ವೈಭವ್‌ ಸೂರ್ಯವಂಶಿ ಹೊರಗಿಟ್ರು ಗೆಲುವು ಕಾರಣ ಭಾರತ, ಲಯಕ್ಕೆ ಮರಳದ ಸಂಜು ಸ್ಯಾಮ್ಸನ್‌, ಅಯ್ಯರ್‌

ಅನುಭವಿ ಆಟಗಾರರನ್ನು ಹೊರಗಿಟ್ಟು ಕೇವಲ ಯುವ ಆಟಗಾರರ ಪಡೆಯೊಂದಿಗೆ ಐರ್ಲೆಂಡ್‌, ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳಿದ್ದ ಭಾರತ ಕ್ರಿಕೆಟ್‌ ತಂಡಕ್ಕೆ ಸರಣಿ ಸೋಲಿನ ಉಡುಗೊರೆ ಧಕ್ಕಿದೆ.

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಐದು ಪಂದ್ಯಗಳ ಟಿ20 ಸರಣಿಯಲ್ಲಿಯೂ ಭಾರತ ಹೀನಾಯ ಸೋಲು ಕಂಡಿದೆ. ಕೊನೆಯ ಟಿ20 ಪಂದ್ಯದಲ್ಲಿ ಯುವ ಸ್ಪೋಟಕ ಆಟಗಾರ ವೈಭವ್‌ ಸೂರ್ಯವಂಶಿಯನ್ನು ಆಡುವ ಬಳಗದಿಂದ ಹೊರಗಿಟ್ಟರೂ ಕೂಡ ಸಂಜು ಸ್ಯಾಮ್ಸನ್‌, ಶ್ರೇಯಸ್‌ ಅಯ್ಯರ್‌ ಫಾರ್ಮ್‌ಗೆ ಮರಳಲೇ ಇಲ್ಲ. ಕೊನೆಗೂ ಭಾರತ ಇಂಗ್ಲೆಂಡ್‌ ವಿರುದ್ದ ಸರಣಿ ಸೋಲು ಕಂಡಿದೆ.

ಅನುಭವಿ ಆಟಗಾರರನ್ನು ಹೊರಗಿಟ್ಟು ಕೇವಲ ಯುವ ಆಟಗಾರರ ಪಡೆಯೊಂದಿಗೆ ಐರ್ಲೆಂಡ್‌, ಇಂಗ್ಲೆಂಡ್‌ ಪ್ರವಾಸಕ್ಕೆ ತೆರಳಿದ್ದ ಭಾರತ ಕ್ರಿಕೆಟ್‌ ತಂಡಕ್ಕೆ ಸರಣಿ ಸೋಲಿನ ಉಡುಗೊರೆ ಧಕ್ಕಿದೆ. ಇಂಗ್ಲೆಂಡ್‌ ವಿರುದ್ದದ ಐದು ಪಂದ್ಯದ ಸರಣಿಯಲ್ಲಿ ಸತತ ಮೂರು ಸೋಲು ಕಂಡಿದ್ದ ಭಾರತ ಕ್ರಿಕೆಟ್‌ ತಂಡ ಕೊನೆಯ ಪಂದ್ಯದಲ್ಲಾದ್ರೂ ಗೆಲುವು ಕಾಣುತ್ತೆ ಅನ್ನೋ ನಿರೀಕ್ಷೆಯಲ್ಲಿ ಕೋಟ್ಯಾಂತರ ಅಭಿಮಾನಿಗಳಿದ್ರು.

ವೈಭವ್‌ ಸೂರ್ಯವಂಶಿ ಔಟ್‌, ಸ್ಯಾಮ್ಸನ್‌ ಇನ್‌

ಅಂತಿಮ ಟಿ20 ಪಂದ್ಯದಲ್ಲಿ ವೈಭವ್‌ ಸೂರ್ಯವಂಶಿಯನ್ನು ಹೊರಗಿಟ್ಟು, ಸಂಜು ಸ್ಯಾಮ್ಸನ್‌ಗೆ ಮಣೆ ಹಾಕಲಾಗಿತ್ತು. ಆದರೆ ಸಂಜು ಸ್ಯಾಮ್ಸನ್‌ ಆರಂಭದಲ್ಲಿ ಸ್ಪೋಟಕ ಆಟದ ಪ್ರದರ್ಶನ ನೀಡಿದ್ರೂ ಕೂಡ ಅವರ ಆಟ ಕೇವಲ 20 ರನ್‌ಗಳಿಗೆ ಕೊನೆ ಆಯ್ತು. ಸತತ ವೈಫಲ್ಯ ಅನುಭವಿಸಿದ್ದ ಇಶಾನ್‌ ಕಿಶಾನ್‌ ಹಾಗೂ ತಿಲಕ್‌ ವರ್ಮಾ ಅಂತಿಮ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ್ರೆ, ನಾಯಕ ಶ್ರೇಯಸ್‌ ಅಯ್ಯರ್‌, ತಿಲಕ್‌ ವರ್ಮಾ, ಸೂರ್ಯಾಂಶ ಶಡ್ಗೆ ಹಾಗೂ ಅಕ್ಷರ್‌ ಪಟೇಲ್‌ ನಿರಾಸೆ ಮೂಡಿಸಿದ್ರು.

