ಸೋಮವಾರ, ಏಪ್ರಿಲ್ 28, 2025
HomeBreakingಮುಟ್ಟಿನ ದಿನದ ನಿಯಮದ ಒಳ ಅರ್ಥ, ಆ ದಿನಗಳ ಆರೈಕೆ ಹೇಗಿರಬೇಕು ಗೊತ್ತಾ ?

ಮುಟ್ಟಿನ ದಿನದ ನಿಯಮದ ಒಳ ಅರ್ಥ, ಆ ದಿನಗಳ ಆರೈಕೆ ಹೇಗಿರಬೇಕು ಗೊತ್ತಾ ?

- Advertisement -

ಮುಟ್ಟಿನ ಗುಟ್ಟು ನಮ್ಮ ಹಿರಿಯರಿಗೆ ಸರಿಯಾಗಿ ತಿಳಿದ್ದಿತ್ತು. ಆದರಿಂದಲೇ ನಮ್ಮ ಹಿರಿಯರು ಮುಟ್ಟಿನ ಹೆಣ್ಣಿಗೆಂದೇ ಕೆಲವೊಂದು ನಿಯಮಗಳನ್ನು ಮಾಡಿ ಅದನ್ನೂ ಪಾಲಿಸುತ್ತಿದ್ದರು. ಮುಟ್ಟಾದ ಹುಡುಗಿ ಅಥವ ಮಹಿಳೆ ಅಡಿಗೆ ಮನೆ, ದೇವರ ಮನೆಗೆ ಹೋಗ ಬಾರದು ಬಾವಿ ಮುಟ್ಟಬಾರದು ಮುಟ್ಟಿನ ದಿನದಲ್ಲಿ ಗಂಡನ ಜೊತೆ ಮಲಗಬಾರದು ಅಂತೆಲ್ಲಾ ನಿಯಮಗಳನ್ನು ಮಾಡಿದ್ದರು. ಈ ನಿಯಮಗಳ ಒಳ ಅರ್ಥ ಸರಿಯಾಗಿ ತಿಳಿಯದೆ ಹಲವು ಮಂದಿ ಇದೆಲ್ಲಾ ಮೂಡ ನಂಬಿಕೆ, ಹೆಣ್ಣಿನ ಶೋಷಣೆ ಅನ್ನುವವರು ಇದ್ದಾರೆ.

ಆದರೆ ಈ ಎಲ್ಲಾ ನಿಯಮಗಳ ಒಳ ಅರ್ಥ ಮುಟ್ಟಿನ ದಿನದಲ್ಲಿ ಆ ಹೆಣ್ಣಿನ ಆರೈಕೆ ಯಾಗಿತ್ತು. ಆ ಸಮಯದಲ್ಲಿ ಅವಳಿಗೆ ವಿಶ್ರಾಂತಿ ದೊರಕಿಸುವ ಉದ್ದೇಶ ದಿಂದ ಈ ಎಲ್ಲಾ ನಿಯಮಗಳನ್ನು ಮಾಡಲಾಗಿತ್ತು. ಅಲ್ಲದೇ ಗಂಡನ ಬಳಿ ಮಲಗಬಾರದು ಎಂಬ ನಿಯಮದ ಒಳ ಅರ್ಥ ಸಾಮಾನ್ಯವಾಗಿ ಗಂಡ ಹೆಂಡತಿ ಒಟ್ಟಿಗೆ ಮಲಗಿದರೆ ಅವರಿಬ್ಬರು ಸೇರುತ್ತಾರೆ. ಆದರೆ ಮುಟ್ಟಿನ ದಿನಗಳಲ್ಲಿ ಆ ಮಹಿಳೆಗೆ ಮುಟ್ಟಿನ ನೋವೆ ಸಾಕಷ್ಟಿರುತ್ತದೆ. ಅಲ್ಲದೇ ಆ ಸಮಯದಲ್ಲಿ ಲೈಂಗಿಕ ಕ್ರಿಯೆ ನಡೆಸಿದರೆ ಆ ಮಹಿಳೆಯ ಆರೋಗ್ಯಕ್ಕೆ ತೊಂದರೆ ಉಂಟಾಗುತ್ತದೆ.

