ನಮ್ಮ ಮೆಟ್ರೋದಿಂದ ಐಟಿ ಮಂದಿಗೆ ಗಿಫ್ಟ್: ಕೆಂಗೇರಿಯಿಂದ ವೈಟ್ ಫಿಲ್ಡ್ಕೆ, .ಆರ್. ಪುರಂವರೆಗೆ ಮೆಟ್ರೋ ಪ್ರಯಾಣ

ನಮ್ಮ ಮೆಟ್ರೋ. ಈಗಾಗಲೇ ಬೆಂಗಳೂರಿನ ಬಹುಭಾಗಕ್ಕೆ ಕಾಲಿಟ್ಟಿರೋ ನಮ್ಮ‌ಮೆಟ್ರೋ (Namma Metro) ಈಗ ಐಟಿ ಹಬ್ ಗೆ (IT Hub Metro )ಎಂಟ್ರಿಕೊಡೋ ಮೂಲಕ ಟೆಕ್ಕಿಗಳಿಗೆ ಸಿಹಿಸುದ್ದಿ‌ ನೀಡಿದೆ.

ಬೆಂಗಳೂರು : ಸಿಲಿಕಾನ್‌ ಸಿಟಿ ಬೆಂಗಳೂರಿನ ಟ್ರಾಫಿಕ್ ( Bengaluru Traffic) ಸಖತ್ ಫೇಮಸ್. ನೊರೆಂಟು ಜೋಕ್ಸ್, ಮೀಮ್ಸ್, ರೀಲ್ಸ್ ಕೂಡ ಬೆಂಗಳೂರಿನ ಟ್ರಾಫಿಕ್ ಬಗ್ಗೆ ಸೃಷ್ಟಿಯಾಗಿವೆ. ಇಂಥ ಟ್ರಾಫಿಕ್ ನಿಂದ ಜನರಿಗೆ ಬ್ರೇಕ್ ಕೊಟ್ಟಿದ್ದು ನಮ್ಮ ಮೆಟ್ರೋ. ಈಗಾಗಲೇ ಬೆಂಗಳೂರಿನ ಬಹುಭಾಗಕ್ಕೆ ಕಾಲಿಟ್ಟಿರೋ ನಮ್ಮ‌ಮೆಟ್ರೋ (Namma Metro) ಈಗ ಐಟಿ ಹಬ್ ಗೆ (IT Hub Metro )ಎಂಟ್ರಿಕೊಡೋ ಮೂಲಕ ಟೆಕ್ಕಿಗಳಿಗೆ ಸಿಹಿಸುದ್ದಿ‌ ನೀಡಿದೆ.

Bengaluru Namma Metro Gift It people Kengeri to Whilefield- KR Puram Namma Metro Train Start October 2nd
Image Credit : Namma metro

ಸಿಲಿಕಾನ್ ಸಿಟಿ ಎಂಬ ಹೆಗ್ಗಳಿಕೆ ತಂದುಕೊಟ್ಟ ಐಟಿ ಉದ್ಯೋಗಿಗಳಿಗೆ ಹಾಗೂ ಐಟಿ ಕಂಪನಿಗಳಿಗೆ ನಮ್ಮ‌ ಮೆಟ್ರೋ ಗುಡ್ ನ್ಯೂಸ್ ಕೊಟ್ಟಿದೆ. ಸದ್ಯ ಬೈಯಪ್ಪನಹಳ್ಳಿಯವರೆಗೆ (Bayyappanahalli) ಇರೋ ನಮ್ಮ‌ಮೆಟ್ರೋ ಇನ್ಮುಂದೇ ಕೆ.ಆರ್.ಪುರವರೆಗೂ (KR Puram) ಸಂಚರಿಸಲಿದೆ. ಬೈಯಪ್ಪನಹಳ್ಳಿಯಿಂದ ಕೆ.ಆರ್.ಪುರವರೆಗಿನ ಮೆಟ್ರೋ ಉದ್ಘಾಟನೆಗೆ ಮೂಹರ್ತ ಕೂಡಿಬಂದಿದ್ದು, ಅಕ್ಟೋಬರ್ 2ಕ್ಕೆ ಈ ಮಾರ್ಗದ ಉದ್ಘಾಟನೆಗೆ ನಮ್ಮ ಮೆಟ್ರೋ ಸಿದ್ಧತೆ ನಡೆಸಿದೆ.

