ಭಾನುವಾರ, ಏಪ್ರಿಲ್ 27, 2025
HomeBreakingManju-Divya: ಬಿಗ್ ಬಾಸ್ ನಲ್ಲಿ ವಿರಹ ಗೀತೆ….!ಮುನಿಸಿಕೊಂಡು ಮುಖ ತಿರುವಿ ಕೂತವ್ರೆ ಮಂಜು-ದಿವ್ಯಾ….!!

Manju-Divya: ಬಿಗ್ ಬಾಸ್ ನಲ್ಲಿ ವಿರಹ ಗೀತೆ….!ಮುನಿಸಿಕೊಂಡು ಮುಖ ತಿರುವಿ ಕೂತವ್ರೆ ಮಂಜು-ದಿವ್ಯಾ….!!

- Advertisement -

ಕೊರೋನಾ ಎರಡನೇ ಅಲೆ ಕಾರಣಕ್ಕೆ ಸ್ಥಗಿತಗೊಂಡಿದ್ದ ಬಿಗ್ ಬಾಸ್ ಮತ್ತೆ ಆರಂಭಗೊಂಡಿದೆ. ಆರಂಭವಾದ ಎಪಿಸೋಡ್ ನಲ್ಲೇ ಸಾಕಷ್ಟು ಸದ್ದು ಮಾಡಿದ ಬಿಗ್ ಬಾಸ್ ಮನೆಯಲ್ಲಿ ಎರಡನೇ ಪ್ರಣಯ ಜೋಡಿಗಳಾಗೋ ಮುನ್ಸೂಚನೆ ನೀಡಿದ್ದ ಮಂಜು ಹಾಗೂ ದಿವ್ಯಾ ಈಗ ನೀನೊಂದು ತೀರ ನಾನೊಂದು ತೀರ ಎಂದು ಹಾಡುತ್ತಿದ್ದಾರೆ.

ಬಿಗ್ ಬಾಸ್ ಸ್ಥಗಿತಗೊಳ್ಳುವಾಗ ಕಣದಲ್ಲಿದ್ದ 12 ಸ್ಪರ್ಧಿಗಳೊಂದಿಗೆ ಬಿಗ್ ಬಾಸ್ ಶೋ ಮತ್ತೆ ಆರಂಭಗೊಂಡಿದೆ. ಶೋ ಅರ್ಧಕ್ಕೆ ನಿಲ್ಲುವ ಮುನ್ನ ಅರವಿಂದ್ ಹಾಗೂ ದಿವ್ಯಾ ಪ್ರೇಮಪಕ್ಷಗಳಂತೆ ವಿಹರಿಸುತ್ತಿದ್ದರೇ, ಅರವಿಂದ್ ಹಾಗೂ ದಿವ್ಯಾ ಕೂಡ ಪ್ರಯಣಗೀತೆ ಹಾಡೋ ಮುನ್ಸೂಚನೆ ನೀಡಿದ್ದರು.

ಆದರೆ ಕೊರೋನಾ ಬ್ರೇಕ್ ಬಳಿಕ ಆರಂಭಗೊಂಡಿರೋ ಬಿಗ್ ಬಾಸ್ ಮನೆಯಲ್ಲಿ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ವಿಭಿನ್ನವಾಗಿ ಆಟ ಆಡುತ್ತಿದ್ದು, ಪ್ರಣಯ ಗೀತೆ ಬದಲು ಪರಸ್ಪರ ಅಂತರ ಕಾಯ್ದುಕೊಂಡು ಎಷ್ಟಕ್ಕೆ ಬೇಕೋ ಅಷ್ಟು ಮಾತನಾಡಿಕೊಳ್ಳುತ್ತಿದ್ದಾರೆ.

ಕಣದಲ್ಲಿರೋ ಸ್ಪರ್ಧಿಗಳನ್ನು ಎರಡು ತಂಡ ಮಾಡಿದ ಬಿಗ್ ಬಾಸ್ ವಿವಿಧ ಟಾಸ್ಕ್ ನೀಡಿದೆ. ಈ ಟಾಸ್ಕ್ ವೇಳೆ ದಿವ್ಯಾ ಸುರೇಶ್ ಕಾಲಿಗೆ ಗಾಯವಾಗಿದೆ. ತಕ್ಷಣ ವೈದ್ಯರು ಬಂದು ಬ್ಯಾಂಡೇಜ್ ಮಾಡಿದ್ದಾರೆ. ದಿವ್ಯಾ ನೋವು ತಾಳಲಾರದೇ ಕಣ್ಣೀರು ಹಾಕಿದ್ದಾರೆ. ಇಷ್ಟಾದರೂ ಮಂಜು ಕುಳಿತ ಜಾಗದಿಂದ ಎದ್ದಿಲ್ಲ.

ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಸದಾ ಅಂಟಿಕೊಂಡೇ ಇದ್ದು ಒಬ್ಬರಿಗೊಬ್ಬರು ಸಪೋರ್ಟ್ ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಮಾತ್ರ ದಿವ್ಯ ನಿನ್ನ ಪ್ರೆಂಡ್ ಶಿಪ್ ಗೆ ದೊಡ್ಡ ನಮಸ್ಕಾರ ಎಂದಿರುವಂತೆ ಅಂತರ ಕಾಯ್ದುಕೊಳ್ಳುತ್ತಿರುವುದು ಪ್ರೇಕ್ಷಕರಿಗೆ ಅಚ್ಚರಿ ತಂದಿದೆ.

RELATED ARTICLES

Most Popular