ಇದನ್ನೂ ಓದಿ: Ghee Benefits : ಬುದ್ಧಿಶಕ್ತಿಯನ್ನು ಹೆಚ್ಚಿಸುತ್ತೆ ತುಪ್ಪ : ನಿತ್ಯ ಬಳಕೆಯಿಂದ ಹಲವು ಅನುಕೂಲ

ಸಾಮಾನ್ಯವಾಗಿ ಹುಡುಗಿಯರಿಂದ ಹಿಡಿದು ಮುಟ್ಟು ನಿಲ್ಲುವ ಮಹಿಳೆಯವರೆಗೆ ಎಲ್ಲರನ್ನೂ ಕಾಡುವ ಒಂದು ಪ್ರಶ್ನೆ ಮುಟ್ಟಿನ ವೇಳೆ ಏನು ಮಾಡಬೇಕು ? ಏನು ಮಾಡಬಾರದು ಎಂಬುದು. ನೀವು ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿರಿ ಅಥವಾ ವ್ರತ ಮಾಡ್ತಿರಿ. ಮುಟ್ಟಿನ ಸಮಯದಲ್ಲಿ ಇದನ್ನು ಅನುಸರಿಸಬೇಡಿ. ಮುಟ್ಟಿನ ದಿನಗಳಲ್ಲಿ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಿ. ಸರಿಯಾದ ಸಮಯದಲ್ಲಿ ಪೌಷ್ಠಿಕ ಆಹಾರವನ್ನು ನೀವು ಸೇವಿಸಬೇಕಾಗುತ್ತದೆ. ಕಡಿಮೆ ರಕ್ತಸ್ರಾವವಾಗುವವರು ಪ್ಯಾಡ್ ಬದಲಿಸಲು ಆಲಸ್ಯ ಮಾಡ್ತಾರೆ. ಇದು ಸಾಂಕ್ರಾಮಿಕ ರೋಗಕ್ಕೆ ಕಾರಣವಾಗುತ್ತದೆ. ಹಾಗಾಗಿ ನಿರ್ದಿಷ್ಟ ಸಮಯಕ್ಕೆ ಪ್ಯಾಡ್ ಬದಲಿಸುವ ಅಭ್ಯಾಸ ಮಾಡಿಕೊಳ್ಳಿ.

ಇದನ್ನೂ ಓದಿ: Bed Tea : ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವ ಅಭ್ಯಾಸವಿದ್ಯಾ ? ಹಾಗಾದ್ರೆ ಹುಷಾರಾಗಿರಿ !

ಇದು ಸೋಂಕಿನಿಂದ ರಕ್ಷಣೆ ನೀಡುತ್ತದೆ. ಈ ಅವಧಿಯಲ್ಲಿ ಕಿರಿಕಿರಿ ಸಾಮಾನ್ಯ. ಸಕ್ಕರೆ ಅಥವಾ ಜಂಕ್ ಫುಡ್‌ ಸೇವನೆಯಿಂದ ದೂರವಿರಿ. ಇದು ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಬೆವರಿಳಿಸುವ ವ್ಯಾಯಾಮದ ರೂಢಿ ನಿಮಗಿದ್ದರೆ ಈ ಸಮಯದಲ್ಲಿ ಅದ್ರಿಂದ ದೂರವಿರಿ. ವಾಕಿಂಗ್ ಸೇರಿದಂತೆ ಸಣ್ಣಪುಟ್ಟ ವ್ಯಾಯಾಮವನ್ನು ಮಾಡಬಹುದು. ಫ್ಯಾಮಿಲಿ ಪ್ಲಾನಿಂಗ್ ನಲ್ಲಿರುವವರು ಮುಟ್ಟಿನ ಸಮಯದಲ್ಲಿ ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಬೇಡಿ. ಇದು ನಿಮ್ಮನ್ನು ತೊಂದರೆಗೆ ತಳ್ಳುತ್ತದೆ. ಮುಟ್ಟಿನ ಸಮಯದಲ್ಲಿ ಜನನಾಂಗವನ್ನು ಸೋಪಿನಿಂದ ಸ್ವಚ್ಛಗೊಳಿಸಬೇಡಿ. ಹಾಗೆ ವೆಟ್ ಟಿಶ್ಯೂ ಬಳಸಬೇಡಿ. ಜನನಾಂಗವನ್ನು ಬಿಸಿ ನೀರಿನಿಂದ ಸ್ವಚ್ಛಗೊಳಿಸಿ. ಆದಷ್ಟು ವಿಶ್ರಾಂತಿ ಪಡೆದು ಕೊಳ್ಳಿ. ತಂಪು ಪದಾರ್ಥವನ್ನು ಸೇವಿಸಿ ಆದಷ್ಟು ದೇಹವನ್ನು ತಂಪಾಗಿ ಇಟ್ಟು ಕೊಳ್ಳಲು ಪ್ರಯತ್ನಿಸಿದರೆ ಉತ್ತಮ.

(The inner meaning of the menstrual day rule, do you know what those days should look like?)

RELATED ARTICLES

Most Popular