ಇದನ್ನೂ ಓದಿ : ಭೂಗಳ್ಳರಿಗೆ ಬ್ರೇಕ್ ಹಾಕೋಕೆ ಸಜ್ಜಾದ ಸಿದ್ದರಾಮಯ್ಯ ಸರ್ಕಾರ : ಒತ್ತುವರಿ ಮಾಹಿತಿಗೆ ಸಂಗ್ರಹಕ್ಕೆ ಹೊಸ ಆ್ಯಪ್

ಸೆ. 21ಕ್ಕೆ ದೆಹಲಿಯ ಮೆಟ್ರೋ ರೇಲ್ವೆ ಸುರಕ್ಷತಾ ಆಯುಕ್ತರಿಂದ (BMRCL) ಮಾರ್ಗದ ಸುರಕ್ಷತಾ ಪರಿಶೀಲನೆ ನಡೆದಿತ್ತು. ಈ ವೇಳೆ ರೇಲ್ವೆ ಸುರಕ್ಷತಾ ಆಯುಕ್ತರು ವಾಣಿಜ್ಯ ಸೇವೆ ಆರಂಭಿಸಲು ಗ್ರೀನ್ ಸಿಗ್ನಲ್ ನೀಡಿದ್ದರು. ಹೀಗಾಗಿ ಸದ್ಯ ಕೆಂಗೇರಿಯಿಂದ ತಡೆರಹಿತವಾಗಿ ವೈಟ್‌ಫೀಲ್ಡ್‌ವರೆಗೆ ಸಂಚಾರಕ್ಕೆ ದೆಹಲಿಯ ಮೆಟ್ರೋ ರೇಲ್ವೆ ಸುರಕ್ಷತಾ ಆಯುಕ್ತರು ಅನುಮತಿ‌ ನೀಡಿದ್ದರು.

ಹೀಗಾಗಿ ಈ ರೂಟ್ ನಲ್ಲಿ ಈಗ ಮೆಟ್ರೋ ಸಂಚಾರ ಆರಂಭವಾಗಲಿದೆ. ಕೆಂಗೇರಿಯಿಂದ ವೈಟ್‌ಫೀಲ್ಡ್ ಮೆಟ್ರೋ ಮಾರ್ಗದಿಂದ ಸಾವಿರಾರು ಟೆಕ್ಕಿಗಳಿಗೆ ಪ್ರಯೋಜನವಾಗಲಿದ್ದು, ರಸ್ತೆಯಲ್ಲಿ ಟ್ರಾಫಿಕ್ ಜಾಮ್ ನಿಂದ ಪರದಾಡುವುದು ತಪ್ಪಲಿದೆ. ಇದುವರೆಗೂ ಈ ಮಾರ್ಗ ನಿರ್ಮಾಣ ಅಪೂರ್ಣವಾಗಿದ್ದರಿಂದ ಐಟಿ‌ಉದ್ಯೋಗಿಗಳಿಗೆ ಕಿರಿ ಕಿರಿಯಾಗಿತ್ತು.‌

Bengaluru Namma Metro Gift It people Kengeri to Whilefield- KR Puram Namma Metro Train Start October 2nd
Image Credit : Namma Metro

ಕೆಂಗೇರಿಯಿಂದ ಮೆಟ್ರೋದಲ್ಲಿ ಬೈಯ್ಯಪ್ಪನಹಳ್ಳಿ ಯವರೆಗೆ (Kengeri To Bayyappanahalli) ಸಂಚರಿಸುತ್ತಿದ್ದ ಐಟಿ ಮಂದಿ ಬಳಿಕ ಬೈಯಪ್ಪನಹಳ್ಳಿಯಲ್ಲಿ ಇಳಿದು 2 ಕಿ.ಮೀ. ಬಸ್‌ನಲ್ಲಿ ಸಾಗುತ್ತಿದ್ದರು.‌ ಇದರಿಂದ ಬೆಳಗ್ಗೆ ಹಾಗೂ ಸಂಜೆ ವೇಳೆ ಬೈಯ್ಯಪ್ಪನಹಳ್ಳಿ ಮೆಟ್ರೋ ಸ್ಟೇಶನ್ ಹಾಗೂ ವೈಟ್ ಫಿಲ್ಡ್ ‌ನಡುವೆ (Bayyappana Halli to Whitefield) ತೀವ್ರ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿತ್ತು.

