Horoscope : ದಿನಭವಿಷ್ಯ – ವೃಷಭರಾಶಿಯವರಿಗೆ ಉದ್ಯೋಗದ ಮುಂಭಡ್ತಿಗೆ ಅನಾರೋಗ್ಯ ಸಮಸ್ಯೆ ತೊಡಕಾಗಲಿದೆ

ಮೇಷರಾಶಿ
ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ, ಲಾಭವಿದ್ದರೂ ಅಧಿಕ ಖರ್ಚು ಕಾಣಿಸಲಿದೆ, ಸಂಗಾತಿಯ ಜೊತೆಗೆ ಸುಂದರ ಕ್ಷಣ, ಆತ್ಮೀಯರ ಸಹಕಾರ ದೊರೆಯಲಿದೆ, ಸಹೋದ್ಯೋಗಿ ಗಳಿಂದ ಶುಭಸುದ್ದಿ, ದೂರ ಪ್ರಯಾಣದಿಂದ ಅಧಿಕ ಲಾಭ ದೊರೆಯಲಿದೆ, ಉದ್ಯೋಗದಲ್ಲಿ ಪ್ರಗತಿ.

ವೃಷಭರಾಶಿ
ಉದ್ಯೋಗದ ಮುಂಭಡ್ತಿಗೆ ಅನಾರೋಗ್ಯ ಸಮಸ್ಯೆ, ವಿದೇಶಿ ವ್ಯವಹಾರದಿಂದ ಅಧಿಕ ಲಾಭ, ಹಣವನ್ನು ಕಳೆದುಕೊಳ್ಳುವ ಭೀತಿ, ಕುಟುಂಬ ಸದಸ್ಯರ ಜೊತೆಗೆ ವಿಶ್ರಾಂತಿಯನ್ನು ಪಡೆಯುವಿರಿ, ಸಂಕಷ್ಟಗಳು ದೂರವಾಗುವ ಸೂಚನೆ ದೊರೆಯಲಿದೆ, ಸಂಗಾತಿಯ ಪ್ರೀತಿಯನ್ನು ಪಡೆಯುವಿರಿ.

ಮಿಥುನರಾಶಿ
ಅನಾರೋಗ್ಯ ಸಮಸ್ಯೆ, ತಾಯಿಯಿಂದ ಆರ್ಥಿಕ ಅನುಕೂಲ, ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲುದೊರೆಯಲಿದೆ, ಪತ್ನಿಯೊಂದಿಗೆ ಕಿರಿಕಿರಿ, ಪಾಲುದಾರಿಕೆ ವ್ಯವಹಾರದಿಂದ ಲಾಭ, ಕೌಟುಂಬಿಕ ಕಲಹಗಳು ಕಂಡು ಬರಲಿದೆ, ಭಾವನೆಗಳನ್ನು ನಿಯಂತ್ರಿಸಿಕೊಳ್ಳಿ.

ಕರ್ಕಾಟಕರಾಶಿ
ಹಣಕಾಸಿನ ಸ್ಥಿತಿ ಉತ್ತಮವಿದ್ದರೂ ಖರ್ಚು ಅಧಿಕವೆನಿಸಲಿದೆ, ಆರೋಗ್ಯದ ಕಡೆಗೆ ಗಮನ ಹರಿಸಿ, ಹಲವು ಸಮಸ್ಯೆಗಳು ನಿಮ್ಮನ್ನು ಕಾಡಲಿದೆ, ಬಾಕಿ ಉಳಿದ ಯೋಜನೆಗಳನ್ನು ಪೂರ್ಣಗೊಳಿಸಿ, ಭವಿಷ್ಯದ ಯೋಜನೆಗಳ ಬಗ್ಗೆ ಚಿಂತನೆ, ಸಂಗಾತಿಯಿಂದ ಸಹಕಾರ ದೊರೆಯಲಿದೆ.

ಸಿಂಹರಾಶಿ
ಹಣಕಾಸಿನ ಸ್ಥಿತಿಯು ಸುಧಾರಣೆಯನ್ನು ಕಾಣಲಿದೆ, ಕುಟುಂಬ ಸದಸ್ಯರ ಸಹಕಾರ ದೊರೆಯಲಿದೆ, ಸ್ನೇಹಿತರನ್ನು ಭೇಟಿಯಾಗಲಿದ್ದೀರಿ, ವೈವಾಹಿಕ ಜೀವನದಲ್ಲಿ ನೆಮ್ಮದಿ, ಸಾಮಾಜಿಕವಾಗಿ ಗೌರವ ದೊರೆಯಲಿದೆ, ವ್ಯವಹಾರದಲ್ಲಿ ಪ್ರಗತಿ ಕಂಡುಬರಲಿದೆ.

ಕನ್ಯಾರಾಶಿ
ಆರೋಗ್ಯದಲ್ಲಿ ಚೇತರಿಕೆ, ಬುದ್ದಿವಂತಿಕೆಯಿಂದ ಹೂಡಿಕೆ ಮಾಡಿ, ನಿರೀಕ್ಷೆಗೆ ತಕ್ಕಂತೆ ಮಕ್ಕಳಿಂದ ನೆಮ್ಮದಿ, ಕೆಲಸದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ, ಸಹೋದ್ಯೋಗಿಗಳ ಸಹಕಾರ, ಸಮಯವನ್ನು ಕಾಲಹರಣ ಮಾಡಬೇಡಿ, ಸಾಂಸಾರಿಕ ಜೀವನದಲ್ಲಿ ನೆಮ್ಮದಿ.

