B. S. Yediyurappa:ಕರ್ನಾಟಕ ಸಿಎಂ ಸ್ಥಾನದಿಂದ ಆಂಧ್ರರಾಜ್ಯಪಾಲ ಹುದ್ದೆಗೆ ಬಿಎಸ್ವೈ ನಿಯುಕ್ತಿ…! ಬಿಜೆಪಿ ಹೈಕಮಾಂಡ್ ಮಾಸ್ಟರ್ ಪ್ಲ್ಯಾನ್….!!

ಬಿಜೆಪಿ ನಾಯಕತ್ವ ಬದಲಾವಣೆಯ ಚರ್ಚೆಗೆ ಅಂತ್ಯಹಾಡಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ದೆಹಲಿ ತಲುಪುತ್ತಿದ್ದಂತೆ ಮತ್ತೊಂದು ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ. ಇನ್ನೊಂದು ತಿಂಗಳಿನಲ್ಲೇ ಸಿಎಂ ಬಿಎಸ್ವೈ ಆಂಧ್ರಪ್ರದೇಶದ ರಾಜ್ಯಪಾಲರಾಗಿ ತೆರಳಲಿದ್ದಾರೆ ಎಂಬ ಸಂಗತಿ ಹೈಕಮಾಂಡ್ ಮೂಲದಿಂದ ಸದ್ದು ಮಾಡಿದೆ.

ರಾಜ್ಯದಲ್ಲಿ ಸಿಎಂ ಬಿಎಸ್ವೈ ಅಧಿಕಾರ ನಡೆಸುತ್ತಿಲ್ಲ ಬದಲಾಗಿ ಅವರ ಹೆಸರಿನಲ್ಲಿ ಪುತ್ರ ವಿಜಯೇಂದ್ರ್ ಆಡಳಿತ ನಡೆಸುತ್ತಾರೆ ಎಂಬ ಆರೋಪ ಹಲವು ಶಾಸಕರಿಂದ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆಗೆ ಹಲವು ಶಾಸಕರು ಪಟ್ಟು ಹಿಡಿದಿದ್ದಾರೆ.

ಆದರೆ ರಾಜ್ಯ ಉಸ್ತುವಾರಿ ಮುಂದೇ ಅತೃಪ್ತರು  ಪರೇಡ್ ನಡೆಸಿದ್ದರೂ ಏನು ಲಾಭವಾಗಿಲ್ಲ. ಯಡಿಯೂರಪ್ಪನವರೇ ಸಿಎಂ ಎಂದ ಅರುಣ್ ಸಿಂಗ್ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದು ದೆಹಲಿಗೆ ಮರಳಿದ್ದಾರೆ.

ಆದರೆ ನಾಯಕತ್ವ ಬದಲಾವಣೆಯ ಯುದ್ಧ ಖುಷಿಯಲ್ಲಿದ್ದ ಬಿಎಸ್ವೈ ಬಣಕ್ಕೆ ಇದೀಗ ಶಾಕಿಂಗ್ ಸುದ್ದಿಯೊಂದು ಎದುರಾಗಿದ್ದು,  ಅರುಣ ಸಿಂಗ್ ದೆಹಲಿ ತಲುಪುತ್ತಿದ್ದಂತೆ ರಾಜ್ಯದಲ್ಲಿ ಸಿಎಂ ಬದಲಾವಣೆ ಖಚಿತ ಎಂಬ ಸಂಗತಿ ಹೊರಬಿದ್ದಿದೆ.

ಮುಂದಿನ ತಿಂಗಳು ಆಂಧ್ರಪ್ರದೇಶದ ರಾಜ್ಯಪಾಲರ ಅವಧಿ ಮುಕ್ತಾಯಗೊಳ್ಳಲಿದೆ. ಹೀಗಾಗಿ  ನಾಯಕತ್ವ ಬದಲಾವಣೆಯ ಪ್ರಹಸನಕ್ಕೆ ಸಮಾಧಾನದಿಂದ ಪರಿಹಾರ ಹುಡುಕಲು ಮುಂದಾಗಿರುವ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಆಂಧ್ರಪ್ರದೇಶದ  ರಾಜ್ಯಪಾಲರಾಗಿ ನೇಮಿಸಲು ಮುಂಧಾಗಿದೆ.

ಇದರಿಂದ ಅಪಾರ ರಾಜಕೀಯ ಅನುಭವ ಹೊಂದಿರುವ ಯಡಿಯೂರಪ್ಪನವರಿಗೆ ಸೂಕ್ತ ಸ್ಥಾನಮಾನವನ್ನು ನೀಡದಂತಾಗಲಿದೆ ಹಾಗೂ ಕರ್ನಾಟಕದಲ್ಲಿ ತಲೆದೋರಿರುವ ಬಿಜೆಪಿ ಆಂತರಿಕ ಬಿಕ್ಕಟ್ಟಿಗೂ ಅಂತ್ಯಹಾಡಿದಂತಾಗಲಿದೆ ಎಂಬುದು ಹೈಕಮಾಂಡ್ ಚಿಂತನೆ.  

Comments are closed.