ದೀಪಾವಳಿ ವರೆಗೂ ಉಚಿತ ರೇಷನ್ : 18 ವರ್ಷ ಮೇಲ್ಪಟ್ಟವರಿಗೆ ಉಚಿತ ವ್ಯಾಕ್ಸಿನ್ : ಪ್ರಧಾನಿ ಮೋದಿ

ನವದೆಹಲಿ : ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆಯನ್ನು ನೀಡಲಾಗುವುದು. ಅಲ್ಲದೇ ದೇಶದಲ್ಲಿ ದೀಪಾವಳಿಯ ವರೆಗೂ ಉಚಿತವಾಗಿ ರೇಷನ್ ವಿತರಣೆ ಮಾಡುವ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಮಹತ್ವದ ಘೋಷಣೆಯನ್ನು ಮಾಡಿದ್ದಾರೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ದೇಶದಲ್ಲಿ ಜೂನ್ 21ರಿಂದ 18 ವರ್ಷ ಮೇಲ್ಪಟ್ಟವರಿಗೂ ಕೂಡ ಉಚಿತವಾಗಿ ಲಸಿಕೆಯನ್ನು ನೀಡಲಾಗುತ್ತದೆ. ಖಾಸಗಿ ಆಸ್ಪತ್ರೆಗಳಿಗೆ ಶೇ.25ರಷ್ಟು ಲಸಿಕೆಯನ್ನು ಸರಬರಾಜು ಮಾಡಲಾಗುತ್ತದೆ. ಆಸ್ಪತ್ರೆಗಳು ಹೆಚ್ಚುವರಿಯಾಗಿ 150 ರೂಪಾಯಿಯನ್ನು ಪಡೆದು ಲಸಿಕೆಯನ್ನು ವಿತರಣೆ ಮಾಡಬಹುದು. ಇನ್ನು ಮುಂದೆ ಲಸಿಕೆ ವಿತರಣೆಯ ಜವಾಬ್ದಾರಿ ಕೇಂದ್ರ ಸರಕಾರದ್ದು ಎಂದು ತಿಳಿಸಿದ್ದಾರೆ.

ಇನ್ನು ದೇಶದಲ್ಲಿ ಯಾರೊಬ್ಬರೂ ಕೂಡ ಹಸಿವಿನಿಂದ ಬಳಲ ಬಾರದು ಅನ್ನೋ ಕಾರಣಕ್ಕೆ ದೀಪಾವಳಿಯ ವರೆಗೂ ಉಚಿತವಾಗಿ ರೇಷನ್ ನೀಡುವುದಾಗಿ ಘೋಷಿಸಿದ್ದಾರೆ. ಸುಮಾರು 8 ತಿಂಗಳ ಕಾಲ 80 ಕೋಟಿ ಜನರಿಗೆ ಉಚಿತವಾಗಿ ರೇಷನ್ ವಿತರಣೆ ಮಾಡಲಾಗುತ್ತದೆ. ಕಳೆದ ಬಾರಿ ಎಪ್ರಿಲ್ ನಿಂದ ನವೆಂಬರ್ ವರೆಗೂ ಕೇಂದ್ರ ಸರಕಾರ ಉಚಿತವಾಗಿ ಪಡಿತರ ವಿತರಣೆ ಮಾಡಿತ್ತು. ಇದೀಗ ಮತ್ತೆ ನವೆಂಬರ್ ವರೆಗೂ ವಿಸ್ತರಣೆಯನ್ನು ಮಾಡಿದೆ ಎಂದಿದ್ದಾರೆ.

Comments are closed.