Bus Blast : ಚಲಿಸುತ್ತಿದ್ದ ಬಸ್ಸಿನಲ್ಲಿ ಸ್ಪೋಟ : 10 ಮಂದಿ ಸಾವು, ಹಲವರು ಗಂಭೀರ

ನವದೆಹಲಿ : ಚಲಿಸುತ್ತಿದ್ದ ಬಸ್ಸಿನಲ್ಲಿ ಸ್ಪೋಟ ಸಂಭವಿಸಿ ಚೀನಾದ 6 ಇಂಜಿನಿಯರ್ಸ್‌ ಸೇರಿದಂತೆ ಕನಿಷ್ಠ 10 ಜನರು ಸಾವನ್ನಪ್ಪಿರು ಘಟನೆ ಉತ್ತರ ಪಾಕಿಸ್ತಾನದಲ್ಲಿ ನಡೆದಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಏರ್‌ ಅಂಬ್ಯುಲೆನ್ಸ್‌ ಮೂಲಕ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ.

ದಾಸು ಜಲವಿದ್ಯುತ್ ಯೋಜನೆಯಲ್ಲಿ ದಾಸು ಅಣೆಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದ ಚೀನಾದ ಸುಮಾರು 30 ಇಂಜಿನಿಯರ್‌ ಹಾಗೂ ಕಾರ್ಮಿಕರನ್ನು ಹೊತ್ತು ಪ್ರಯಾಣಿಸುತ್ತಿತ್ತು. ಈ ವೇಳೆಯಲ್ಲಿ ಬಸ್ಸನ್ನು ಗುರಿಯಾಗಿಸಿಟ್ಟುಕೊಂಡು ಐಇಡಿ ಸ್ಫೋಟ ನಡೆಸಲಾಗಿದೆ. ಘಟನೆಯಲ್ಲಿ ಪಾಕಿಸ್ತಾನದ ಸೈನಿಕರು ಹಾಗೂ ಚೀನಾದ ಇಂಜಿಯರ್ಸ್‌ ಸೇರಿದಂತೆ ಒಟ್ಟು 10 ಮಂದಿ ಸಾವನ್ನಪ್ಪಿದ್ದಾರೆ.

ಬಸ್ಸಿನಲ್ಲಿದ್ದ ಹಲವು ಸೈನಿಕರು ಹಾಗೂ ಇಂಜಿನಿಯರ್‌ ಗಳು ಗಾಯಗೊಂಡಿದ್ದಾರೆ. ಈ ಪೈಕಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಪಾಕಿಸ್ತಾನದ ರಾಯಿಟರ್ಸ್‌ ವರದಿ ಮಾಡಿದೆ. ಅಲ್ಲದೇ ಸ್ಪೋಟಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸುವಂತೆ ಚೀನಾ ಪಾಕಿಸ್ತಾನವನ್ನು ಒತ್ತಾಯಿಸಿದೆ.

ಇನ್ನು ಬಸ್ಸಿನಲ್ಲಿ ನಡೆದಿರುವ ಸ್ಪೋಟ ಹೇಗೆ ಸಂಬಂಧಿಸಿದಂತೆ ಅನ್ನೋದು ಇನ್ನೂ ಪತ್ತೆಯಾಗಿಲ್ಲ ರಸ್ತೆಯಲ್ಲಿ ಸಾಧನವನ್ನಿಟ್ಟು ಸ್ಪೋಟ ಮಾಡಲಾಗಿದೆಯಾ ಇಲ್ಲಾ, ಬಸ್ಸಿನಲ್ಲಿಯೇ ಸ್ಪೋಟಕ ಇರಿಸಲಾಗಿತ್ತಾ ಅನ್ನೋ ಬಗ್ಗೆಯೂ ತನಿಖೆ ನಡೆಯುತ್ತಿದೆ. ಬಸ್‌ ಸ್ಪೋಟಗೊಂಡು ಕಂದಕಕ್ಕೆ ಉರುಳಿಬಿದಿದೆ. ಇದರಿಂದಾಗಿ ಹಾನಿಯ ಪ್ರಮಾಣ ಹೆಚ್ಚಳವಾಗಿದೆ. ಘಟನೆಯಲ್ಲಿ ಚೀನಾದ ಓರ್ವ ಇಂಜಿನಿಯರ್‌ ಹಾಗೂ ಪಾಕಿಸ್ತಾನದ ಓರ್ವ ಸೈನಿಕ ನಾಪತ್ತೆಯಾಗಿದ್ದಾರೆ.

ಬಸ್‌ ಸ್ಪೋಟದಲ್ಲಿ ಬದುಕಿ ಉಳಿದವರನ್ನು ರಕ್ಷಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಈಗಾಗಲೇ ಏರ್‌ ಅಂಬುಲೆನ್ಸ್‌ ಮೂಲಕ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ದಾಸು ಜಲವಿದ್ಯುತ್ ಯೋಜನೆಯ ಕಾಮಗಾರಿಯಲ್ಲಿ ಇವರೆಲ್ಲರೂ ಹಲವು ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿದ್ದರು ಎಂದು ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

Comments are closed.