ್ಕೋ ದೇವರ ಪೂಜೆಗೋ ಬಳಕೆಯಾಗುತ್ತಿದೆ. ಆದರೆ ಈ ದಾಸವಾಳ ಹೂವು ನಮ್ಮ ಆರೋಗ್ಯದಲ್ಲಿ ಎಂತಹ ಚಮತ್ಕಾರ ಮಾಡುತ್ತೇ ಅನ್ನೋದು ನಿಮಗೆ ಗೊತ್ತಾ. ದಾಸವಾಳದ ಹೂವಿನಲ್ಲಿರೊ ಔಷಧೀಯ ಗುಣ ಅಪಾರ. ನಮ್ಮ ದೇಶದ ಎಲ್ಲಾ ವಾತಾರಣದಲ್ಲಿಯೂ ಬೆಳೆಯುವ ದಾಸವಾಳದ ಹೂವು, ಹೃದಯ, ಕೂದಲು, ರಕ್ತ ಹೀನತೆಗೆ ರಾಮಬಾಣ.

ಹೃದಯದ ಆರೋಗ್ಯಕ್ಕೆ ದಾಸವಾಳದ ಹೂವು ಅತ್ಯುತ್ತಮ, ದಾಸವಾಳದ ಹೂವಿನಿಂದ ಪ್ರತ್ಯೇಕಿಸಿದ ದ್ರವನ್ನು ಸೇವನೆ ಮಾಡುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಬಹುದು. ದಾಸವಾಳದ ಹೂವನ್ನು ನೀರಿನೊಂದಿಗೆ ಕುದಿಸಿ, ತಣಿಸಿ ಸೋಸಿದ ನೀರನ್ನು ಕುದಿಯುವುದರಿಂದ ರಕ್ತದೊತ್ತಡವನ್ನು ನಿವಾರಿಸಬಹುದು.

ದಾಸವಾಳದ ಸೇವನೆಯಿಂದ ರಕ್ತದೊತ್ತಡ ಮಾತ್ರವಲ್ಲ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೂ ಸಹಕಾರಿಯಾಗಿದೆ. ಒಣಗಿದ ದಾಸವಾಳದ ಹೂವಿನ ಪಕಳೆಗಳ ಒಂದು ಚಮಚ ಪುಡಿಯನ್ನು ನಿತ್ಯವೂ ಸೇವಿಸುವುದರಿಂದ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಗಣನೀಯವಾಗಿ ಕಡಿಮೆಯಾಗುತ್ತದೆ. ಹೀಗಾಗಿ ಹೃದಯ ಸಂಬಂಧಿ ಕಾಯಿಲೆಯಿಂದ ದೂರವಿರುವುದರ ಜೊತೆಗೆ ಹೃದಯ ಸ್ತಂಭನವನ್ನೂ ಕಡಿಮೆ ಮಾಡಲು ಸಹಕಾರಿಯಾಗಿದೆ.

ದಾಸವಾಳದ ಹೂವಿನಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಸ್ಥೂಲಕಾಯವನ್ನು ಕರಗಿಸುತ್ತವೆ. ಹೀಗಾಗಿ ದಾಸವಾಳದ ಹೂವಿನಿಂದ ತಯಾರಿಸುವ ನೀರನ್ನು ನಿರಂತರವಾಗಿ ಸೇವಿಸಿದ್ರೆ ಸ್ಥೂಲಕಾಯದಿಂದ ಮುಕ್ತಿ ಪಡೆಯಲು ಹೆಚ್ಚು ಸಹಕಾರಿಯಾಗುತ್ತದೆ.

ಶರೀರದ ತಾಪಮಾನ ಏರಿಕೆ ಆರೋಗ್ಯದ ಮೇಲೆ ಗಂಭೀರವಾದ ಪರಿಣಾಮವನ್ನು ಬೀರುತ್ತದೆ. ಶರೀರದಲ್ಲಿ ತಾಪಮಾನ ಏರಿಕಯಾದಾಗ ದಾಸವಾಳದ ಹೂವಿನ ನೀರನ್ನು ಸೇವನೆ ಮಾಡುವುದರಿಂದ ಆರೋಗ್ಯವಂತರಾಗಬಹುದು. ಮಾತ್ರವಲ್ಲ ವಿಪರೀತ ಜ್ವರವಿದ್ದಾಗ ಹೂವಿನ ತಾಜಾ ಪಕಳೆಗಳನ್ನು ಕುದಿಸಿ ತಣಿಸಿ ಸೋಸಿದ ನೀರು ಕುಡಿದ್ರೆ ತಕ್ಷಣ ಜ್ವರ ಗುಣಮುಖವಾಗುತ್ತೆ. ಮಾತ್ರವಲ್ಲ ಶರೀರಕ್ಕೆ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ.

