ಬೆಂಗಳೂರು : ಕೊರೊನಾ ವೈರಸ್ ಸೋಂಕು ಹರಡುತ್ತಿರೋ ಬೆನ್ನಲ್ಲೇ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಧಾರಾಕಾರವಾಗಿ ಮಳೆ ಸುರಿದಿದೆ. ಬೆಂಗಳೂರಿನ ಲಗ್ಗೆರೆ ಬಳಿಯಲ್ಲಿ ಭೂಕುಸಿತವಾಗಿದ್ದು ಕಾರುಗಳಿಗೆ ಹಾನಿಯಾಗಿದೆ. ರಾತ್ರಿಯಿಂದಲೂ ಬೆಂಗಳೂರು ನಗರದ ರಾಜಾಜಿನಗರ, ಮಲ್ಲೇಶ್ವರಂ, ಪೀಣ್ಯಾ, ವಿಧಾನಸೌಧ, ಟೌನ್ ಹಾಲ್, ಮೆಜಿಸ್ಟಿಕ್, ಮಾರ್ಕೆಟ್, ಸದ್ದುಗುಂಟೆ ಪಾಳ್ಯ, ಕೋರಮಂಗಲ ಮುಂತಾದ ಕಡೆಗಳಲ್ಲಿ ಧಾರಕಾರವಾಗಿ ಮಳೆ ಸುರಿದೆ.

ಅರಬ್ಬಿ ಸಮುದ್ರದಲ್ಲಿನ ಮೇಲ್ಮೈ ಸುಳಿಗಾಳಿಯಿಂದಾಗಿ ಇನ್ನೂ ಮೂರು ದಿನಗಳ ಕಾಲ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಬಾರೀ ಪ್ರಮಾಣದಲ್ಲಿ ಮಳೆ ಸುರಿಯುವ ಸಾಧ್ಯತೆಯಿದೆ.

ಬೆಂಗಳೂರು ನಗರದಲ್ಲಿ ನಿನ್ನೆ ರಾತ್ರಿಯಿಂದ ಸರಾಸರಿ 14 ಮಿ.ಮೀ. ಮಳೆಯಾಗಿದ್ದು, ಮುಂದಿನ ಮೂರು ದಿನಗಳಲ್ಲಿ ಉತ್ತಮವಾಗಿ ಮಳೆ ಸುರಿಯೋ ಸಾಧ್ಯತೆಯಿದೆ.

ಕೇವಲ ಬೆಂಗಳೂರು ಮಾತ್ರವಲ್ಲದೇ ಮೈಸೂರು, ಮಂಡ್ಯ, ಹಾಸನ, ಕೊಡಗು ಜಿಲ್ಲೆಗಳಲ್ಲಿಯೂ ಉತ್ತಮವಾಗಿ ಮಳೆ ಸುರಿದಿದೆ. ಇದೀಗ ಕೊರೊನಾ ಸೋಂಕು ಹರಡುತ್ತಿರೋ ಬೆನ್ನಲ್ಲೇ ಇದೀಗ ಮಳೆ ಸುರಿಯುತ್ತಿರೋದ್ರಿಂದಾಗಿ ಕೊರೊನಾ ಸೋಂಕು ವ್ಯಾಪಿಸುತ್ತೇ ಅನ್ನೋ ಆತಂಕ ಎದುರಾಗಿದೆ.