- ರಕ್ಷಾ ಬಡಾಮನೆ
ಬೆಳಿಗ್ಗೆ ಎದ್ದ ಕೂಡಲೇ ಹಲವರು ಖಾಲಿ ಹೊಟ್ಟೆಯಲ್ಲಿ ಟೀ, ಕಾಫಿ ಕುಡಿಯುತ್ತಾರೆ. ಇನ್ನೂ ಹಲವರು ಮುಖ ತೊಳೆಯದೆಯೇ ನೀರು ಕುಡಿಯೋದು ವಾಡಿಕೆ. ಹೀಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ನಮ್ಮ ದೇಹಕ್ಕಾಗುವ ಲಾಭವನ್ನು ಕೇಳಿದ್ರೆ ನಿಜಕ್ಕೂ ಆಶ್ಚರ್ಯ ಪಡ್ತೀರಿ.

ಹೊಟ್ಟೆನೋವು, ಜ್ವರ, ತೂಕ ಕಡಿಮೆ, ಒಣ ಚರ್ಮ ಹೀಗೆ ನಾನಾ ಸಮಸ್ಯೆಯನ್ನು ಹೇಳಿಕೊಂಡು ವೈದ್ಯರ ಬಳಿ ಹೋದ್ರೆ ಡಾಕ್ಟರ್ ನಮ್ಮ ಹತ್ರ ಹೇಳೋದು ಒಂದೇ ಹೆಚ್ಚು ನೀರು ಕುಡಿಯಿರಿ ಅಂತಾ. ಬಹುತೇಕ ಆರೋಗ್ಯ ಸಮಸ್ಯೆಗೆ ಕಾರಣವಾಗುವುದು ದೇಹದಲ್ಲಿರುವ ನೀರಿನ ಅಂಶ. ಅತೀ ಹೆಚ್ಚು ನೀರು ಕುಡಿಯುವುದರಿಂದ ಆರೋಗ್ಯವಂತರಾಗಬಹುದು.

ನೀರು ಬಿಸಿಯೆ ಇರಲಿ ತಣ್ಣಗೆ ಇರಲಿ ದಿನಕ್ಕೆ ಕನಿಷ್ಠ 2 ರಿಂದ 2.5 ಲೀಟರ್ ನೀರು ಕುಡಿಯಲೇ ಬೇಕು. ದೇಹದ ತೂಕದ ಆಧಾರದ ಮೇಲೆ ನಾವು ಕುಡಿಯೋ ನೀರಿನ ಪ್ರಯಾಣ ನಿರ್ಧಾರವಾಗುತ್ತದೆ. ಅದರಲ್ಲೂ ಬೆಳಿಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಉಪಯೋಗಗಳು ನೂರಾರು.

ಚರ್ಮದಲ್ಲಿನ ಸಮಸ್ಯೆ ಕಾಣಿಸಿಕೊಳ್ಳಲು ಬಹುಮುಖ್ಯ ಕಾರಣ ದೇಹದಲ್ಲಿರುವ ನೀರಿನ ಅಂಶ. ಚರ್ಮ ಸುಕ್ಕು ಗಟ್ಟಿದ್ದರೆ ಅಥವಾ ಒಣಚರ್ಮದ ಸಮಸ್ಯೆಯಿಂದ ಬಳಲುತ್ತಿದ್ರೆ ಹೆಚ್ಚು ಪ್ರಯಾಣದಲ್ಲಿ ನೀರು ಕುಡಿಯುವುದು ಉತ್ತಮ.

ಬೆಳಗ್ಗೆ ಎದ್ದ ಕೂಡಲೇ ನೀರು ಕುಡಿಯುವುದರಿಂದ ಮಲವಿಸರ್ಜನೆ ಸುಗಮವಾಗುತ್ತದೆ. ನೀರು ದೇಹದಲ್ಲಿ ಅಮೃತದಂತೆ ಕೆಲಸ ಮಾಡುತ್ತದೆ. ಇದರಿಂದ ದೇಹವು ತ್ಯಾಜ್ಯ ಮುಕ್ತವಾಗುತ್ತದೆ. ಕರುಳಿನ ಆರೋಗ್ಯವು ಚೆನ್ನಾಗಿರುತ್ತದೆ.