ಮಧುಮೇಹ ನಿಯಂತ್ರಣಕ್ಕೂ ದಾಸವಾಳದ ಹೂವು ಉಪಯುಕ್ತ. ಬಯೋಕೆಮಿಕಲ್ ಆಂಡ್ ಬಯೋಫಿಸಿಕಲ್ ರಿಸರ್ಚ್ ಕಮ್ಯೂನಿಕೇಶನ್ ನಡೆಸಿದ ಅಧ್ಯಯನದ ಪ್ರಕಾರ ದಾಸವಾಳದಿಂದ ತಯಾರಿಸುವ ಔಚಧಿ ನಮ್ಮ ದೇಹದಲ್ಲಿರುವ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ. ಮಾತ್ರವಲ್ಲ ಮಧುಮೇಹ ನಿಯಂತ್ರಣಕ್ಕೂ ಸಹಕಾರಿಯಾಗಿದೆ. ದಾಸವಾಳದ ಹೂವಿನಲ್ಲಿರುವ ಫೆರುಲಿಕ್ ಆಮ್ಲ ಮಧುಮೇಹವನ್ನು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ.

ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಕೆಂಪು ದಾಸವಾಳ ಹೂವಿನ ದಳಗಳನ್ನು ಒಳಗಿಸಿ ಚೂರ್ಣದ ರೂಪದಲ್ಲಿ ಸೇವಿಸುತ್ತಾ ಬರುವ ಮೂಲಕ ರಕ್ತ ಶುದ್ಧಿಯಾಗುತ್ತದೆ ಹಾಗೂ ರಕ್ತದಲ್ಲಿ ಕಬ್ಬಿಣದ ಅಂಶ ಹೆಚ್ಚುತ್ತದೆ. ಇದೇ ಕಾರಣಕ್ಕೆ ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಈ ಹೂವು ಉತ್ತಮವಾಗಿದೆ. ಪೂರ್ವ ದೇಶಗಳಲ್ಲಿ ಸಿಹಿತಿಂಡಿಗಳ ಮೇಲೆ ದಾಸವಾಳ ಹೂವಿನ ದಳಗಳನ್ನು ಕಲಾತ್ಮಕವಾಗಿ ಅಲಂಕರಿಸಿ ಸಿಹಿಯ ಜೊತೆಯಲ್ಲಿಯೇ ಸೇವಿಸುವ ಸಂಪ್ರದಾಯವಿದೆ.

ದಾಸವಾಳದ ಹೂವು ತಲೆಕೂದಲಿನ ಸೌಂದರ್ಯವನ್ನೂ ಹೆಚ್ಚಿಸುತ್ತದೆ. ಕೂದಲಿನ ಪೋಷಣೆಗೆ ತೈಲಗಳಲ್ಲಿ ಸಾಮಾನ್ಯವಾಗಿ ದಾಸವಾಳದ ಹೂವನ್ನು ಬಳಕೆ ಮಾಡಲಾಗುತ್ತದೆ. ಬಿಳಿ ಕೂದಲಿನ ಸಮಸ್ಯೆಗೆ ದಾಸವಾಳದ ಹೂವು ರಾಮಬಾಣವಿದ್ದಂತೆ. ದಾಸವಾಳ ಹೂವಿನ ದಳವನ್ನು ನೀರಿನಲ್ಲಿ ಹಾಕಿ ಸುಮಾರು 20 ನಿಮಿಷಗಳ ಕಾಲ ಕಾಯಿಸಬೇಕು. ನಂತರ ಕಾದ ದಾಸವಾಳದ ಹೂವಿನ ದಳಗಳನ್ನು ಪೇಸ್ಟ್ ಮಾಡಿಕೊಂಡು, ತಣ್ಣಗಿನ ದಾಸವಾಳದ ಪೇಸ್ಟ್ ನ್ನು ಕೂದಲಿನ ಬುಡಕ್ಕೆ ಲೇಪಿಸಿ 30 ನಿಮಿಷಗಳ ನಂತರ ತೊಳೆಯಬೇಕು. ನಂತರ ದಾಸವಾದ ದಳಗಳನ್ನು ನೆನೆಸಿಟ್ಟ ಎಣ್ಣೆಯನ್ನು ಕೂದಲಿಗೆ ಹಚ್ಚುವುದರಿಂದ ಉತ್ತಮ ಫಲಿತಾಂಶ ಲಭ್ಯವಾಗುತ್ತದೆ. ದಾಸವಾಳದ ಹೂವನ್ನು ಶಾಂಪೂಗಳಲ್ಲಿಯೂ ಬಳಸಲಾಗುತ್ತದೆ.