ಭಾರತ ಬೌಲಿಂಗ್‌ ಪಡೆಯಂತೂ ದುರ್ಬಲವಾಗಿತ್ತು.  ಜೋಸ್‌ ಬಟ್ಲರ್‌ (jos buttler) ಆರ್ಭಟದ ಮುಂದೆ ಭಾರತೀಯ ಭೌಲರ್‌ಗಳು ಮಂಕಾಗಿದ್ದರು. ಅದ್ರಲ್ಲೂ ಅಕ್ಷರ್‌ ಪಟೇಲ್‌ , ಪ್ರಿನ್ಸ್‌ ಯಾದಬ್‌ ಬಲು ದುಬಾರಿಯಾಗಿ ಪರಿಣಮಿಸಿದ್ರು. ಕೇವಲ 4 ಓವರ್‌ ಬೌಲಿಂಗ್‌ ಮಾಡಿದ್ದ ಇಬ್ಬರು ಬೌಲರ್‌ಗಳು ಬರೋಬ್ಬರಿ 60 ರನ್‌ಗಳನ್ನು ಬಿಟ್ಟು ಕೊಟ್ಟಿದ್ರು. ಉಳಿದಮದ ಪ್ರಸಿದ್ದ ಕೃಷ್ಣ (prasidh krishna) 1, ಶಿವಂ ದುಬೆ 2 ವಿಕೆಟ್‌ ಪಡೆದಿರುವುದು ಹೊರತು ಪಡಿಸಿದ್ರೆ, ಉಳಿದ ಯಾವ ಆಟಗಾರರು ಕೂಡ ವಿಕೆಟ್‌ ಪಡೆಯೋದಕ್ಕೆ ಪರದಾಡಿದ್ರು.

ಟೀಂ ಇಂಡಿಯಾ ಕೋಚ್‌ ಗಂಭೀರ್ ವೈಫಲ್ಯ,ಆಕ್ರೋಶ

ಟೀಂ ಇಂಡಿಯಾದ ಕೋಚ್‌ ಆಗಿರುವ ಗೌತಮ್‌ ಗಂಭೀರ್‌ ಅನುಭವಿ ಆಟಗಾರರನ್ನು ಹೊರಗಿಟ್ಟು ಕೇವಲ ಯುವ ಆಟಗಾರರಿಗೆ ಮಾತ್ರವೇ ಕಣೆ ಹಾಕ್ತಾ ಇರೋದು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ. ಐರ್ಲೆಂಡ್‌ ವಿರುದ್ದದ ಸೋಲನ್ನು ಭಾರತ ಕ್ರಿಕೆಟ್‌ ತಂಡಕ್ಕೆ ಜೀರ್ಣಿಸಿಕೊಳ್ಳುವುದಕ್ಕೆ ಸಾಧ್ಯವಾಗ್ತಿಲ್ಲ. ಮತ್ತೊಂದೆಡೆಯಲ್ಲಿ ಇಂಗ್ಲೆಂಡ್‌ ತಂಡದ ವಿರುದ್ದವೂ ಭಾರತ ಸರಣಿ ಸೋಲಿನ ರುಚಿ ಕಂಡಿದೆ.

ಟೀಂ ಇಂಡಿಯಾದಲ್ಲಿ ಯಾವುದು ಸರಿಯಲ್ಲಿ ಅನ್ನೋ ಇದೀಗ ಖಚಿತವಾಗುತ್ತಿದೆ. ಸಾಲು ಸಾಲು ಸೋಲಿನ ಬೆನ್ನಲ್ಲೇ ಬಿಸಿಸಿಐ ಆಟಗಾರರ ಜೊತೆಗೆ ಸಭೆ ನಡೆಸೋದಕ್ಕೆ ಮುಂದಾಗಿದೆ. ಇಂಗ್ಲೆಂಡ್‌ ವಿರುದ್ದದ ಏಕದಿನ ಸರಣಿಯ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಬಾರೀ ಬದಲಾವಣೆ ಆಗೋದಂತೂ ಖಚಿತ.

ind vs eng india win without Vaibhav suryavanshi sanju samson Shreyas iyer flop

Anil Gundmi | ಅನಿಲ್‌ ಗುಂಡ್ಮಿ

ಅನಿಲ್‌ ಗುಂಡ್ಮಿ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡದಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಬಿಎಸ್ಸಿ ಪದವೀಧರರಾಗಿದ್ದು, ಪ್ರಚಲಿತ ವಿದ್ಯಾಮಾನ, ಕ್ರೀಡೆ, ಸಿನಿಮಾ, ದೇಶ, ವಿದೇಶಗಳ ಸುದ್ದಿಗಳ ಬರವಣೆಗೆಯಲ್ಲಿ ಹಿಡಿತಹೊಂದಿದ್ದಾರೆ. ಕಳೆದ ಐದು ವರ್ಷಗಳಿಂದಲೂ ನ್ಯೂಸ್‌ ನೆಕ್ಸ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದಾರೆ.