ಲಾಠಿ ಬೀಸಿದ ಪೊಲೀಸರ ವಿರುದ್ಧ ಸಮರ…! ಹೈಕೋರ್ಟ್ ಗರಂ..! ಪಿಐಎಲ್ ಅರ್ಜಿ ವಜಾ, ಅರ್ಜಿದಾರರಿಗೆ ದಂಡ ..!!

ಬೆಂಗಳೂರು: ಲಾಕ್ ಡೌನ್ ಜಾರಿ ಸಂದರ್ಭದಲ್ಲಿ ಜನರ ಮೇಲೆ ಖಾಕಿ ಪಡೆ ಮನಬಂದಂತೆ ಲಾಠಿ ಬೀಸಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರ ವರ್ತನೆ ಅಮಾನವೀಯ ಎಂದು ಹೈಕೋರ್ಟ್ ಮೊರೆ ಹೋಗಿದ್ದ ಅರ್ಜಿದಾರರ ವಿರುದ್ಧ ಹೈಕೋರ್ಟ್ ಗರಂ ಆಗಿದ್ದು,ದಂಡ ವಿಧಿಸಿದೆ.

https://kannada.newsnext.live/lock-down-vehicle-seize-kundapura/
https://kannada.newsnext.live/sandalwood-meghanaraj-chirusarja-jr-chiru-corona-covid-19-panick/

ಲಾಕ್ ಡೌನ್ ಸಂದರ್ಭದಲ್ಲಿ ಹೊರಗಡೆ ಓಡಾಡಿದ್ದ ಜನರ ಮೇಲೆ ಅಮಾನವೀಯವಾಗಿ ಲಾಠಿ ಬೀಸಿದ ಪೊಲೀಸರ ವಿರುದ್ಧ ಎಫ್ಆಯ್ಆರ್ ದಾಖಲಿಸಬೇಕೆಂದು ಕಾರ್ಮಿಕರ ಪರ ನ್ಯಾಯವಾದಿ ಬಾಲಕೃಷ್ಣನ್ ಅರ್ಜಿ ಸಲ್ಲಿಸಿದ್ದರು.

https://kannada.newsnext.live/sandalwood-bollywood-rashmika-kirikparty-hindi-remake-doesnot-star/

ನ್ಯಾಯವಾದಿ ಬಾಲಕೃಷ್ಣನ್ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ನ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಹಾಗೂ ಎಂ.ನಾಗಪ್ರಸನ್ನ ಅವರ ನ್ಯಾಯಪೀಠ ಕೊವೀಡ್ ನಿರ್ವಹಣೆ ವೇಳೆ ಎಷ್ಟು ಪೊಲೀಸರು ಸತ್ತಿದ್ದಾರೆ ನಿಮಗೆ ತಿಳಿದಿದೆಯೇ ಎಂದು ಪ್ರಶ್ನಿಸಿದೆ.

ಅಲ್ಲದೇ, ಪೊಲೀಸರು ಬಾಯಿ ಮಾತಿನಲ್ಲಿ ಹೇಳಿದರೇ ಅರ್ಥ ಮಾಡಿಕೊಳ್ಳುತ್ತಾರಾ? ನಮ್ಮ ಜನರು ಅಷ್ಟು ನಾಗರೀಕರಾಗಿದ್ದಾರಾ ಎಂದು ಅರ್ಜಿದಾರರಿಗೆ ಹೈಕೋರ್ಟ್ ಪೀಠ ಪ್ರಶ್ನಿಸಿತು.ಪ್ರಕರಣದ ವಿಚಾರಣೆಗೆ ಅಗತ್ಯ ಪುರಾವೆಗಳನ್ನು ಒದಗಿಸಲಾಗಿಲ್ಲ. ಕೆಲ ಪೊಲೀಸರು ತಾಳ್ಮೆಮೀರಿ ವರ್ತಿಸಿರಬಹುದು. ಅದಕ್ಕಾಗಿ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಿಸಿದೆ.

 ಈ ಪ್ರಕರಣದ ವಿಚಾರಣೆ ಸಾಧ್ಯವಿಲ್ಲವೆಂದು ಅಭಿಪ್ರಾಯಿಸಿದ ನ್ಯಾಯಾಲಯ ಅರ್ಜಿ ವಜಾಗೊಳಿಸಿದ್ದಲ್ಲದೇ, ಅರ್ಜಿದಾರರಿಗೆ 1 ಸಾವಿರ ರೂಪಾಯಿ ದಂಡ ವಿಧಿಸಿದೆ.

Comments are closed.