ಹೀಗೂ ಉಂಟೆ ! ಮುಖದ ಮೇಲಿನ ಮೊಡವೆಗಳು ಹೇಳುತ್ತವೆ ಅಚ್ಚರಿಯ ಸಂಗತಿ

ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಮೊಡವೆಗಳು (Pimples) ಕ್ರಮೇಣ ಕಡಿಮೆಯಾಗುತ್ತದೆ. ಇನ್ನು ಕೆಲವರಿಗೆ ವಿವಿಧ ಆರೋಗ್ಯ ಮುಖದಲ್ಲಿ ಸಮಸ್ಯೆಯಿಂದಲೂ ಮೊಡವೆಗಳು (Different Types of Acne) ಕಾಣಿಸಿಕೊಳ್ಳುತ್ತದೆ.

ಸಾಮಾನ್ಯವಾಗಿ ಹದಿಹರೆಯರದವರಲ್ಲಿ ಮುಖದಲ್ಲಿ ಮೊಡವೆಗಳು (pimples symptoms) ಸಾಮಾನ್ಯವಾಗಿ ಇರುತ್ತದೆ. ಹೀಗೆ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಮೊಡವೆಗಳು (Pimples) ಕ್ರಮೇಣ ಕಡಿಮೆಯಾಗುತ್ತದೆ. ಇನ್ನು ಕೆಲವರಿಗೆ ವಿವಿಧ ಆರೋಗ್ಯ ಮುಖದಲ್ಲಿ ಸಮಸ್ಯೆಯಿಂದಲೂ ಮೊಡವೆಗಳು (Different Types of Acne) ಕಾಣಿಸಿಕೊಳ್ಳುತ್ತದೆ. ಕೆಲವರಿಗೆ ಹಾರ್ಮೋನುಗಳ ಏರುಪೇರಿನಿಂದಲೂ ಮುಖದಲ್ಲಿ ಮೊಡವೆಗಳು ಕಾಣಿಸಿಕೊಳ್ಳುತ್ತದೆ. ಇನ್ನು ಕೆಲವರಿಗೆ ತಿನ್ನುವ ಆಹಾರದಲ್ಲಿ ವ್ಯತ್ಯಾಸವಾದರೂ ಮೊಡವೆಗಳು ಆಗುತ್ತದೆ. ಇಲ್ಲವಾದ್ರೆ ಹೊಟ್ಟೆಯಲ್ಲಿ, ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆಗಳಿಂದಲೂ ಮುಖದಲ್ಲಿ ಮೊಡವೆಗೆ ಕಾರಣವಾಗುತ್ತದೆ. ಹೀಗೆ ಮುಖದಲ್ಲಿ ವಿವಿಧ ಕಾರಣಗಳಿಂದ ಮೊಡವೆಗಳು ಕಾಣಿಸಿಕೊಳ್ಳುತ್ತದೆ.

ಈ ಎಲ್ಲಾ ಕಾರಣವಲ್ಲದೇ ನಮ್ಮ ಮುಖ ಬೇರೆ ಬೇರೆ ಭಾಗಗಳಲ್ಲಿ ಕಾಣಿಸಿಕೊಳ್ಳುವ ಮೊಡವೆಗಳು ಅದರದೇ ಆದ ಕಾರಣಗಳನ್ನು ಹೇಳುತ್ತದೆ. ಮುಖದ ನೆತ್ತಿ ಭಾಗದಲ್ಲಿ ಕಾಣಿಸಿಕೊಳ್ಳುವ ಮೊಡವೆಗಳು ಒಂದು ರೀತಿಯಲ್ಲಿ ಉಂಟಾದರೆ, ಕೆನ್ನೆ ಹಾಗೂ ಗಲ್ಲದ ಮೇಲೆ ಕಾಣಿಸಿಕೊಳ್ಳುವ ಮೊಡವೆಗಳು ಬೇರೆ ರೀತಿಯನ್ನೇ ಸೂಚಿಸುತ್ತದೆ. ಹೀಗೆ ಮುಖ ವಿವಿಧ ಭಾಗಗಳಲ್ಲಿ ಕಾಣಿಸಿಕೊಳ್ಳುವ ಮೊಡವೆಗಳು ಏನನ್ನು ಸೂಚಿಸುತ್ತದೆ ಎನ್ನುವದುನ್ನು ಈ ಕೆಳಗೆ ತಿಳಿಸಲಾಗಿದೆ.