ವೈಟ್ ಫಿಲ್ಡ್ ಗಾಗಿ ಕೆ.ಆರ್.ಪುರದಲ್ಲಿ ಮೆಟ್ರೋ ಹತ್ತಿ ಮುಂದೆ ಸಾಗಬೇಕಿತ್ತು ಇದರಿಂದ ಮೆಟ್ರೊ ಪ್ರಯಾಣಿಕರಿಗೆ ಕಿರಿಕಿರಿ ಆಗ್ತಿತ್ತು. ಇದೇ ಮಾರ್ಚ್ 25ರಂದು ಪ್ರಧಾನಿ ಮೋದಿ ಕೆ.ಆರ್.ಪುರದಿಂದ ವೈಟ್ ಪಿಲ್ಡ್ ಮಾರ್ಗಕ್ಕೆ ಚಾಲನೆ ನೀಡಿ ಸ್ವತಃ ಪ್ರಯಾಣ ಬೆಳೆಸಿದ್ದರು.

ಇದನ್ನೂ ಓದಿ : 16 ದಿನಕ್ಕೆ 1700 ಡೆಂಗ್ಯೂ ಪ್ರಕರಣ : ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರದ ಆರ್ಭಟ

ಈ ವೇಳೆ ಈ ಲಿಂಕ್ ರೋಡ್ ಸಾರ್ವಜನಿಕರ ಪ್ರಯಾಣಕ್ಕೆ ಮುಕ್ತವಾಗಿರಲಿಲ್ಲ. ಈಗ ಗಾಂಧಿ ಜಯಂತಿ‌ಯಂದು ಈ ಹೊಸ ಮಾರ್ಗ ಉದ್ಘಾಟನೆಗೆ ತಯಾರಿ ನಡೆದಿದೆ. ಈ ಮಾರ್ಗ ಉದ್ಘಾಟನೆಯಿಂದ‌ ಮುಖ್ಯವಾಗಿ ಐಟಿ ಉದ್ಯೋಗಿಗಳಿಗೆ ನೆರವಾಗಲಿದ್ದು, ಮೆಟ್ರೋದ ಆದಾಯವೂ ದಿಗ್ವುಣಗೊಳ್ಳುವ ಸಾಧ್ಯತೆ ಇದೆ.

Bengaluru Namma Metro Gift It people Kengeri to Whilefield- KR Puram Namma Metro Train Start October 2nd
Image Credit : Namma metro

ಕೆಂಗೇರಿಯಿಂದ ವೈಟ್ ಫಿಲ್ಡ್ ನಡುವಿನ ದೂರ 39 ಕಿಲೋಮೀಟರ್ ದಾಗಿದ್ದು, ಈ ದೂರವನ್ನು ಬಸ್ ನಲ್ಲಿ ಕ್ರಮಿಸಲು ಟ್ರಾಫಿಕ್ ಮುಕ್ತ ರೋಡ್ ನಲ್ಲಿ 1.5 ಗಂಟೆ ತೆಗೆದುಕೊಳ್ಳುತ್ತಿತ್ತು. ಟ್ರಾಫಿಕ್ ಇದ್ದಾಗ ಈ ಸಮಯ ಮೂರು ಗಂಟೆಯನ್ನು ದಾಟುತ್ತಿತ್ತು. ಈಗ ಮೆಟ್ರೋದಿಂದ ಕೇವಲ ಅರ್ಧ ಗಂಟೆಯ ಅವಧಿ ಯಲ್ಲಿ ಪ್ರಯಾಣಿಕರು ವೈಟ್ ಫಿಲ್ಡ್ ತಲುಪಬಹುದಾಗಿದೆ. ಇದರಿಂದ ಕಾಲೇಜು ಹಾಗೂ ಐಟಿ ಉದ್ಯೋಗಿಗಳಿಗೆ ಸಮಯದ ಉಳಿತಾಯವಾಗಲಿದೆ.

Bengaluru Namma Metro GIt pift eople Kengeri to Whilefield- KR Puram Namma Metro Train Start October 2nd

Comments are closed.