ನವದೆಹಲಿ : ಕೊರೊನಾ ಮಹಾಮಾರಿ ವಿಶ್ವವನ್ನೇ ಬೆಚ್ಚಿ ಬೀಳಿಸುತ್ತಿದೆ. ಚೀನಾದಲ್ಲಿ ಮರಣ ಮೃದಂಗವೇ ನಡೆದಿದ್ದು ಸಾವಿರಾರು ಮಂದಿ ಸಾವನ್ನಪ್ಪಿದ್ದಾರೆ.

ಶೇ.80 ರಷ್ಟು ಮಂದಿ ನಾಪತ್ತೆಯಾಗಿದ್ದು, 80 ಲಕ್ಷ ಜನರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಆದರೆ ಚೀನಾ ವುಹಾನ್ ಪ್ರಾಂತ್ಯವನ್ನೇ ಕೊರೊನಾ ಮುಕ್ತವೆಂದು ಸುಳ್ಳು ಹೇಳುತ್ತಿದೆ.

ಚೀನಾದ ವುಹಾನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡಿರೋ ಕೊರೊನಾ ಮಹಾಮಾರಿ ಇಂದು ಜಗತ್ತಿನ ರಾಷ್ಟ್ರಗಳಿಗೆ ತಲೆನೋವು ತರಿಸಿದೆ. ನಿತ್ಯವೂ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಚೀನಾ ಅಧಿಕೃತವಾಗಿ ವಿಶ್ವ ಆರೋಗ್ಯ ಸಂಸ್ಥೆಗೆ ನೀಡಿರೋ ವರದಿಯ ಪ್ರಕಾರ 3,34,451 ಮಂದಿಗೆ ಇದುವರೆಗೂ ಕೊರೊನಾ ಸೋಂಕು ಬಾಧಿಸಿದ್ದು, 14,597 ಮಂದಿ ಸಾವನ್ನಪ್ಪಿದ್ದಾರೆ.

ಕೊರೊನಾ ವಿರುದ್ದದ ಹೋರಾಟಕ್ಕೆ ಚೀನಾ ತಾನು ಯಶಸ್ವಿಯಾಗಿದೆ ಅಂತಾ ಹೇಳಿಕೊಂಡಿದೆ. ಮಾತ್ರವಲ್ಲ ವುಹಾನ್ ಪ್ರಾಂತ್ಯದಲ್ಲಿ ಯಾರೂ ಕೊರೊನಾ ಪೀಡಿತರಿಲ್ಲ ಅಂತಾ ಘೋಷಣೆ ಮಾಡಿಕೊಂಡಿದೆ.

ಇದರಿಂದಾಗಿ ವಿಶ್ವದ ಹಲವು ರಾಷ್ಟ್ರಗಳು ಕೊಂಚ ನಿರಾಳವಾಗಿದ್ದವು.ಆದರೆ ಚೀನಾದ ಮೊಬೈಲ್ ಕಂಪೆನಿಯೊಂದು ಹೇಳುತ್ತಿರೋ ಅಂಕಿ ಅಂಶಗಳು ವಿಶ್ವದ ಜನರನ್ನು ಬೆಚ್ಚಿ ಬೀಳಿಸಿದೆ.

ಮೊಬೈಲ್ ಕಂಪೆನಿ ಹೇಳಿರೋ ಅಂಕಿ ಅಂಶಗಳ ಪ್ರಕಾರ ವುಹಾನ್ ಪ್ರಾಂತ್ಯದ ಸುಮಾರು 80 ಲಕ್ಷ ಮಂದಿಯ ಮೊಬೈಲ್ ಕಳೆದ 2 ತಿಂಗಳುಗಳಿಂದ ಸ್ವಿಚ್ಡ್ ಆಫ್ ಆಗಿದೆ. ಮಾತ್ರವಲ್ಲ ಶೇಕಡಾ 80ರಷ್ಟು ಮಂದಿ ನಾಪತ್ತೆಯಾಗಿದ್ದಾರೆ ಅಂತಾ ಹೇಳಿಕೊಂಡಿದೆ. ಮೊಬೈಲ್ ಕಂಪೆನಿ ಹೇಳಿರೋ ಅಂಕಿ ಅಂಶಗಳು ಇದೀಗ ಜಗತ್ತಿನ ರಾಷ್ಟ್ರಗಳ ತಲೆನೋವಿಗೆ ಕಾರಣವಾಗಿದೆ.

