ಸೋಮವಾರ, ಏಪ್ರಿಲ್ 28, 2025
HomeBreakingಹಲ್ಲುಜ್ಜುವ ಮೊದಲು ಬಿಸಿನೀರಿಗೆ ಬೆಲ್ಲ ಸೇರಿಸಿ ಕುಡಿದ್ರೆ ಏನಾಗುತ್ತೆ ಗೊತ್ತಾ ?

ಹಲ್ಲುಜ್ಜುವ ಮೊದಲು ಬಿಸಿನೀರಿಗೆ ಬೆಲ್ಲ ಸೇರಿಸಿ ಕುಡಿದ್ರೆ ಏನಾಗುತ್ತೆ ಗೊತ್ತಾ ?

- Advertisement -

ರಕ್ಷಾ ಬಡಾಮನೆ

ಸಾಮಾನ್ಯವಾಗಿ ನಿತ್ಯ ಬಳಕೆಗೆ ಬಿಸಿನೀರು ಸೇವನೆ ಮಾಡುತ್ತೇವೆ. ಜೊತೆಗೆ ಅಡುಗೆಯಲ್ಲಿ ಬೆಲ್ಲವನ್ನೂ ಬಳಕೆ ಮಾಡುತ್ತೇವೆ. ಬೆಲ್ಲ ಆರೋಗ್ಯಕ್ಕೆ ಉತ್ತಮ ಅನ್ನೋದು ಬಹುತೇಕರಿಗೆ ಗೊತ್ತಿಲ್ಲ. ಆದರೆ ಬಿಸಿನೀರಿಗೆ ಬೆಲ್ಲವನ್ನು ಸೇರಿಸಿ ಕುಡಿದ್ರೆ ನಮ್ಮ ದೇಹಾರೋಗ್ಯಕ್ಕೆ ಏನು ಪ್ರಯೋಜನ ಅನ್ನೋದು ನಿಮಗೆ ಗೊತ್ತಾ ?, ಬಿಸಿನೀರಿಗೆ ಬೆಲ್ಲವನ್ನು ಬೆರೆಸಿ ಹಲ್ಲುಜ್ಜುವ ಮೊದಲು ಕುಡಿಯುವುದರಿಂದ ಆರೋಗ್ಯದ ಮೇಲೆ ಅದ್ಬುತವಾದ ಪರಿಣಾಮವನ್ನು ಬೀರುತ್ತಿದೆ. ಜೀರ್ಣ ಕ್ರೀಯೆಯು ಸರಾಗವಾಗಿ ಆಗುವುದರ ಜೊತೆಗೆ ದೇಹ ತೂಕವನ್ನು ಇಳಿಸಬಹುದು ಅನ್ನುತ್ತಿದೆ ಆಯುರ್ವೇದ.

ಆಯುರ್ವೇದದ ಪ್ರಕಾರ ಬೆಲ್ಲವು ಬಿಸಿನೀರಿನೊಂದಿಗೆ ಸೇವಿಸಿದಾಗ ವಿವಿಧ ರೀತಿಯ ಕಾಯಿಲೆಗಳಿಂದ ತಡೆಯವುದು ಮಾತ್ರವಲ್ಲದೆ, ಇದು ಹೃದಯದ ಆರೋಗ್ಯಕ್ಕೂ ಅದ್ಭುತವಾಗಿ ನೆರವಾಗುವುದು. ಇದು ದೇಹಕ್ಕೆ ಒಳ್ಳೆಯ ಶಕ್ತಿ ನೀಡುವುದು ಮತ್ತು ಆರೋಗ್ಯ ವೃದ್ಧಿಸುವುದು. ಇದನ್ನು ಆಯುರ್ವೇದದಲ್ಲಿ ಹಲವಾರು ಆರೋಗ್ಯ ಲಾಭ ಪಡೆದುಕೊಳ್ಳಲು ಬಳಸಲಾಗಿದೆ.

