Covid-19 vaccination: ಕೊರೋನಾ ನಿಯಂತ್ರಣಕ್ಕೆ ಕೇಂದ್ರದ ಪ್ರಯತ್ನ….! ಇಂದಿನಿಂದ ಉಚಿತ ಲಸಿಕೆ ವಿತರಣೆ ಆರಂಭ….!!

ಇಂದಿನಿಂದ ಭಾರತದಾದ್ಯಂತ ಕೊರೋನಾ ತಡೆಗೆ 18 ವರ್ಷ ಮೇಲ್ಪಟ್ಟವರಿಗೆ  ಉಚಿತ ವಾಕ್ಸಿನ್  ವಿತರಣೆ ಆರಂಭವಾಗಿದ್ದು, ದೇಶದೆಲ್ಲೆಡೆ ಹಲವು ಕೇಂದ್ರಗಳ ಮೂಲಕ ಲಸಿಕೆ ವಿತರಣೆಗೆ ಸರ್ಕಾರ ಸೂಚನೆ ನೀಡಿದೆ.

ಕೆಲದಿನಗಳ ಹಿಂದೆ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ದೇಶದ 18 ವರ್ಷಕ್ಕೆ ಮೇಲ್ಪಟ್ಟ ಜನರಿಗೆ ಉಚಿತವಾಗಿ ಲಸಿಕೆ ವಿತರಿಸಲು ಕೇಂದ್ರ ಸನ್ನದ್ಧವಾಗಿದೆ. ಲಸಿಕೆ ವಿತರಣೆ ಹೊಣೆಗಾರಿಕೆ ಕೇಂದ್ರ ಸರ್ಕಾರದ್ದು ಎಂದಿದ್ದರು.

ಪ್ರಧಾನಿ ಭಾಷಣದಲ್ಲಿ ಸೂಚಿಸಿದಂತೆ ಜೂನ್ 21 ಸೋಮವಾರದಿಂದ 18 ವರ್ಷ ಮೇಲ್ಟಟ್ಟವರಿಗೆ ಲಸಿಕೆ ವಿತರಣೆ ಆರಂಭಿಸಲಾಗಿದೆ ಎಂದು ಸಿಎಂ ಬಿಎಸ್ವೈ ಕೂಡ ಮಾಹಿತಿ ನೀಡಿದ್ದಾರೆ.

ರಾಜ್ಯದ ಪ್ರತಿಯೊಂದು ಗ್ರಾಮ ಪಂಚಾಯತ್ ಮಟ್ಟದಿಂದ ಆರಂಭಿಸಿ ಎಲ್ಲೆಡೆಯೂ ಲಸಿಕೆ ವಿತರಣೆಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಜನರು ತಮ್ಮ ಆಧಾರ್ ಕಾರ್ಡ್ ಸಂಖ್ಯೆ ಅಥವಾ ಯಾವುದೇ ದಾಖಲೆ ನೀಡಿ ವಾಕ್ಸಿನ್ ಪಡೆಯಬಹುದಾಗಿದೆ.

ಎಲ್ಲ ರಾಜ್ಯಗಳಿಗೂ ಕೇಂದ್ರ ಸರ್ಕಾರ ಉಚಿತವಾಗಿ ಲಸಿಕೆ ಪೊರೈಸುತ್ತಿದ್ದು, ರಾಜ್ಯಗಳು ಸೂಕ್ತವಾಗಿ ಲಸಿಕೆ ವಿತರಣೆಗೆ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದೆ.

ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆ ಲಸಿಕೆ ವಿತರಣೆ ಮುಂಜಾನೆ 10 ಗಂಟೆಯಿಂದ ಆರಂಭವಾಗಿದ್ದು, ಖಾಸಗಿ ಕಂಪನಿ ಸೇರಿದಂತೆ ಉದ್ಯೋಗಿಗಳಿಗೆ ಮೊದಲ ಆದ್ಯತೆಯಲ್ಲಿ ಲಸಿಕೆ ವಿತರಿಸಲಾಗುತ್ತಿದೆ.

Comments are closed.