ಬಸ್ಸಿನಲ್ಲಿ ಯುವತಿಗೆ ದೈಹಿಕ ಕಿರುಕುಳ : ಪೊಲೀಸ್ ಆಯುಕ್ತರ ಎದುರಲ್ಲೇ ಕಾಮುಕನಿಗೆ ಯುವತಿಯಿಂದ ಕಪಾಳಮೋಕ್ಷ

ಮಂಗಳೂರು : ಖಾಸಗಿ ಬಸ್ಸಿನಲ್ಲಿ ಲೈಂಗಿಕ ಕಿರುಕುಳ ನೀಡಿದ್ದ ಕಾಮುಕನಿಗೆ ಪೊಲೀಸ್ ಕಮಿಷನರ್ ಎದುರಲ್ಲೇ ಯುವತಿ ಕಪಾಳಮೋಕ್ಷ ಮಾಡಿರುವ ಘಟನೆ ಮಂಗಳೂರಲ್ಲಿ ನಡೆದಿದೆ.

ಕಳೆದ ಕೆಲ ದಿನಗಳ ಹಿಂದೆಯಷ್ಟೇ ಯುವತಿಯೋರ್ವರು ದೇರಳಕಟ್ಟೆಯಿಂದ ಮಂಗಳೂರಿಗೆ ಖಾಸಗಿ ಸಿಟಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆಯಲ್ಲಿ ಕಾಮುಕ ಕಾಸರಗೋಡು ನಿವಾಸಿ ಹುಸೈನ್ ಎಂಬಾತ ಯುವತಿಗೆ ಲೈಂಗಿಕ ಕಿರುಕುಳ ನೀಡೋದಕ್ಕೆ ಶುರುಮಾಡಿದ್ದ. ಯುವತಿ ವಿರೋಧಿಸಿದ್ದು ಮಾತ್ರವಲ್ಲದೇ ಜೋರಾಗಿ ಕೂಗಿಕೊಂಡಿದ್ದಾರೆ. ಆದರೆ ಬಸ್ಸಿನಲ್ಲಿದ್ದ ಚಾಲಕ ಹಾಗೂ ನಿರ್ವಾಹಕರು ಯುವತಿಯ ಬೆಂಬಲಕ್ಕೆ ಬಂದಿರಲಿಲ್ಲ.

https://kannada.newsnext.live/sandalwood-telugu-movie-singer-sanchith-hegde-movie-shruthihasan-liplock/

ನಂತರ ಪರ್ಸಿನಿಂದ ಯುವತಿಯ ಮೊಬೈಲ್ ಹೊರತೆಗೆದು ಕಾಮುಕ ಹುಸೈನ್ ಪೋಟೋವನ್ನು ತೆಗೆಯಲು ಮುಂದಾಗಿದ್ದಾರೆ. ಈ ವೇಳೆಯಲ್ಲಿ ಕಾಮುಕ ಮಾಸ್ಕ್ ತೆಗೆದು ಪೋಟೋಕ್ಕೆ ಪೋಸ್ ಕೊಟ್ಟಿದ್ದ. ಮಾತ್ರವಲ್ಲದೇ ಯುವತಿಗೆ ಥ್ಯಾಂಕ್ಸ್ ಎಂದು ಹೇಳಿದ್ದಾನೆ. ಮನೆಗೆ ಬಂದ ಯುವತಿ ಕಾಮುಕನ ಪೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ತನಗೆ ಬಸ್ಸಿನಲ್ಲಿ ಆದ ಕಹಿ ಘಟನೆಯನ್ನು ಬರೆದುಕೊಂಡಿದ್ದರು. ಅಲ್ಲದೇ ಮಂಗಳೂರಿನ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರು ಕಾಮುಕನನ್ನು ಬಂಧಿಸಿ ಇಂದು ನಗರ ಪೊಲೀಸ್ ಆಯುಕ್ತರಾದ ಎನ್.ಶಶಿಕುಮಾರ್ ಸುದ್ದಿಗೋಷ್ಠಿಯನ್ನು ಕರೆದಿದ್ದರು.
ಈ ವೇಳೆಯಲ್ಲಿ ಕಾಮುಕನ್ನು ಸುದ್ದಿಗೋಷ್ಠಿಗೆ ಪೊಲೀಸರು ಕರೆತರುತ್ತಿದ್ದಂತೆಯೇ ಯುವತಿ ಕಾಮುಕನಿಗೆ ಕಮಿಷನರ್ ಮುಂಭಾಗ ದಲ್ಲಿಯೇ ಕಪಾಳಮೋಕ್ಷ ಮಾಡಿದ್ದಾರೆ. ಖಾಸಗಿ ಬಸ್ಸಿನಲ್ಲಿ ಪ್ರಯಾಣಿಸುವ ಮಹಿಳೆಯರಿಗೆ ಬಸ್ಸಿನವರೇ ರಕ್ಷಣೆ ನೀಡಬೇಕು. ಆದರೆ ಮಂಗಳೂರಿನಲ್ಲಿ ಹೀಗೆ ಆಗಿಲ್ಲ. ಸಾಕಷ್ಟು ಮಹಿಳೆಯರಿಗೆ ಇಂತಹದ್ದೇ ಅನುಭವ ಆಗಿರುತ್ತೆ. ಹೀಗಾಗಿ ಕಿರುಕುಳಕ್ಕೆ ಒಳಗಾದವರು ಧೈರ್ಯವಾಗಿ ಪೊಲೀಸರಿಗೆ ದೂರು ನೀಡಬೇಕೆಂದು ಯುವತಿ ಮನವಿ ಮಾಡಿಕೊಂಡಿದ್ದಾರೆ.

Comments are closed.