ತೂಕ ಇಳಿಸಲು ಸಹಕಾರಿ
ದೇಹ ತೂಕದಲ್ಲಿ ವಿಪರೀತ ಏರಿಕೆಯಾಗೋದು ಬಹುತೇಕರನ್ನು ಕಾಡುತ್ತಿರೋ ಸಾಮಾನ್ಯ ಸಮಸ್ಯೆ. ಹೀಗಾಗಿ ತೂಕ ಇಳಿಸಿಕೊಳ್ಳಬೇಕು ಎಂದು ಬಯಸುತ್ತಾ ಇರುವವರಿಗೆ ಇದು ತುಂಬಾ ಪರಿಣಾಮಕಾರಿ ಔಷಧಿ. ತೂಕ ಹೆಚ್ಚಳಕ್ಕೆ ನೆರವಾಗುವ ಸಕ್ಕರೆಗೆ ಪರ್ಯಾಯವಾಗಿದೆ. ಬೆಲ್ಲದಲ್ಲಿ ಪೊಟಾಶಿಯಂ, ಮೆಗ್ನಿಶಿಯಂ, ವಿಟಮಿನ್ ಬಿ1, ಬಿ6 ಮತ್ತು ವಿಟಮಿನ್ ಸಿ ಸಮೃದ್ದವಾಗಿದ್ದು, ಅಧಿಕ ಕ್ಯಾಲರಿ ಕಡಿಮೆ ಮಾಡುವುದು. ಒಂದು ಗ್ರಾಂ ಸಕ್ಕರೆಯಲ್ಲಿ ಬೆಲ್ಲಕ್ಕಿಂತಲೂ ಹೆಚ್ಚಿನ ಕ್ಯಾಲರಿ ಇದೆ. ಬೆಲ್ಲವನ್ನು ಚಾ, ಕಾಫಿ ಮತ್ತು ಇತರ ಹಲವಾರು ರೀತಿಯ ಸಿಹಿ ತಿಂಡಿಗಳ ತಯಾರಿಸಲು ಬಳಕೆ ಮಾಡಬಹುದು. ಇದು ಆರೋಗ್ಯ ವೃದ್ಧಿಸುವುದು ಮಾತ್ರವಲ್ಲದೆ, ಆಹಾರಕ್ಕೆ ರುಚಿ ಕೂಡ ನೀಡುವುದು. ಮಲಗುವ ಮೊದಲು ಬಿಸಿ ನೀರಿಗೆ ಬೆಲ್ಲ ಹಾಕಿಕೊಂಡು ಕುಡಿದರೆ ಅದರಿಂದ ಹಲವಾರು ಲಾಭಗಳು ಸಿಗುವುದು.

ನಿದ್ರಾಹೀನತೆ ನಿವಾರಿಸಲು ನೆರವಾಗುವುದು
ನೀವೆನಾದ್ರೂ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ರೆ ಬೆಲ್ಲ, ಬಿಸಿ ನೀರು ಹೆಚ್ಚು ಸಹಕಾರಿಯಾಗಿದೆ. ಬೆಲ್ಲವು ಖಿನ್ನತೆ ವಿರೋಧಿ ಗುಣ ಹೊಂದಿದೆ. ಬಿಸಿ ನೀರಿನ ಜತೆಗೆ ರಾತ್ರಿ ಮಲಗುವ ಮೊದಲು ಕುಡಿದರೆ ಅದು ದೇಹದಲ್ಲಿ ಒಳ್ಳೆಯ ಹಾರ್ಮೋನ್ ಬಿಡುಗಡೆ ಮಾಡುವುದು. ಖಿನ್ನತೆಗೆ ಒಳಗಾಗಿರುಂತಹ ಜನರಿಗೆ ರಾತ್ರಿ ನಿದ್ರೆ ಮಾಡಲು ತುಂಬಾ ಕಷ್ಟವಾಗುವುದು. ನಿದ್ರಾಹೀನತೆಗೆ ಶತಮಾನಗಳಿಂದಲೂ ಬೆಲ್ಲವನ್ನು ಮನೆಮದ್ದಾಗಿ ಬಳಸಿಕೊಂಡು ಬರಲಾಗುತ್ತಿದೆ.

ಒಸಡಿನ ಆರೋಗ್ಯ ವೃದ್ದಿ
ಬೆಲ್ಲವು ಕಡಿಮೆ ಸಿಹಿ ಹೊಂದಿದೆ ಮತ್ತು ಸಕ್ಕರೆಗೆ ಹೋಲಿಕೆ ಮಾಡಿದರೆ ಇದರಲ್ಲಿ ಕೊಬ್ಬಿನಾಂಶವು ಕಡಿಮೆ. ಸಕ್ಕರೆ ಬದಲಿಗೆ ಬೆಲ್ಲ ತಿಂದರೆ ಅದರಿಂದ ಬಾಯಿ ಹಾಗೂ ಒಸಡುಗಳ ಆರೋಗ್ಯವು ಉತ್ತಮವಾಗಿ ಇರುವುದು. ಬೆಲ್ಲವನ್ನು ಏಲಕ್ಕಿ ಜತೆಗೆ ಸೇರಿಸಿಕೊಂಡು ತಿಂದರೆ ಅದು ಬಾಯಿಯಲ್ಲಿ ಇರುವ ಬ್ಯಾಕ್ಟೀರಿಯಾ ನಿವಾರಣೆ ಮಾಡುವುದು. ಬಾಯಿಯ ದುರ್ವಾಸನೆಯು ತುಂಬಾ ಕೆಟ್ಟದು ಮತ್ತು ಬಾಯಿಯಲ್ಲಿನ ಹಾನಿಕಾರಕ ಬ್ಯಾಕ್ಟೀರಿಯಾ ನಿವಾರಣೆ ಮಾಡಿದರೆ ಅದರಿಂದ ಬಾಯಿಗೆ ಸಂಬಂಧಿಸಿದ ಹಲವಾರು ಸಮಸ್ಯೆ ನಿವಾರಿಸಬಹುದು. ಬೆಲ್ಲವನ್ನು ಮಿತವಾಗಿ ಬಳಸಿದರೆ ಬಾಯಿಗೆ ತುಂಬಾ ಒಳ್ಳೆಯದು.

