ಉಪವಾಸ (Fasting Tips) ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಕಾರಿ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಸಾಮಾನ್ಯವ ಆಗಿ ಕೆಲವರು ದೇವರ ಮೇಲಿನ ಭಕ್ತಿಯಿಂದ ವಾರಕ್ಕೊ,ಮ್ಮೆ ಅಥವಾ ತಿಂಗಳಿಗೊಮ್ಮೆ ಉಪವಾಸ (Health Tips) ಮಾಡುತ್ತಾರೆ. ಈ ರೀತಿ ಉಪವಾಸ ಮಾಡುವುದರಿಂದ ಅವರಿಗೆ ತಿಳಿಯದೇ ತಮ್ಮ ದೇಹವನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ವಾರದಲ್ಲಿ ಎರಡರಿಂದ ಮೂರು ದಿನ ಮೀನು ಮಾಂಸಗಳನ್ನು ಬಿಟ್ಟು ಉಪವಾಸ ಮಾಡುತ್ತಾರೆ. ಇನ್ನು ಕೆಲವರು ದಿನವಿಡೀ ಏನು ತಿನ್ನದೇ ರಾತ್ರಿ ವೇಳೆಯಲ್ಲಿ ಸ್ವಲ್ಪ ಪ್ರಮಾಣದ ಆಹಾರ ತಿಂದು ಉಪವಾಸ ಮಾಡುತ್ತಾರೆ.
ಆದರೆ ವಾರಕ್ಕೊಮ್ಮೆ ಅಂದರೆ ವಾರದಲ್ಲಿ ಒಂದು ದಿನ ಖಾಲಿ ನೀರನ್ನು ಕುಡಿದು ಉಪವಾಸ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನವಿದೆ. ಹೀಗೆ ಮಾಡುವುದರಿಂದ ನಮ್ಮ ದೇಹ ಹಗುರವಾದಂತೆ ಅನಿಸುತ್ತದೆ. ಅಷ್ಟೇ ಅಲ್ಲದೇ ಈ ರೀತಿ ಉಪವಾಸದಿಂದ ನಮ್ಮ ಮಾನಸಿಕ ಆರೋಗ್ಯ ಕೂಡ ಚೆನ್ನಾಗಿ ಇರುತ್ತದೆ. ವಾರಕ್ಕೊಮ್ಮೆ ಬರೀ ನೀರನ್ನು ಕುಡಿದು ಉಪವಾಸ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನವಿದೆ ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ.
ತೂಕ ಇಳಿಕೆ ಸಾಧ್ಯತೆ :
ವಾರಕ್ಕೊಮ್ಮೆ ಏನ್ನನ್ನು ತಿನ್ನದೇ ಬರೀ ನೀರು ಕುಡಿದು ಉಪವಾಸ ಮಾಡುವುದರಿಂದ ನಮ್ಮ ದೇಹದ ತೂಕವನ್ನು (Weight loss tips) ಬೇಗನೇ ಸುಲಭವಾಗಿ ಕರಗಿಸಬಹುದು. ಈ ರೀತಿ ಉಪವಾಸ ಮಾಡುವುದರಿಂದ ನಮ್ಮ ದೇಹದಲ್ಲಿ ಎರಡರಿಂದ ಮೂರು ಕೆಜಿ ಇಳಿಸಬಹುದು. ಇದೊಂದು ಆರೋಗ್ಯಕರ ಪ್ರಕ್ರಿಯೆಯಾಗಿದ್ದು, ಈ ರೀತಿ ನಮ್ಮ ದೇಹದ ತೂಕವನ್ನು ಇಳಿಸುವುದರಿಂದ ನಮ್ಮ ಆರೋಗ್ಯಕ್ಕೆ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರುವುದಿಲ್ಲ. ಅಷ್ಟೇ ಅಲ್ಲದೇ ಈ ರೀತಿ ಉಪವಾಸ ಮಾಡಿ ತೂಕ ಇಳಿಸುವುದರಿಂದ ನಮ್ಮ ಚರ್ಮವೂ ಫಿಟ್ ಆಗಿ ಕಾಣಿಸುತ್ತದೆ.

