Chennaveera Kanavi Died : ಚಂಬೆಳಕಿನ ಕವಿ ಇನ್ನಿಲ್ಲ : ಧಾರವಾಡದಲ್ಲಿ ಡಾ.ಚೆನ್ನವೀರ ಕಣವಿ‌ ನಿಧನ

ಬೆಂಗಳೂರು : ಚಂಬೆಳಕಿನ ಕವಿ ಖ್ಯಾತಿಯ ಹಿರಿಯ ಕವಿ ,ಸಾಹಿತಿ ನಾಡೋಜ ಡಾ.ಚೆನ್ನವೀರ ಕಣವಿ (Chennaveera Kanavi Died) ಇಹಲೋಕ ತ್ಯಜಿಸಿದ್ದಾರೆ. ಕಳೆದ ಒಂದು ತಿಂಗಳಿನಿಂದ ಚನ್ನವೀರ ಕಣವಿ ಅನಾರೋಗ್ಯದಿಂದ ಧಾರವಾಡದ ಎಸ್ಡಿಎಂ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೊರೋನಾ ಸೋಂಕಿಗೆ ತುತ್ತಾಗಿದ್ದ ಚನ್ನವೀರ ಕಣವಿ ಅವರಿಗೆ 93 ವರ್ಷ ವಯಸ್ಸಾಗಿತ್ತು. ಕೊರೋನಾ ಸೋಂಕಿನಿಂದ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕಣವಿಯವರನ್ನು ಜನವರಿ 14 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲದಿನಗಳಿಂದ ಅವರ ಆರೋಗ್ಯ ತೀವ್ರವಾಗಿ ಕ್ಷೀಣಿಸಿತ್ತು.

ನಾಡೋಜ ಗೌರವಕ್ಕೆ ಪಾತ್ರವಾದ ಡಾ.ಚೆನ್ನವೀರ ಕಣವಿ, ಗದಗ ಜಿಲ್ಲೆಯ ಹೊಂಬಳದಲ್ಲಿ 1928 ರ ಜೂನ್ 28 ರಂದು ಜನಿಸಿದ್ದರು. ಧಾರವಾಡದಲ್ಲಿ ಮಾಧ್ಯಮಿಕ ಹಾಗೂ ಕಾಲೇಜು ಶಿಕ್ಷಣ ಪಡೆದ ಕಣವಿಯವರು 1952 ರಲ್ಲಿ ಎಂಎ ಪದವಿ ಪಡೆದಿದ್ದರು. ಬಳಿಕ ವಿವಿಯಲ್ಲಿ ತಮ್ಮ ವೃತ್ತಿ ಬದುಕನ್ನು ಅರಂಭಿಸಿದ್ದರು. ಬಳಿಕ ನವೋದಯ ಕಾವ್ಯದಲ್ಲಿ ಕೃಷಿ ಆರಂಭಿಸಿದ ಕಣವಿಯವರು, ಕಾವ್ಯಾಕ್ಷಿ, ಭಾವಜೀವಿ, ಆಕಾಶಬುಟ್ಟಿ ಸೇರಿದಂತೆ ಹಲವು ಕೃತಿ ರಚಿಸಿದರು. ಹಕ್ಕಿಪುಕ್ಕ, ಚಿಣ್ಣರ ಲೋಕವ ತೆರೆಯೋಣದಂತಹ ಮಕ್ಕಳ ಸಾಹಿತ್ಯವನ್ನು ರಚಿಸಿದ್ದ ಕಣವಿ, ಸಾಹಿತ್ಯ ಚಿಂತನ,ಕಾವ್ಯಾನುಸಂಧಾನದಂತಹ ವಿಮರ್ಶಾ ಕೃತಿಯನ್ನು ರಚಿಸಿದ್ದಾರೆ.

ರೋಮ್ಯಾಂಟಿಕ್ ಕವಿ ಎನ್ನಿಸಿಕೊಂಡಿದ್ದರೂ ವಿಮರ್ಶಾತ್ಮಕ ಸಾಹಿತ್ಯ ರಚನೆಯಲ್ಲೂ ಕಣವಿ ಎತ್ತಿದ ಕೈ. ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆಯಂತಹ ಭಾವಗೀತೆಗಳ ಮೂಲಕವೂ ಮನಗೆದ್ದಿದ್ದರು. ಡಾ.ಚೆನ್ನವೀರ ಕಣವಿಯವರ ಜೀವಧ್ವನಿ ಕತೆಗೆ 1981 ರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. 1996 ರಲ್ಲಿ ಹಾಸನದಲ್ಲಿ ನಡೆದ 65 ನೇ ಅಖಿಲ್ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

2008 ರಲ್ಲಿ ಅಳ್ವಾಸ್ ನುಡಿಸಿರಿ ಅಧ್ಯಕ್ಷರಾಗಿದ್ದ ಕಣವಿ ಚೆಂಬೆಳಕಿನ ಕವಿ ಎಂದೇ ಖ್ಯಾತಿ ಗಳಿಸಿದ್ದರು. ಡಾ.ಚೆನ್ನವೀರ ಕಣವಿಯವರ ಪತ್ನಿ ಶಾಂತಾದೇವಿ ಕೂಡ ಕವಯತ್ರಿ ಹಾಗೂ ಸಾಹಿತಿಯಾಗಿ ಗುರುತಿಸಿಕೊಂಡಿದ್ದರು. ಇತ್ತೀಚಿಗೆ ಕಣಿಯವರ ಪತ್ನಿ ನಿಧನರಾಗಿದ್ದು, ಪತ್ನಿ ನಿಧನದ ಬಳಿಕ ಕೊಂಚ ಲವಲವಿಕೆ ಕಳೆದುಕೊಂಡಿದ್ದ ಕಣವಿಯವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಒಂದು ತಿಂಗಳಿಂದ ಆಸ್ಪತ್ರೆಯಲ್ಲಿದ್ದ ಕಣವಿಯವರನ್ನು ಸಿಎಂ‌ ಭೇಟಿ ಮಾಡಿದ್ದು ಕಣವಿಯವರ ಆರೋಗ್ಯ ವಿಚಾರಿಸಿದ್ದರು. ಈಗ ಸಿಎಂ ಬೊಮ್ಮಾಯಿ ಕಣವಿಯವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಪ್ರಾಮಾಣಿಕತೆಗೆ ಮೆಚ್ಚಿ ದುಬಾರಿ ಮರ್ಸಿಡಿಸ್ ಎಸ್ ಯುವಿ ಉಡುಗೊರೆಯಾಗಿ ನೀಡಿದ ಕೇರಳದ ಉದ್ಯಮಿ

ಇದನ್ನೂ ಓದಿ : ಮಂಡ್ಯದ ಮಾಜಿ ಶಾಸಕ ಡಾ. ಹೆಚ್ ಡಿ ಚೌಡಯ್ಯ ವಿಧಿವಶ

(kannada poet Nadoja Dr Chennaveera Kanavi Died)

Comments are closed.