ಕೊರೋನಾ ಎಫೆಕ್ಟ್…! ಪಬ್ಲಿಕ್ ಪ್ಲೇಸ್ ನಲ್ಲಿ ಹೊಸ ವರ್ಷಾಚರಣೆಗೆ ಬಿತ್ತು ಬ್ರೇಕ್….!!

ಕೊರೋನಾ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಗೆ ಕೊನೆಗೂ ಸರ್ಕಾರ ಬ್ರೇಕ್ ಹಾಕಲು ನಿರ್ಧರಿಸಿದ್ದು,  ಸಾರ್ವಜನಿಕವಾಗಿ  ವರ್ಷದ ಕೊನೆ ಹಾಗೂ ಹೊಸ ವರ್ಷ ಆಚರಿಸಲು ಅವಕಾಶವಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಶನಿವಾರ ಈ ಕುರಿತು  ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಕೋವಿಡ್ 2 ಅಲೆಯ ಕಾರಣಕ್ಕೆ  ವಿಜ್ಞಾನಿಗಳ ಸಲಹೆ ಪಡೆದು ಸರ್ಕಾರ  ಈ ನಿರ್ಧಾರಕ್ಕೆ ಬಂದಿದೆ. ಈ ಕುರಿತು ಈಗಾಗಲೇ  ಗೃಹ ಸಚಿವರು ಹಾಗೂ ಇತರರೊಂದಿಗೆ ಸಭೆ ನಡೆಸಿದ್ದು, ಸಿಎಂ ಕೂಡ ಒಪ್ಪಿಗೆ ಸೂಚಿಸಿದ್ದಾರೆ.  ಸಧ್ಯದಲ್ಲೇ ಈ ಬಗ್ಗೆ  ಸಧ್ಯದಲ್ಲೇ ವಿಸ್ಕೃತವಾದ ಮಾರ್ಗಸೂಚಿ ಬಿಡುಗಡೆಮಾಡಲಿದ್ದೇವೆ ಎಂದಿದ್ದಾರೆ.

ಹೊಟೇಲ್ ಗಳಲ್ಲಿ  ಪಾರ್ಟಿ ಮಾಡುವುದಕ್ಕೆ ಅವಕಾಶವಿದೆ. ಆದರೆ ಕಡ್ಡಾಯವಾಗಿ ಕೊವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕು.  ಶೇಕಡಾ 50 ರಷ್ಟು ಆಸನಗಳಿಗೆ ಮಾತ್ರ ಅವಕಾಶ ನೀಡಬೇಕು. ಪೊಲೀಸರಿಗೆ ಈ ಬಗ್ಗೆ  ಬಂದೋಬಸ್ತ ಏರ್ಪಡಿಸಲು ಸೂಚಿಸಲಾಗಿದೆ ಎಂದು ಆರ್.ಅಶೋಕ್ ವಿವರಣೆ ನೀಡಿದ್ದಾರೆ.

ಇಷ್ಟು ವರ್ಷಗಳ ಕಾಲ ಅದ್ದೂರಿಯಾಗಿ ಸಾರ್ವಜನಿಕ ಸ್ಥಳದಲ್ಲಿ  ಹೊಸ ವರ್ಷಾಚರಣೆ ನಡೆಸಲಾಗಿದೆ. ಈ ವರ್ಷ ಕರೋನಾ ಕಾರಣಕ್ಕೆ ನಿಷೇಧ ಹೇರಲಾಗಿದೆ.  ಇದನ್ನು ಜನರು ಅರ್ಥ ಮಾಡಿಕೊಂಡು ಸಹಕಾರ ನೀಡಬೇಕು. ಆರೋಗ್ಯ ಹಾಗೂ ಸಾಮಾಜಿಕ ಸ್ವಾಸ್ಥ್ಯ ಕಾಪಾಡಬೇಕು ಎಂದರು.

ಪ್ರತಿವರ್ಷ ಡಿಸೆಂಬರ್ 31 ರಂದು ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಅದ್ದೂರಿಯಾಗಿ ಹಾಡು-ಕುಣಿತದ ಜೊತೆ ಹೊಸ ವರ್ಷ ಆಚರಿಸುವ  ಸಂಪ್ರದಾಯವಿದೆ. ಆದರೆ ಈ ವರ್ಷ ಕೊರೋನಾ ಕಾರಣಕ್ಕೆ ಸಂಭ್ರಮಕ್ಕೆ ಬ್ರೇಕ್ ಹಾಕಲು ಸರ್ಕಾರ ನಿರ್ಧರಿಸಿದ್ದು, ಯುವಜನತೆಗೆ ಈ ವಿಚಾರ ಸಾಕಷ್ಟು ನಿರಾಸೆ ತರಲಿದೆ.

Comments are closed.