ದಿನ ನಾವು ತಿನ್ನುವ ಆಹಾರ ಅಥವಾ ಉಸಿರಾಡುವ ಗಾಳಿಯಿಂದ ನಮ್ಮ ದೇಹಕ್ಕೆ ವಿಷಕಾರಿ ಅಂಶಗಳು ಬರುತ್ತವೆ. ಆದರೆ ನಾವು ಹೆಚ್ಚು ನೀರು ಕುಡಿದು ಮೂತ್ರ ವಿಸರ್ಜನೆಯ ಮೂಲಕ ಆ ಅಂಶಗಳನ್ನು ಹೊರಹಾಕಬಹುದು.

ದೇಹದಲ್ಲಿ ನೀರು ಕಡಿಮೆಯಾಗುವುದರಿಂದ ತಲೆನೋವು ಕಾಣಿಸಿಕೊಳ್ಳಬಹುದು. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವುದು ಗ್ಯಾಸ್ಟ್ರಿಕ್ ಗೆ ಕಾರಣವಾಗುತ್ತದೆ. ಆದ್ದರಿಂದ ನೀರು ಕುಡಿಯುವುದರಿಂದ ತಲೆನೋವಿನ ಸಮಸ್ಯೆಯಿಂದಲೂ ಮುಕ್ತಿಯನ್ನು ಪಡೆಯಬಹುದು.

ನಿಮಗೆ ಹಸಿವೆಯ ಸಮಸ್ಯೆ ಕಾಡುತ್ತಿದ್ರೆ, ನೀವು ಹೆಚ್ಚಾಗಿ ನೀರು ಕುಡಿಯಬೇಕು. ನೀರು ಕುಡಿಯವುದರಿಂದ ಆಹಾಯವು ಜೀರ್ಣವಾಗುವುದರ ಜೊತೆಗೆ ಹಸಿವೆಯ ಸಮಸ್ಯೆಯನ್ನು ನೀಗುತ್ತದೆ. ಇನ್ನು ಕರಳು ಸ್ವಚ್ಚವಾಗುವುದರಿಂದ ಆರೋಗ್ಯವಂತರಾಗಬಹುದು.

ನಮ್ಮ ದೇಹಕ್ಕೆ ಎಷ್ಟು ಪ್ರಮಾಣದಲ್ಲಿ ನೀರು ಅಗತ್ಯವಿದೆಯೇ ಅಷ್ಟು ಪ್ರಮಾಣದಲ್ಲಿ ನೀರನ್ನು ನಿತ್ಯವೂ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧ ಔಕ್ತಿಯೂ ಹೆಚ್ಚುತ್ತದೆ.

ಒತ್ತಡ ಮತ್ತು ಕಿನ್ನತೆಯಿಂದ ಬಳಲುತ್ತಿದ್ದರೆ ನೀವು ಅದರಿಂದ ಹೊರಗೆ ಬರಲು ತುಂಬಾ ನೀರು ಕುಡಿಯುವುದು ಉತ್ತಮ.

ಋತುಚಕ್ರದ ಸಮಯದಲ್ಲಿ ಉಂಟಾಗುವ ಸೆಳೆತವನ್ನು ಬಿಸಿ ನೀರು ಕುಡಿಯುವುದರ ಮೂಲಕ ನಿಯಂತ್ರಿಸಬಹುದು.

ನಿಮ್ಮ ಕರುಳಿನ ಕ್ರಿಯೆ ಸರಿಯಾಗಿ ಇರದ ಸಂದರ್ಭದಲ್ಲಿ ಮೊಡವೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಿಮ್ಮ ಕರುಳಿನ ಕ್ರಿಯೆ ನಿಯಮಿತವಾಗಿದ್ದರೆ ಮ್ಮ ಮುಖದಲ್ಲಿ ಮೊಡವೆಗಳು ಕಡಿಮೆಯಿರುತ್ತದೆ. ಇದಕ್ಕೆ ನೀವು ಹೆಚ್ಚು ಹೆಚ್ಚು ನೀರು ಕುಡಿಯಬೇಕು.
ಇದನ್ನೂ ಓದಿ : ಮಕ್ಕಳ ಮಾನಸಿಕ ಅನಾರೋಗ್ಯಕ್ಕೆ ಕಾರಣವಾಗುತ್ತೆ ಮೊಬೈಲ್, ಲ್ಯಾಪ್ ಟಾಪ್ ಗೀಳು
ಇದನ್ನೂ ಓದಿ : ನಿದ್ರಿಸೋ ಮುನ್ನ ಜೇನು ಸೇವನೆಯ ಲಾಭ ನಿಮಗೆ ಗೊತ್ತಾ ?