ಕಳೆದ ನವೆಂಬರ್ ತಿಂಗಳಿನಲ್ಲಿಯೇ ಚೀನಾದಲ್ಲಿ ಕೊರೊನಾ ಮಹಾಮಾರಿ ಕಾಣಿಸಿಕೊಂಡಿತ್ತು. ಆರಂಭದಲ್ಲಿ ಕೊರೊನಾ ಪತ್ತೆ ಹಚ್ಚಿದ್ದ ವೈದ್ಯನನ್ನೇ ಚೀನಾ ಬಂಧಿಸಿತ್ತು. ಅಲ್ಲದೇ ವೈದ್ಯ ಕೂಡ ಕೊರೊನಾ ಮಹಾಮಾರಿಗೆ ಬಲಿಯಾಗಿ ಹೋಗಿದ್ದಾನೆ.

ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದರೂ ಕೂಡ ಚೀನಾ ಜಗತ್ತಿನ ಮುಂದೆ ತನ್ನ ರಾಷ್ಟ್ರದಲ್ಲಿ ಏನೂ ಆಗಿಲ್ಲವೆಂಬತೆ ವರ್ತಿಸಿತ್ತು. ಅದ್ಯಾವಾಗ ಚೀನಾ ಮಾಧ್ಯಮಗಳು ಕೊರೊನಾ ತೀವ್ರತೆಯನ್ನು ಬಿಚ್ಚಿಟ್ಟವೋ ಆವಾಗ್ಲೆ ಜನತ್ತು ಎಚ್ಚರಗೊಂಡಿತ್ತು.

ಸಾಲದಕ್ಕೆ ನಾಸಾ ಸ್ಯಾಟಲೈಟ್ ನೀಡಿರೋ ಫೋಟೋ ಕೂಡ ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು. ಲಕ್ಷಾಂತರ ಜನರನ್ನು ಚೀನಾ ಕೊಂದು ಹಾಕಿದೆ ಅನ್ನೋ ಸುದ್ದಿಗಳು ಹರಿದಾಡಿದ್ದವು. ಆದ್ರೀಗ ಈ ಸುದ್ದಿಗಳಿಗೆ ರೆಕ್ಕೆ ಪುಕ್ಕ ಬಂದಂತಾಗಿದೆ. ಜನವರಿಯಿಂದೀಚಿಗೆ ಸುಮಾರು 80 ಲಕ್ಷ ಮಂದಿ ಮೊಬೈಲ್ ಬಳಕೆ ಮಾಡುತ್ತಿಲ್ಲವೆಂದಾದ್ರೆ, ಅವರೆಲ್ಲಾ ಎಲ್ಲಿದ್ದಾರೆ.

ಚೀನಾ ಅಷ್ಟೊಂದು ಜನರನ್ನು ಬಲಿಕೊಟ್ಟಿತಾ ? ಜಗತ್ತಿನ ರಾಷ್ಟ್ರಗಳಿಗೆ ಮಹಾಮಾರಿಯನ್ನು ಹಂಚಿದ್ದ ಚೀನಾ, ಇದೀಗ ವಿಶ್ವಕ್ಕೆ ಜನರನ್ನು ಕೊಂದು ಸುಳ್ಳು ಹೇಳುತ್ತಿದ್ಯಾ ಅನ್ನೋ ನೂರಾರು ಪ್ರಶ್ನೆಗಳು ಹರಿದಾಡುತ್ತಿವೆ.