ಗೋಕರ್ಣ : ಸಮುದ್ರ ತೀರದಲ್ಲಿ ಆಟವಾಡುತ್ತಿರುವ ವೇಳೆಯಲ್ಲಿ ಮೂವರು ಸಮುದ್ರ ಪಾಲಾಗಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮೇನ್ ಬೀಚ್ ನಲ್ಲಿ ನಡೆದಿದೆ.
ಕೊಳ್ಳೆಗಾಲ ಮೂಲದ ಸುಮಾ ಸಿದ್ದರಾಜು (21 ವರ್ಷ) , ತಿಪ್ಪೇಶ್ ನಾಯಕ್ (20 ವರ್ಷ) ಹಾಗೂ ರವಿ (19 ವರ್ಷ) ಎಂಬವರೇ ಮೃತ ದುರ್ದೈವಿಗಳು.
ಒಟ್ಟು 17 ಮಂದಿ ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಸಮುದ್ರ ತೀರದಲ್ಲಿ ಒಂದಿಷ್ಟು ಹೊತ್ತು ವಿಹರಿಸಿದ್ದ ಆಟವಾಡುತ್ತಿತ್ತು. ಈ ವೇಳೆಯಲ್ಲಿ ಸಮುದ್ರದಲ್ಲಿನ ಆಳವನ್ನು ಅರಿಯದೇ ಮೂವರು ನೀರು ಪಾಲಾಗಿದ್ದಾರೆ. ಘಟನಾ ಸ್ಥಳಕ್ಕೆ ಗೋಕರ್ಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆಯುತ್ತಿದ್ದಾರೆ.