ಸುದೀರ್ಘ ಕಾಲ ಬದುಕಬಹುದು :
ಹಿಂದಿನ ಕಾಲದಲ್ಲಿ ಋಷಿ ಮುನಿಗಳು ಕೇವಲ ಗಾಳಿ ಹಾಗೂ ನೀರನ್ನು ಸೇವಿಸಿಕೊಂಡು ಬಹಳ ವರ್ಷ ಬದುಕುತ್ತಿದ್ದರು. ಹಾಗಾಗಿ ವಾರಕ್ಕೊಮ್ಮೆ ಬರೀ ನೀರನ್ನು ಕುಡಿದು ಬದುಕುವುದರಿಂದ ನಮ್ಮ ಆಯುಷ್ಯಯನ್ನು ಆರೋಗ್ಯಕರವಾಗಿ ಹೆಚ್ಚಿಸಬಹುದು. ನಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದ ನೀರು ಬೇಕಾಗುವುದರಿಂದ ನಿಯಮಿತ ರೀತಿಯಲ್ಲಿ ಕುಡಿಯುವುದರಿಂದ ನಮ್ಮ ದೇಹವು ಹಗುರವಾಗಿರುತ್ತದೆ. ಹಾಗೆಯೇ ಈ ಉಪವಾಸ ಪ್ರಕ್ರಿಯೆಯು ನಮ್ಮ ದೇಹಕ್ಕೆ ಹೆಚ್ಚಿನ ಪ್ರಯೋಜನಕಾರಿ ಆಗಿದೆ.
ಇದನ್ನೂ ಓದಿ : ಹಗಲಿನ ವೇಳೆ ನಿದ್ದೆ ಮಾಡುವುದರಿಂದ ಇಷ್ಟೆಲ್ಲಾ ಸಮಸ್ಯೆಗಳಿವೆಯಾ ? ದಿನಕ್ಕೆ ಎಷ್ಟು ತಾಸು ನಿದ್ದೆ ಬೆಸ್ಟ್
ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ :
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು (Increases immunity Power) ಹೆಚ್ಚಿಸುತ್ತದೆ. ಇನ್ನು ವಾರಕ್ಕೊಮ್ಮೆ ಖಾಲಿ ನೀರು ಕುಡಿದು ಬದುಕುವುದರಿಂದ ನಮ್ಮ ದೇಹವನ್ನು ಪುನರುಜ್ಜೀವನಗೊಳಿಸುತ್ತದೆ. ಈ ರೀತಿ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರಿಂದ ನಮ್ಮ ರೋಗ ರುಜಿನಗಳಿಂದ ದೂರ ಇಡುತ್ತದೆ.

ಇದನ್ನೂ ಓದಿ : ಹೀಗೂ ಉಂಟೆ ! ಮುಖದ ಮೇಲಿನ ಮೊಡವೆಗಳು ಹೇಳುತ್ತವೆ ಅಚ್ಚರಿಯ ಸಂಗತಿ
ವಯಸ್ಸಾಗದಂತೆ ಕಾಪಾಡುತ್ತೆ :
ನಾವು ವಾರಕ್ಕೊಮ್ಮೆ ಏನನ್ನು ತಿನ್ನದೇ ಖಾಲಿ ನೀರು ಕುಡಿದು ಉಪವಾಸ ಮಾಡುವುದರಿಂದ ವಯಸ್ಸಾಗದಂತೆ ಕಾಪಾಡುತ್ತದೆ. ಅಷ್ಟೇ ಅಲ್ಲದೇ ಪ್ರತಿದಿನ ಅತಿ ಹೆಚ್ಚು ನಿಯಮಿತ ಪ್ರಮಾಣದಲ್ಲಿ ನೀರನ್ನು ಕುಡಿಯುವುದರಿಂದ ನಮ್ಮ ದೇಹವನ್ನು ಆರೋಗ್ಯಕರವಾಗಿ ಇಡಲು ಕಾಪಾಡುತ್ತದೆ.

Fasting Tips: Do you know the benefits of fasting once a week?