ಬಳಕೆದಾರರಿಗೆ ಶಾಕ್ ನೀಡಿದ ಗೂಗಲ್ ಪೇ…! ಹೊಸ ವರ್ಷದಿಂದ ಫ್ರೀಸರ್ವೀಸ್ ಇಲ್ಲ…!!

ನವದೆಹಲಿ: ಕ್ಷಣಾರ್ಧದಲ್ಲಿ ಹಣ ಪಾವತಿಸುವುದಕ್ಕೆ ನೆರವಾಗುತ್ತಿದ್ದ ಗೂಗಲ್ ಪೇ ತನ್ನ ಬಳಕೆದಾರರಿಗೆ ಶಾಕ್ ನೀಡಿದ್ದು, ಇನ್ಮುಂದೆ ಸೇವೆ ಸಂಪೂರ್ಣ ಉಚಿತವಲ್ಲ ಎಂದಿದೆ.

೨೦೨೧ ರ ಜನವರಿಯಿಂದ pay.google.com ಬಳಕೆಗೆ ಲಭ್ಯವಿರುವುದಿಲ್ಲ. ಬದಲಾಗಿ ಹಣ ಕಳುಹಿಸಲು ಮತ್ತು ಸ್ವೀಕರಿಸಲು ಹೊಸ Goglepay Application ಬಳಸೋದು ಅನಿವಾರ್ಯವಾಗಲಿದೆ.ಪೀರ್ ಟೂ ಪೀರ್ ವರ್ಗಾವಣೆ ಸೇರಿದಂತೆ ವೆಬ್ ನಲ್ಲಿ ಇನ್ನಷ್ಟು ಹಣ ವರ್ಗಾವಣೆಯ ವಿಧಾನಗಳ ಆಯ್ಕೆಯನ್ನು ಗೂಗಲ್ ನೀಡಿದೆ. ಆದರೇ ಎಲ್ಲದರ ಮೇಲೂ ಶುಲ್ಕ ವಿಧಿಸಲು ನಿರ್ಧರಿಸಿದೆ.

ಇಷ್ಟು ದಿನಗಳ ಕಾಲ ಡೆಬಿಟ್ ಕಾರ್ಡ್ ನಿಂದ ನೀವು ಹಣ ವರ್ಗಾಯಿಸಿದ್ರೇ ತಕ್ಷಣವೇ ಉಚಿತವಾಗಿ ಹಣ ಪಾವತಿಯಾಗುತ್ತಿತ್ತು. ಇನ್ಮುಂದೆ ಗೂಗಲ್ ಪೇ ಬ್ಯಾಲೆನ್ಸ್ ನಿಂದ ಡೆಬಿಟ್ ಕಾರ್ಡ್ ಬಳಸಿ ಹಣ ವರ್ಗಾಯಿಸಿದ್ರೇ, ನಿಯಮಾನುಸಾರ ಶುಲ್ಕ ಪಾವತಿಸಬೇಕಾಗುತ್ತದೆ.

ಕಳೆದ ವಾರ ಗೂಗಲ್, ಗೂಗಲ್ ಪೇ , ಹೊಸ ವಿನ್ಯಾಸವನ್ನು ಪರಿಚಯಿಸಿದ್ದು, ಹೊಸ ವರ್ಷನ್ ನಿಮ್ಮ ಎಲ್ಲ ಟ್ರಾನಾಕ್ಷನ್ ಗಳ ಜೊತೆ ನಿಮ್ಮ ದೈನಂದಿನ ಖರ್ಚುಗಳನ್ನು ಸಂಗ್ರಹಿಸಲು ಅವಕಾಶ ನೀಡಲಿದೆ.ಈ ಹೊಸ ಗೂಗಲ್ ಪೇ ಅಪ್ಲಿಕೇಶನ್ ಡಿಜಿಟಲ್‌ ಪಾವತಿ ಪ್ಲ್ಯಾಟ್ ಫಾರ್ಮ್ ಜೊತೆಗೆ ಸಂವಹನದ ಸಾಧನವಾಗಿಯೂ ಬಳಕೆಯಾಗಲಿದೆ.

ಇನ್ನು ಗೂಗಲ್ ಪೇ ಉಚಿತ ಹಣ ಪಾವತಿ ಸಾಧನವಾಗಿದ್ದರಿಂದ ಜನರು ಹೆಚ್ಚು ಬಳಸುತ್ತಿದ್ದರು. ಆದರೇ ಈಗ ಗೂಗಲ್ ಕೂಡ ಹಣ ಪಾವತಿ ಮೇಲೆ ಶುಲ್ಕ ವಿತರಿಸುತ್ತಿರುವುದರಿಂದ ಜನರು ಈ ಆ್ಯಪ್ ಗಳ ಬದಲಾವಣೆಗೆ ಹೇಗೆ ಸ್ಪಂದಿಸುತ್ತಾರೆ ಕಾದು ನೋಡಬೇಕಿದೆ.

Comments are closed.