ಹಣೆಯ ಮೇಲಿನ ಮೊಡವೆಗಳು ಏನು ಹೇಳುತ್ತೆ ?
ಕೆಲವರಲ್ಲಿ ಹಣೆಯ ಮೇಲೆ ಸಾಕಷ್ಟು ಮೊಡವೆಗಳು (Forehead Pimples) ಆಗುತ್ತದೆ. ಹಣೆಯ ಮೇಲೆ ಸಣ್ಣ ಸಣ್ಣ ರೀತಿಯ ಮೊಡವೆಗಳು ಕಾಣಿಸಿಕೊಳ್ಳುತ್ತದೆ. ಈ ಮೊಡವೆಗಳಿಗೆ ಮುಖ್ಯ ಕಾರಣ ತಲೆ ಕೂದಲನ್ನು ಸರಿಯಾಗಿ ತೊಳೆಯದೇ ಇರುವುದರಿಂದ ಆಗುತ್ತದೆ. ಇನ್ನು ತಲೆಯಲ್ಲಿ ಸಿಕ್ಕಾಪಟ್ಟೆ ಹೊಟ್ಟು ಇರುವುದರಿಂದ ಕೂಡ ಹಣೆಯ ಮೇಲೆ ಮೊಡವೆಗಳು ಆಗುತ್ತದೆ. ಅಷ್ಟೇ ಅಲ್ಲದೇ ತಲೆ ಕೂದಲಿಗೆ ಬಳಸುವ ಕೆಲವು ರಾಸಾಯನಿಕ ಶ್ಯಾಂಪೂನಿಂದಲೂ ಹಣೆಯ ಮೇಲೆ ಮೊಡವೆಗಳು ಆಗುತ್ತದೆ. ತಲೆಗೆ ಹಚ್ಚುವ ಎಣ್ಣೆಯಿಂದಲೂ ಮೊಡವೆಗಳು ಆಗುವ ಸಾಧ್ಯತೆಗಳಿರುತ್ತದೆ.

Pimples Symptoms: Even so! Pimples on the face say a surprising thing
Image Credit To Original Source

ಹುಬ್ಬುಗಳ ನಡುವಿನ ಮೊಡವೆ ಆಗುವುದಕ್ಕೆ ಕಾರಣವೇನು ?
ನಮ್ಮಲ್ಲಿ ಹೆಚ್ಚಿನವರು ಹೊರಗಿನ ಜಂಕ್‌ ಪುಡ್‌ಗಳಿಗೆ ಹೆಚ್ಚು ಇಷ್ಟಪಡುತ್ತಾರೆ. ಇನ್ನು ಎಣ್ಣೆಯಿಂದ ಕರಿದ ಆಹಾರಗಳನ್ನು ಹೆಚ್ಚೆಚ್ಚು ತಿನ್ನುತ್ತಾರೆ. ಇದರಿಂದಾಗಿ ನಮ್ಮ ಜೀರ್ಣಾಂಗ ವ್ಯವಸ್ಥೆ ಮೇಲೆ ಬಹಳ ಬೇಗನೆ ಪರಿಣಾಮ ಬೀರುತ್ತದೆ. ಅದು ನಮ್ಮ ಮುಖದ ಮೇಲೆ ಮೊಡವೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಹೌದುನಿಮ್ಮ ಹುಬ್ಬಯಗಳ ನಡುವಿನ ಮೊಡೆವೆಗಳು ಕಳಪೆ ಆಹಾರ ಪದ್ಧತಿಯಿಂದಾಗಿ ಆಗುತ್ತದೆ. ಸರಿಯಾದ ಆಹಾರ ಪದ್ಧತಿಯು ನಮ್ಮ ಮುಖದ ಕಾಂತಿಯನ್ನು ಹೆಚ್ಚಿಸಲು ಸಹಾಯಕಾರಿ ಆಗುತ್ತದೆ.

