ಹಳ್ಳಿಹಕ್ಕಿಯ ಒಂಟಿ ಹಾಡು….! ಎಲ್ಲರೂ ನನ್ನ ಬಿಟ್ಟು ಹೋದರು ಎಂದ ವಿಶ್ವನಾಥ್…!!

ಮೈಸೂರು: ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಮೈತ್ರಿ ಸರ್ಕಾರ ಉರುಳಿಸಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ತಂದವರ ಪೈಕಿ ಹಲವರಿಗೆ ಮರಳಿ ಅಧಿಕಾರ ದಕ್ಕಿದೆ. ಆದರೇ ಹಳ್ಳಿ ಹಕ್ಕಿ ಮಾತ್ರ ಈಗ ಒಂಟಿಯಾಗಿದೆ.

ಜೆಡಿಎಸ್ ಹಾಗೂ ಕಾಂಗ್ರೆಸ್ ಸರ್ಕಾರ ಉರುಳಿಸಿದ ೧೭ ಶಾಸಕರ ಪೈಕಿ ಬಹುತೇಕರು ಹೊಸ ಸರ್ಕಾರದಲ್ಲಿ ಅಧಿಕಾರದ ಗದ್ದುಗೆ ಹಿಡಿದಿದ್ದಾರೆ.ಆದರೆ ಮಾಜಿ ಶಾಸಕ ಎಚ್.ವಿಶ್ವನಾಥ್ ಮಾತ್ರ ಅಲ್ಲೂ ಇಲ್ಲ ಇಲ್ಲೂ ಇಲ್ಲ ಎಂಬಂತಾಗಿದ್ದು ಒಂಟಿಯಾದ ಭಾವನೆಯಲ್ಲಿ ನೊಂದು ಹೋಗಿದ್ದಾರೆ.

ಸರ್ಕಾರ ರಚನೆ ಹಾಗೂ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲೂ ತಮ್ಮ ತ್ಯಾಗಕ್ಕೆ ಬೆಲೆ ಬರಲಿದೆ ಎಂದು ಕಾದಿದ್ದ ಎಚ್.ವಿಶ್ವನಾಥ್ ಗೆ ನಿರಾಸೆ ಎದುರಾಗಿದೆ.ಎಂಟಿಬಿ ನಾಗರಾಜ್, ರಮೇಶ್ ಜಾರಕಿಹೊಳಿ, ಆರ್.ಶಂಕರ್, ಎಚ್.ನಾಗೇಶ್ ಹೀಗೆ ಹಲವರು ಸಂಪುಟ ಸೇರಿದ್ದಾರೆ.

ಆದರೆ ವಿಶ್ವನಾಥ್ ರನ್ನು ಸಂಪುಟಕ್ಕೆ ಸೇರಿಸಿಕೊಳ್ಳೋದಿರಲಿ ಸಿಎಂ ಬಿಎಸ್ವೈ ಹತ್ತಿರಕ್ಕೂ ಬಿಟ್ಟು ಕೊಂಡಿಲ್ಲ. ಹೀಗಾಗಿ ನೊಂದ ಹಳ್ಳಿ ಹಕ್ಕಿ ತನ್ನ ನೋವು ತೋಡಿಕೊಂಡಿದೆ.ಮೈಸೂರಿನಲ್ಲಿ ಮಾಧ್ಯಮಗಳ ಜೊತೆ‌ ಮಾತನಾಡಿದ ಎಚ್.ವಿಶ್ವನಾಥ್, ಯಾರಿಗೆ ಗಟ್ಟಿ ಧ್ವನಿ ಇರುತ್ತೋ ಅವನು ಒಂಟಿ ಆಗ್ತಾನೆ. ನನ್ನ ಸ್ನೇಹಿತರು ನನ್ನನ್ನು ಒಂಟಿ ಮಾಡಿ ಹೋದರು‌. ಆದರೆ ನಾನು ಒಂಟಿಯಲ್ಲ ನನ್ನ‌ಜೊತೆ ರಾಜ್ಯದ ಜನ‌ಇದ್ದಾರೆ ಎಂದಿದ್ದಾರೆ.

ನಾನು ವಾಸ್ತವದ ನೆಲೆಗಟ್ಟಿನಲ್ಲಿ ಮಾತನಾಡುತ್ತ ಬಂದವನು, ಮಂತ್ರಿಗಿರಿ ಸಿಗುತ್ತೋ ಬಿಡುತ್ತೋ ಆದರೆ ೧೭ ಜನರ ತಂಡವನ್ನು ನಾನೇ‌ ಮುನ್ನಡೆಸಿದವನು. ನನ್ನ ಗಟ್ಟಿ ಧ್ವನಿ ರಾಜ್ಯದಲ್ಲಿ ಪ್ರತಿಧ್ವನಿಸಲಿದೆ ಎಂದಿದ್ದಾರೆ.ಆದರೆ ನಾನು ಒಂಟಿ ಎಂದು ಈಗ ಅನ್ನಿಸಿದರೂ ನನ್ನ ಜೊತೆ ರಾಜ್ಯದ ಜನತೆ ಇದ್ದಾರೆ ಎಂದರು.

Comments are closed.