ನಾನು ಕ್ಯಾಸಿನೋಗೆ ಹೋಗಿದ್ದು ನಿಜ : ನನ್ನ ಜೊತೆಗೆ ಕುಮಾರಸ್ವಾಮಿ ಕೂಡ ಬಂದಿದ್ರು : ಶಾಸಕ ಜಮೀರ್ ಅಹ್ಮದ್

0

ಬೆಂಗಳೂರು : ಡ್ರಗ್ಸ್ ದಂಧೆಯಲ್ಲಿ ಶಾಸಕ ಜಮೀರ್ ಅಹ್ಮದ್ ಹೆಸರು ಕೇಳಿಬಂದಿದೆ. ನಾನು ಕ್ಯಾಸಿನೋಗೆ ಹೋಗಿಯೇ ಇಲ್ಲಾ ಅಂತಿದ್ದ ಜಮೀರ್ ಅಹ್ಮದ್ ಇದೀಗ ಪ್ರಶಾಂತ್ ಸಂಬರಗಿ ಸಿಸಿಬಿ ವಿಚಾರಣೆಗೆ ಹಾಜರಾಗುತ್ತಲೇ ಯೂಟರ್ನ್ ಹೊಡೆದಿದ್ದು, ಸತ್ಯ ಒಪ್ಪಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ ಇಷ್ಟು ದಿನ ಸಿನಿಮಾ ನಟಿಯರು, ಉದ್ಯಮಿಗಳು, ರಾಜಕಾರಣಿಗಳ ಮಕ್ಕಳ ಸುತ್ತಲೂ ಗಿರಕಿ ಹೊಡೆಯುತ್ತಿತ್ತು. ಇದೀಗ ರಾಜಕಾರಣಿಗಳ ಹೆಸರು ಥಳಕು ಹಾಕಿಕೊಳ್ಳುತ್ತಿದೆ. ಇಂದು ಸಿಸಿಬಿ ಅಧಿಕಾರಿಗಳ ಮುಂದೆ ಪ್ರಶಾಂತ್ ಸಂಬರಗಿ ಹಾಜರಾಗುತ್ತಿದ್ದಂತೆಯೇ ಶಾಸಕ ಜಮೀರ್ ಅಹ್ಮದ್ ಸ್ಪೋಟಕ ಮಾಹಿತಿಯನ್ನು ಬಾಯ್ಬಿಟ್ಟಿದ್ದಾರೆ.

ನಾನು ಕೊಲಂಬೋಗೆ ತೆರಳಿದ್ದು ನಿಜ. ಕ್ಯಾಸಿನೋ ಪಾರ್ಟಿಯಲ್ಲಿಯೂ ಭಾಗಿಯಾಗಿದ್ದೇನೆ. ಆದರೆ ನನ್ನ ಜೊತೆಗೆ ಮಾಜಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೂಡ ಬಂದಿದ್ದಾರೆ. ಅಷ್ಟೇ ಅಲ್ಲಾ ಜೆಡಿಎಸ್ ನ 28 ಮಂದಿ ಶಾಸಕರು ಕುಡ ಕ್ಯಾಸಿನೋಗೆ ತೆರಳಿ ಪಾರ್ಟಿ ಕೂಡ ಮಾಡಿದ್ದೇವೆ ಅಂತಾ ಹೇಳಿಕೆ ಕೊಟ್ಟಿದ್ದಾರೆ. ನಾನು ಡ್ರಗ್ಸ್ ದಂಧೆಯಲ್ಲಿ ಇಲ್ಲ, ನನ್ನ ಮೇಲಿನ ಆರೋಪ ನಿಜವಾದ್ರೆ ನನ್ನನ್ನು ಗಲ್ಲಿಗೇರಿಸಿ. ಆದರೆ ನಾನು ಸಂಜನಾ ಜೊತೆಗೆ ಕೊಲಂಬೋಗೆ ತೆರಳಿಲ್ಲ ಎಂದು ಶಾಸಕ ಜಮೀರ್ ಅಹ್ಮದ್ ನೀಡಿರುವ ಹೇಳಿಕೆ ಇದೀಗ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಮಾಧ್ಯಮಗಳ ಜೊತೆಗೆ ಮಾತನಾಡಿರುವ ಜಮೀರ್ ಅಹ್ಮದ್ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಇದೀಗ ಜೆಡಿಎಸ್ ಮುಖಂಡರ ಹೆಸರನ್ನು ಜಮೀರ್ ಬಳಸಿಕೊಳ್ಳುತ್ತಿರುವವರ ಹಿಂದೆ ಬೇರೆ ಉದ್ದೇಶವಿದ್ಯಾ ? ಇಲ್ಲಾ ಕುಮಾರಸ್ವಾಮಿ ಅವರು ಕ್ಯಾಸಿನೋ ಪಾರ್ಟಿ ಮಾಡಿದ್ದಾರಾ ? ಅನ್ನೋದನ್ನು ಜೆಡಿಎಸ್ ಮುಖಂಡರು ಸ್ಪಷ್ಟನೆ ನೀಡಬೇಕಾಗಿದೆ.

Leave A Reply

Your email address will not be published.