ಇದನ್ನೂ ಓದಿ : ರಾತ್ರಿ ಉಳಿದ ಅನ್ನವನ್ನು ಎಸೆಯಬೇಡಿ ! ಇದ್ರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ ?

ನಿಮ್ಮ ಗಲ್ಲದ ಮೇಲಿನ ಮೊಡವೆಗಳಿಗೆ ಕಾರಣವೇನು ಗೊತ್ತಾ ?
ನಮ್ಮ ದೇಹದಲ್ಲಿ ಆಗಾಗ್ಗೆ ಹಾರ್ಮೋನುಗಳ ಏರುಪೇರು ಆಗುತ್ತದೆ. ಇದರಿಂದ ನಮ್ಮ ದೇಹದಲ್ಲಿ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇನ್ನು ಮುಖದಲ್ಲಿ ಗಲ್ಲದ ಮೇಲೆ ಕಾಣಿಸಿಕೊಳ್ಲುವ ಮೊಡವೆಗಳು ನಮ್ಮ ಒತ್ತಡದ ಜೀವನ ಹಾಗೂ ಹಾರ್ಮೋನುಗಳ ಏರುಪೇರನ್ನು ಸೂಚಿಸುತ್ತದೆ. ಒತ್ತಡಯುಕ್ತ ಜೀವನ ಕೂಡ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಅದನ್ನು ಕೆಲವೊಮ್ಮೆ ಮೊಡವೆಗಳ ರೂಪದಲ್ಲೂ ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ : ಹಗಲಿನ ವೇಳೆ ನಿದ್ದೆ ಮಾಡುವುದರಿಂದ ಇಷ್ಟೆಲ್ಲಾ ಸಮಸ್ಯೆಗಳಿವೆಯಾ ? ದಿನಕ್ಕೆ ಎಷ್ಟು ತಾಸು ನಿದ್ದೆ ಬೆಸ್ಟ್‌

ಕೆನ್ನೆ ಮೇಲೆ ಮೊಡೆವೆಗಳು ಏಕೆ ಕಾಣಿಸಿಕೊಳ್ಳುತ್ತೆ ಗೊತ್ತಾ ?
ಸಾಮಾನ್ಯವಾಗಿ ನಾವು ಮೊಬೈಲ್‌ನಲ್ಲಿ ಮಾತನಾಡುವಾಗ ಕೆನ್ನೆಯ ಹತ್ತಿರ ಹಿಡಿದು ಮಾತನಾಡುತ್ತೇವೆ. ಇದರಿಂದಾಗಿ ಕೂಡ ಮುಖದಲ್ಲಿ ಮೊಡವೆಗಳು ಕಾಣಿಸುತ್ತದೆ. ಹಾಗೆ ಕೊಳಕು ತಲೆದಿಂಬು ಅಥವಾ ತಲೆ ದಿಂಬಿನ ಕವರಿನಿಂದಲೂ ಕೂಡ ಮೊಡವೆಗಳು ಕಾರಣವಾಗುತ್ತದೆ. ಧೂಳು ತುಂಬಿದ ಮೊಬೈಲ್‌ ಹಾಗೂ ಮೊಬೈಲ್‌ ಕವರಿನಿಂದ ಕೂಡ ಮೊಡವೆಗಳು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಮೊಬೈಲ್‌ ಬಳಸುವಾಗ ಅದರ ಸ್ವಚ್ಛತೆಯನ್ನು ಕಾಪಾಡಿಕೊಳ್ಳದಿದ್ದರೆ ಮೊಡವೆಗಳು ಆಗುತ್ತದೆ.

Pimples Symptoms: Even so! Pimples on the face say a surprising thing
Image Credit To Original Source

Pimples Symptoms: Even so! Pimples on the face say a surprising thing

Comments are closed.