- – ರಕ್ಷಾ ಬಡಾಮನೆ
ನಮ್ಮ ನಿತ್ಯದ ಆಹಾರ ಪದ್ದತಿಯಲ್ಲಿ ಮೊಟ್ಟೆ ಸಾಮಾನ್ಯ ಆಹಾರ. ಮಕ್ಕಳಿಂದ ಹಿಡಿದು ಇಳಿವಯಸ್ಸಿನವರಿಗೂ ಮೊಟ್ಟೆ ಉತ್ತಮ ಆಹಾರವೂ ಹೌದು.

ಆದ್ರೆ ಹೆಚ್ಚಿನ ಪ್ರಮಾಣದಲ್ಲಿ ಕೊಲೆಸ್ಟ್ರಾಲ್ ಇರೊದ್ರಿಂದ ಮೊಟ್ಟೆ ಸೇವಿಸಬಾರದು ಅನ್ನುತ್ತಾರೆ ಹಲವರು. ಇನ್ನು ಮೊಟ್ಟೆಯಲ್ಲಿ ಪ್ರೋಟಿನ್ ಅಂಶ ಹೆಚ್ಚಾಗಿದ್ದು, ಆರೋಗ್ಯಕ್ಕೆ ಉತ್ತಮ ಎನ್ನುತ್ತಾರೆ ಕೆಲವರು. ಈ ಗೊಂದಲದ ನಡುವೆಯೇ ಅಚ್ಚರಿಯ ವಿಷಯವೊಂದು ಹೊರಬಿದ್ದಿದ್ದು ಪ್ರತಿದಿನ ಮೊಟ್ಟೆ ಸೇವನೆಯಿಂದ ಮಧುಮೇಹ ದೂರ ಇಡಬಹುದು ಅನ್ನೋದು ಅಧ್ಯಯನದಿಂದ ತಿಳಿದುಬಂದಿದೆ.

ಮೊಟ್ಟೆ ಸೇವಿಸುತ್ತಿದ್ದ ಪುರುಷರ ರಕ್ತದ ಮಾದರಿಗಳನ್ನು ಟೈಪ್ -2 ಡಯಾಬಿಟಿಸ್ ನಿಂದ ಮುಕ್ತರಾಗಿರುವ ಪುರುಷರ ರಕ್ತದ ಮಾದರಿಯೊಂದಿಗೆ ಹೋಲಿಕೆ ಮಾಡಿದಾಗ ಸಕಾರಾತ್ಮಕ ಅಂಶ ಕಂಡುಬಂದಿದೆ.

ಪ್ರತಿದಿನ ಒಂದು ಮೊಟ್ಟೆ ಸೇವಿಸುವ ಹಾಗೂ ವಾರಕ್ಕೆ ಎರಡು ಮೊಟ್ಟೆ ಸೇವಿಸುವ ಹಾಗೂ ಟೈಪ್-2 ಡಯಾಬಿಟಿಸ್ ಇದ್ದು ಮೊಟ್ಟೆ ತೆಗೆದುಕೊಳ್ಳುವರು ಹಾಗೂ ಆರೋಗ್ಯಕರವಾಗಿ ಉಳಿದಿರುವ ನಾಲ್ಕು ಗುಂಪುಗಳ 239 ರಕ್ತದ ಮಾದರಿಗಳನ್ನು ಅಧ್ಯಯನ ನಡೆಸಲಾಗಿದೆ ಎಂದು ಮಾಲಿಕ್ಯೂಲರ್ ನ್ಯೂಟ್ರಿಷಿಯನ್ ಅಂಡ್ ಪುಡ್ ರಿಸರ್ಚ್ ಪ್ರಕಟಿಸಿದೆ. ಮೊಟ್ಟೆ ಸೇವನೆಯಿಂದ ಮಧುಮೇಹದಿಂದ ಉಂಟಾಗುವ ಅಪಾಯವನ್ನು ಕಡಿಮೆ ಮಾಡಬಹುದು ಎಂಬುದು ಅಧ್ಯಯನ ಹೇಳಿದೆ.