ಎಚ್.ಡಿ.ಎಫ್ .ಸಿ ಬ್ಯಾಂಕ್ ಗೆ ಆರ್ಬಿಐ ಶಾಕ್…! ಕ್ರೆಡಿಟ್ ಕಾರ್ಡ್ ಸೇವೆ ಮೇಲೆ ಅಂಕುಶ…!

ದೇಶದ ಅತಿದೊಡ್ಡ ಬ್ಯಾಂಕ್ ಎಚ್ಡಿಎಫ್ ಸಿ ತನ್ನ ಡಿಜಿಟಲ್ ಸೇವೆಯ ಅಡಿಯಲ್ಲಿ ಯಾವುದೇ ಹೊಸ ಸೇವೆ ನೀಡಬಾರದೆಂದು ಎಚ್.ಡಿ.ಎಫ್ .ಸಿ ಬ್ಯಾಂಕ್ ಮೇಲೆ ಆರ್ .ಬಿ.ಐ ನಿಯಂತ್ರಣ ಹೇರಿದೆ.

ಅಲ್ಲದೇಯಾವುದೇ ಹೊಸ ಕ್ರೆಡಿಟ್ ಕಾರ್ಡ್ ಸೇವೆ ಆರಂಭಿಸಬಾರದೆಂದು ಆದೇಶಿಸಿದೆ. ಬ್ಯಾಂಕ್ ನ ಪ್ರೈಮರಿ ಡಾಟಾ ಸೆಂಟರ್ ನಲ್ಲಿ ವಿದ್ಯುತ್ ವ್ಯತ್ಯಯದಿಂದ ಬ್ಯಾಂಕ್ ನ ಇಂಟರ್ನೆಟ್ ಹಾಗೂ ಬ್ಯಾಂಕಿಂಗ್ ಪಾವತಿ ವ್ಯವಸ್ಥೆಯಲ್ಲಿ ಉಂಟಾದ ಸಮಸ್ಯೆಗಳನ್ನು ಗಮನಿಸಿ ಆರ್ ಬಿ ಐ ಈ ಆದೇಶ ಹೊರಡಸಿದೆ.

ಆರ್.ಬಿ.ಐ ಎಚ್.ಡಿ.ಎಫ್.ಸಿ.ಯ ಕ್ರೆಡಿಟ್ ಕಾರ್ಡ್ ವಿತರಣೆಯ ಮೇಲೆ ನಿಯಂತ್ರಣ ಹೇರಿರುವುದರಿಂದ ಶೇರು ಮಾರುಕಟ್ಟೆಯಲ್ಲಿ ಎಚ್.ಡಿ.ಎಫ್.ಸಿ ಬ್ಯಾಂಕ್ ಕಾರ್ಡ್ ಶೇರುಗಳ ಬೆಲೆ ಕುಸಿದಿದೆ.

ಎಚ್.ಡಿ.ಎಫ್.ಸಿ ಮೇಲೆ ಆರ್.ಬಿ.ಐ ಹೇರಿರುವ ನಿಯಂತ್ರಣದ ಹಿನ್ನೆಲೆಯಲ್ಲಿ ಬ್ಯಾಂಕ್ ಅಂದಾಜು ೧೦ ಲಕ್ಷ ಗ್ರಾಹಕರನ್ನು ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ.ಆದರೇ ಆರ್.ಬಿ.ಐ ಎಚ್.ಡಿ.ಎಫ್.ಸಿ ಗೆ ಡಿಜಿಟಲ್ ಬ್ಯಾಂಕಿಂಗ್ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕೆಂದು ಸೂಚಿಸಿದೆ.

ಆದರೆ ಆರ್.ಬಿ.ಐ ಈ ಆದೇಶದಿಂದ ಬ್ಯಾಂಕ್ ನ ಈಗಾಗಲೇ ಇರುವ ಕ್ರೆಡಿಟ್ ಕಾರ್ಡ್ ಹಾಗೂ ಡಿಜಿಟಲ್ ಬ್ಯಾಂಕ್ ನ ಕಸ್ಟಮರ್ ಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಬ್ಯಾಂಕ್ ಭರವಸೆ ನೀಡಿದೆ

Comments are closed.