ಮಂಗಳೂರು : ಮಾಸ್ಕ್ ಹಾಕದೆ ಸಿಬ್ಬಂದಿಗೆ ಅವಾಜ್ ಹಾಕಿದ್ದ ವೈದ್ಯ ಕಕ್ಕಿಲಾಯ ವಿರುದ್ದ FIR

ಮಂಗಳೂರು : ಮಾಸ್ಕ್ ಹಾಕದೆ ಸೂಪರ್ ಮಾರ್ಕೇಟ್ ಗೆ ಬಂದು ಸಿಬ್ಬಂದಿಗೆ ಅವಾಜ್ ಹಾಕಿದ್ದ ವೈದ್ಯ ಡಾ.ಶ್ರೀನಿವಾಸ ಕಕ್ಕಿಲಾಯ ವಿರುದ್ದ ಇದೀಗ ಮಂಗಳೂರು ಪೊಲೀಸರು ದೂರು ದಾಖಲು ಮಾಡಿದ್ದಾರೆ.

ಮಂಗಳೂರು ನಗರದ ಕದ್ರಿಯಲ್ಲಿರುವ ಸೂಪರ್ ಮಾರ್ಕೇಟ್ ಗೆ ಶ್ರೀನಿವಾಸ ಕಕ್ಕಿಲಾಯ ಮಾಸ್ಕ್ ಹಾಕದೆ ಬಂದಿದ್ದರು. ಇದನ್ನು ಸೂಪರ್ ಮಾರ್ಕೇಟ್ ಸಿಬ್ಬಂದಿ ಪ್ರಶ್ನಿಸಿದ್ದಾರೆ. ಈ ವೇಳೆಯಲ್ಲಿ ವೈದ್ಯರು ಸಿಬ್ಬಂದಿಗೆ ಅವಾಜ್ ಹಾಕಿದ್ದಾರೆ. ಅಲ್ಲದೇ ಸರಕಾರದ ದಡ್ಡ ನಿರ್ಧಾರಗಳನ್ನು ತಾನು ಪಾಲನೆ ಮಾಡೋದಿಲ್ಲ ಎಂದಿದ್ದರು. ಮಾಸ್ಕ್ ಹಾಕಬೇಕು ಅನ್ನೋದು ಪೂಲಿಶ್ ಕಾನೂನು ಎಂದು ಹೇಳಿದ್ದರು.

ಡಾ.ಕಕ್ಕಿಲಾಯ ಸೂಪರ್ ಮಾರ್ಕೇಟ್ ಸಿಬ್ಬಂದಿಗಳಿಗೆ ಅವಾಜ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಾರ್ವಜನಿಕರು ಕೂಡ ವೈದ್ಯರ ಕ್ರಮವನ್ನು ಪ್ರಶ್ನಿಸಿದ್ದರು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಯ ವಿರುದ್ದವೂ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಮಂಗಳೂರಿನ ಕದ್ರಿ ಪೊಲೀಸ್ ಠಾಣೆಯಲ್ಲಿ ಡಾ. ಶ್ರೀನಿವಾಸ ಕಕ್ಕಿಲಾಯ ವಿರುದ್ದ ಪ್ರಕರಣ ದಾಖಲಾಗಿದೆ. ಸೂಪರ್ ಮಾರ್ಕೇಟ್ ಮಾಲೀಕರ ಮೂಲಕ ದೂರು ಪಡೆಯಲಾಗಿದೆ. ಮಾಸ್ಕ್ ಧರಿಸದ ವೈದ್ಯರಿಗೆ ನೋಟಿಸ್ ನೀಡಿ ತನಿಖೆಯನ್ನು ನಡೆಸುವಂತೆ ತನಿಖಾಧಿಕಾರಿಗಳಿಗೆ ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು ಸೂಚಿಸಿದ್ದಾರೆ.

https://kannada.newsnext.live/sandalwood-meghanaraj-chirusarja-jr-chiru-corona-covid-19-panick/

ಶ್ರೀನಿವಾಸ ಕಕ್ಕಿಲಾಯ ಕೊರೊನಾ ಸೋಂಕು ಕಾಣಿಸಿಕೊಂಡ ಬೆನ್ನಲ್ಲೇ ರಾಜ್ಯ ಸರಕಾರ ಕೈಗೊಂಡಿರುವ ಕ್ರಮಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಕಳೆದೊಂದು ವರ್ಷದಿಂದಲೂ ಮಾಸ್ಕ್ ಹಾಗೂ ಪಿಪಿಇ ಕಿಟ್ ಧರಿಸದೇ ತಾನು ರೋಗಿಗಳಿಗೆ ಚಿಕಿತ್ಸೆ ನೀಡಿದ್ದೇನೆ ಎಂದಿದ್ದರು. ಅಲ್ಲದೇ ಕೊರೊನಾ ವಿಚಾರದಲ್ಲಿ ಹಲವು ಬಾರಿ ಕ್ರಮಗಳನ್ನು ವಿರೋಧಿಸಿದ್ದರು. ಆದ್ರೀಗ ಪೊಲೀಸ್ ಇಲಾಖೆ ಕಕ್ಕಿಲಾಯ ವಿರುದ್ದ ದೂರು ದಾಖಲಿಸಿಕೊಂಡು ತನಿಖೆಗೆ ಆದೇಶಿಸಿದೆ.

https://kannada.newsnext.live/lock-down-vehicle-seize-kundapura/
https://kannada.newsnext.live/sandalwood-bollywood-rashmika-kirikparty-hindi-remake-doesnot-star/

Comments are closed.