ಚರ್ಮದ ಕಾಂತಿ ಹೆಚ್ಚುತ್ತದೆ
ಮೊಡವೆ ಮತ್ತು ಚರ್ಮವು ವರ್ಣಗುಂದುವ ಸಮಸ್ಯೆಯಿದ್ದರೆ ಆಗ ನೀವು ಬಿಸಿ ನೀರಿಗೆ ಹಾಕಿಕೊಂಡು ಬೆಲ್ಲ ಸೇವಿಸಬೇಕು. ಇದು ಶುದ್ಧೀಕರಿಸುವ ಗುಣ ಹೊಂದಿದೆ ಮತ್ತು ಚರ್ಮದ ಸಮಸ್ಯೆಯನ್ನು ದೂರ ಮಾಡಲು ಇದು ಅದ್ಭುತವಾದ ಮನೆಮದ್ದಾಗಿದೆ. ಇದು ವಯಸ್ಸಾಗುವ ಲಕ್ಷಣಗಳನ್ನು ಕೂಡ ತಡೆಹಿಡಿಯುತ್ತದೆ.

ಕಿಡ್ನಿ ಸ್ಟೋನ್ ಸಮಸ್ಯೆಗೆ ರಾಮಬಾಣ
ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆಯಿಂದ ಬಳಲುವವರಿಗೆ ಇದು ಉತ್ತಮ ಔಷಧಿ. ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ನಿವಾರಣೆ ಮಾಡಲು ನೀವು ಬಿಸಿ ನೀರಿಗೆ ಬೆಲ್ಲ ಹಾಕಿಕೊಂಡು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ಆರೋಗ್ಯಕ್ಕೆ ಅದ್ಭುತವನ್ನು ಉಂಟು ಮಾಡುವುದು. ಇದು ಕಲ್ಲನ್ನು ವಿಘಟಿಸುವುದು. ಸಣ್ಣ ಗಾತ್ರದ ಕಲ್ಲನ್ನು ಮೂತ್ರದ ಮೂಲಕ ಹೊರಹಾಕಲು ಇದು ಸಹಕಾರಿ ಆಗಿರುವುದು.

ಹೊಟ್ಟೆ ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ
ಗ್ಯಾಸ್ ಮತ್ತು ಮಲಬದ್ಧತೆಯಂತಹ ಸಮಸ್ಯೆಯಿಂದ ಬಳಲುತ್ತಿರುವರಿಗೆ ಬಿಸಿನೀರು ಬೆಲ್ಲ ಉತ್ತಮ ಔಷಧಿ. ಬಿಸಿ ನೀರಿಗೆ ಬೆಲ್ಲವನ್ನು ಬೆರೆಸಿ ರಾತ್ರಿ ಮಲಗುವ ಮೊದಲು ಇದನ್ನು ಕುಡಿಯಿರಿ. ಜೀರ್ಣಕ್ರಿಯೆಗೆ ಇದು ವೇಗ ನೀಡುತ್ತದೆ. ಮಾತ್ರವಲ್ಲ ಮಲವಿಸರ್ಜನೆಗೆ ಹೆಚ್ಚು ಸಹಕಾರಿಯಾಗಿದೆ. ಭಾರತೀಯರು ಹೆಚ್ಚಿನ ಪ್ರಮಾಣದಲ್ಲಿ ಬೆಲ್ಲವನ್ನು ತಮ್ಮ ಆಹಾರದಲ್ಲಿ ಬಳಕೆ ಮಾಡುತ್ತಿದ್ದಾರೆ. ಇದು ಜೀರ್ಣಕ್ರಿಯೆಯ ಕಿಣ್ವಗಳನ್ನು ಉತ್ತೇಜಿಸಿ ಜೀರ್ಣಕ್ರಿಯೆಗೆ ಹೆಚ್ಚು ಸಹಕಾರವನ್ನು ನೀಡುತ್ತದೆ.

ಇದನ್ನೂ ಓದಿ : ನೀವೂ ದೇಹದ ಅತ್ಯಂತ ಮುಖ್ಯ ಭಾಗವನ್ನೇ ತೊಳೆಯುತ್ತಿಲ್ಲ !

ಇದನ್ನೂ ಓದಿ : ಎಳ್ಳಿನ ಮಹತ್ವ ನಿಮಗೇನಾದ್ರೂ ಗೊತ್ತಾ ? ಗೊತ್ತಾದ್ರೆ ನಿತ್ಯವೂ ಆಹಾರದಲ್ಲಿ ಎಳ್ಳಿನ ಬಳಕೆ ಮಾಡುತ್ತೀರಿ..!!

( Health Tips : jiggery Hot water Good For Health )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular