Dia mirza:ಮದುವೆಯಾದ ಐದು ತಿಂಗಳಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ದಿಯಾ ಮಿರ್ಜಾ…! ಬೇಬಿ ಪೋಟೋ ವೈರಲ್…!!

ಬಾಲಿವುಡ್ ನಟಿ ದಿಯಾ ಮಿರ್ಜಾ  ಮದುವೆಯಾದ ಐದೇ ತಿಂಗಳಿಗೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದು, ತಮ್ಮ ಪುಟ್ಟ ಕಂದನ ಪೋಟೋ ಹಂಚಿಕೊಂಡು ಸಪ್ರೈಸ್ ನೀಡಿದ್ದಾರೆ.

ಬಾಲಿವುಡ್ ನಟಿ ದಿಯಾ ಮಿರ್ಜಾ ಕಳೆದ ಫೆಬ್ರವರಿಯಲ್ಲಿ ತಮ್ಮ ಸ್ನೇಹಿತ ಹಾಗೂ ಉದ್ಯಮಿ ವೈಭವ್ ರೇಖಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯಾಗಿ ಹನಿಮೂನ್ ಗೆ ಮಾಲ್ಡೀವ್ಸ್ ಗೆ ಹಾರಿದ್ದ ದಿಯಾ ಮಿರ್ಜಾ ಅಲ್ಲೇ ತಮ್ಮ ಬೇಬಿ ಬಂಪ್ ಜೊತೆ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದರು.

ಈ ವೇಳೆ ಸಾಕಷ್ಟು ಟ್ರೋಲ್ ಆಗಿದ್ದ ನಟಿ ದಿಯಾ ಮಿರ್ಜಾ  ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರಶ್ನೆಗಳನ್ನು ಎದುರಿಸಿದ್ದರು. ಈ ವೇಳೆ ಕಮೆಂಟ್ ಗಳಿಗೆ ನೇರವಾಗಿ ಉತ್ತರಿಸಿದ್ದ ದಿಯಾ ಮಿರ್ಜಾ. ನಾನು  ತಾಯಿಯಾಗುತ್ತಿದ್ದೇನೆ ಎಂಬ ಕಾರಣಕ್ಕೆ ಮದುವೆಯಾಗಲಿಲ್ಲ. ಮದುವೆಯ ಸಿದ್ಧತೆಯಲ್ಲಿದ್ದ ತಾಯಿಯಾಗುತ್ತಿರುವ ಸಂಗತಿ ಗೊತ್ತಾಯಿತು ಎಂದಿದ್ದರು.

ಆದರೆ ವೈದ್ಯಕೀಯ ಕಾರಣಗಳಿಗಾಗಿ ನಾನು ತಾಯಿಯಾಗುತ್ತಿರುವುದನ್ನು ಘೋಷಿಸುವುದು ವಿಳಂಬವಾಯಿತು. ವೈದ್ಯರ ಸೂಚನೆ ಮೇರೆಗೆ ಇದನ್ನು ಗುಟ್ಟಾಗಿ ಕಾಪಾಡಿಕೊಂಡಿದ್ದೆ. ತಾಯಿಯಾಗುತ್ತಿರುವ ಕಾರಣಕ್ಕೆ ಮದುವೆಯಾಗುವ ಸ್ಥಿತಿ ಇರಲಿಲ್ಲ ಎಂದಿದ್ದರು.

ಮದುವೆಯಾದ ಮೂರೇ ತಿಂಗಳಿಗೆ ದಿಯಾ ಮಿರ್ಜಾ ವೈದ್ಯಕೀಯ ಸಮಸ್ಯೆಗಳಿಂದ ಮಗುವಿಗೆ ಜನ್ಮ ನೀಡಿದ್ದರು. ಮೇ 14 ರಂದೇ ದಿಯಾ ಮಿರ್ಜಾ ಗಂಡುಮಗುವಿಗೆ ಜನ್ಮನೀಡಿದ್ದು, ಅವಧಿಗೂ ಮೊದಲೇ ಜನಿಸಿದ ಮಗುವನ್ನು ವೈದ್ಯರು ಹಾಗೂ ದಾದಿಯರು ತುಂಬ ಜೋಪಾನದಿಂದ ನೋಡಿಕೊಂಡಿದ್ದಾರೆ ಎಂದಿರುವ ದಿಯಾ ಆಸ್ಪತ್ರೆ ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾರೆ.

ಮಗನಿಗೆ ದಿಯಾ ಮಿರ್ಜ ಅವ್ಯಾನ್ ವೈಭವ್ ರೇಖಿ ಎಂದು ದಿಯಾ ನಾಮಕರಣ ಮಾಡಿದ್ದು, ಜುಲೈನಲ್ಲಿ ಅಭಿಮಾನಿಗಳಿಗಾಗಿ ಪುಟ್ಟ ಕಂದನ ಕೈ ಪೋಟೋವನ್ನು ದಿಯಾ ಹಂಚಿಕೊಂಡಿದ್ದಾರೆ. ನಟಿ ದಿಯಾ ಹಾಗೂ ಉದ್ಯಮಿ ವೈಭವ್ ರೇಖಿ ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ವೈಭವ್ ರೇಖಿಗೆ ಮೊದಲ ಪತ್ನಿಯಿಂದ ಒಬ್ಬಳು ಮಗಳಿದ್ದಾಳೆ.  

Comments are closed.