Swiss Bank:13 ವರ್ಷಗಳ ಬಳಿಕ ದಾಖಲೆ ಬರೆದ ಸ್ವಿಸ್ ಬ್ಯಾಂಕ್ ಹೂಡಿಕೆ….! 20.700 ಕೋಟಿ ಭಾರತೀಯರ ಹೂಡಿಕೆ…!!

ಕೊರೋನಾ ಮೊದಲನೆ ಹಾಗೂ ಎರಡನೇ ಅಲೆಯಿಂದ ಭಾರತದ ಆರ್ಥಿಕತೆ, ಜನರ ಆದಾಯ ಸೊರಗಿದೆ ಎಂಬ ಅಂಕಿಅಂಶಗಳಿಗೆ ಶಾಕ್ ನೀಡುವ ಸಂಗತಿಯೊಂದನ್ನು ಸ್ವಿಟ್ಜರ್ಲ್ಯಾಂಡ್ ಪ್ರಕಟಿಸಿದ್ದು, ವೈಯಕ್ತಿಕ ಖಾತೆ ಸೇರಿದಂತೆ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಹೂಡಿಕೆ 20,700 ಕೋಟಿಗೆ ಏರಿಕೆಯಾಗಿದೆ ಎಂದಿದೆ.

ಈ ಕುರಿತು ಸ್ವಿಟ್ಜರ್ಲ್ಯಾಂಡ್ ಕೇಂದ್ರ ಬ್ಯಾಂಕ್ ದಾಖಲೆಗಳನ್ನು ಬಿಡುಗಡೆ ಮಾಡಿದ್ದು, ವ್ಯಕ್ತಿಗಳು, ಸಂಸ್ಥೆಗಳು ಹಾಗೂ ಖಾಸಗಿ ಹೂಡಿಕೆ ಸೇರಿದಂತೆ ಭಾರತದ ಹಣ ಹೂಡಿಕೆ 20,700 ಕೋಟಿ ಎಂದು ಬ್ಯಾಂಕ್ ಹೇಳಿದೆ.

ಕಳೆದ 13 ವರ್ಷಗಳ ಸ್ವಿಸ್ ಬ್ಯಾಂಕ್ ಇತಿಹಾಸದಲ್ಲಿ ಇದು ದಾಖಲೆಯ ಏರಿಕೆಯಾಗಿದೆ. 2006 ರಲ್ಲಿ ಭಾರತೀಯರ ಹೂಡಿಕೆ 23,000 ಕೋಟಿಯಾಗಿತ್ತು. ಆದರೆ ಈಗ  ಮೊತ್ತ 20,700 ಕೋಟಿ ದಾಟಿದೆ ಎನ್ನಲಾಗಿದೆ.

2019 ರ ಅಂತ್ಯಕ್ಕೆ ಭಾರತೀಯರ ಹೂಡಿಕೆ ಪ್ರಮಾಣ ಖುಷಿದಿತ್ತು. ಆದರೆ 2020 ರ ಅಂತ್ಯಕ್ಕೆ ಈ ಮೊತ್ತದಲ್ಲಿ ಭಾರಿ ಹೆಚ್ಚಳವಾಗಿದೆ.

  ಸ್ವಿಸ್ ಬ್ಯಾಂಕ್ ಬಿಡುಗಡೆ ಮಾಡಿರುವ ಅಂಕಿ ಅಂಶ ವರದಿಯಲ್ಲಿ ಸ್ವಿಸ್ ಬ್ಯಾಂಕ್ ನಲ್ಲಿ ಭಾರತೀಯರ ಸಾರ್ವಕಾಲಿಕ ದಾಖಲೆ 52,575 ಕೋಟಿ ರೂಪಾಯಿಯಾಗಿದ್ದು, ಇದರ ಬಳಿಕ 2011,2013,2017 ರಲ್ಲಿ ಖುಷಿತ ಕಂಡಿದ್ದ ಹೂಡಿಕೆ ಈಗ ದಾಖಲೆ ಮೊತ್ತಕ್ಕೆ ಏರಿಕೆಯಾಗಿದೆ.

2020 ಅಂತ್ಯಕ್ಕೆ ಸ್ವಿಸ್ ಬ್ಯಾಂಕ್ ನ ಒಟ್ಟು ಠೇವಣಿ ಮೊತ್ತ 161.78 ಲಕ್ಷ ಕೋಟಿ ರೂಪಾಯಿ. ಇದರಲ್ಲಿ 30 .49 ಲಕ್ಷ ಕೋಟಿ ರೂಪಾಯಿಯೊಂದಿಗೆ ಬ್ರಿಟನ್ ಅಗ್ರಸ್ಥಾನದಲ್ಲಿದ್ದು, 12.29 ಲಕ್ಷ ಕೋಟಿಯೊಂದಿಗೆ ಅಮೇರಿಕಾ ಎರಡನೇ ಸ್ಥಾನದಲ್ಲಿದೆ.

Comments are closed.