ತುಲಾರಾಶಿ
ನೆಮ್ಮದಿಯ ದಿನ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಹಣಕಾಸಿನ ಸಮಸ್ಯೆ ನಿವಾರಣೆಯಾಗಲಿದೆ, ಸ್ನೇಹಿತರ ಸಹಕಾರ ದೊರೆಯಲಿದೆ, ಪತ್ನಿಯೊಂದಿಗೆ ಸುಂದರ ಕ್ಷಣ, ಕಷ್ಟದ ಸಂದರ್ಭದಲ್ಲಿ ಬಂಧುಗಳ ಸಹಕಾರ, ಮಕ್ಕಳಿಂದ ನೆಮ್ಮದಿ, ಹೊಂದಾಣಿಕೆಯಿಂದ ಅನುಕೂಲ.

ವೃಶ್ಚಿಕರಾಶಿ
ಸಿನಿಮಾ ವೃತ್ತಿಯವರಿಗೆ, ಕಲಾವಿದರಿಗೆ ಅನುಕೂಲ, ಅಧಿಕ ಖರ್ಚು, ಧಾರ್ಮಿಕ ಕಾರ್ಯಗಳ ಬಗ್ಗೆ ಚಿಂತನೆ, ಸಂಬಂಧಿಕರ ಜೊತೆಗೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ, ಅತೀ ಆತ್ಮವಿಶ್ವಾಸದಿಂದ ಕಾರ್ಯ ಹಾನಿ, ಭವಿಷ್ಯದ ಯೋಜನೆ ರೂಪಿಸಲು ಸಕಾಲ, ಸಂಗಾತಿಯಿಂದ ಹಣಕಾಸಿನ ಸಹಕಾರ ದೊರೆಯಲಿದೆ.

ಧನಸುರಾಶಿ
ಆರೋಗ್ಯದ ಬಗ್ಗೆ ಕಾಳಜಿ ಇರಲಿ, ವ್ಯವಹಾರದಲ್ಲಿ ಅಧಿಕ ಲಾಭ ದೊರೆಯಲಿದೆ, ಪಾಲುದಾರಿಕೆ ವ್ಯವಹಾರದ ಬಗ್ಗೆ ಎಚ್ಚರಿಕೆ ಇರಲಿ, ಆರ್ಥಿಕ ಯೋಜನೆಗಳು ಕೈಗೂಡಲಿದೆ, ಅವಿವಾಹಿತರಿಗೆ ವಿವಾಹ ಭಾಗ್ಯ, ಆಧಾತ್ಮದ ಕಡೆಗೆ ಒಲವು ಹೆಚ್ಚಲಿದೆ, ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಯತ್ನ ಬಲ ಅಗತ್ಯ, ದೂರ ಬಂಧುಗಳ ಭೇಟಿಯಿಂದ ಸಂತಸ.

ಮಕರರಾಶಿ
ಸುತ್ತಮುತ್ತಲಿನ ಜನರ ಸಹಕಾರದಿಂದ ಸಂತಸ, ದುಶ್ಚಟಗಳಿಂದ ದೂರವಿರಿ, ಖರ್ಚುಗಳ ಮೇಲೆ ಹಿಡಿತವನ್ನು ಸಾಧಿಸಿ, ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಶ್ರಮ, ವ್ಯವಹಾರದಲ್ಲಿ ಚೇತರಿಕೆ ಕಂಡುಬರಲಿದೆ, ಹಳೆಯ ಸ್ನೇಹಿತರ ಭೇಟಿ, ಆಕಸ್ಮಿಕ ಶುಭವಾರ್ತೆಯನ್ನು ಕೇಳುವಿರಿ, ಅಧಿಕ ಶ್ರಮದಿಂದ ಲಾಭ.

ಕುಂಭರಾಶಿ
ಆಹಾರ ಸೇವನೆಯ ಬಗ್ಗೆ ಹಿಡಿತ ಇರಲಿ, ಹಣ ಸಂಪಾದನೆಗೆ ಹೊಸ ಮಾರ್ಗಗಳು ಗೋಚರಕ್ಕೆ ಬರಲಿದೆ, ಕಷ್ಟ ಸಂಕಷ್ಟಗಳು ದೂರವಾಗುವ ಸೂಚನೆ ದೊರೆಯಲಿದೆ, ಸ್ವತಃ ವ್ಯವಹಾರ ಮಾಡುವವರಿಗೆ ಅಧಿಕ ಲಾಭ, ಗುಟ್ಟಿನ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳ ಬೇಡಿ, ದಿನಾಂತ್ಯಕ್ಕೆ ಶುಭವಾರ್ತೆ.

ಮೀನರಾಶಿ
ಸ್ನೇಹಿತರು ನಿಮ್ಮನ್ನು ಪರೀಕ್ಷೆಗೆ ಒಡ್ಡಬಹುದು, ಹೂಡಿಕೆಯಲ್ಲಿ ಜಾಗರೂಕತೆಯಿಂದ ಹೆಜ್ಜೆಯನ್ನಿಡಿ, ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ, ಪಾಲುದಾರಿಕೆಯಿಂದ ಅಧಿಕ ಲಾಭ, ಹಳೆಯ ಸ್ನೇಹಿತರ ಜೊತೆ ಭೋಜನ, ಸಂಗಾತಿಯೊಂದಿಗೆ ಸುಂದರ ಕ್ಷಣ ನಿಮ್ಮದಾಗಲಿದೆ, ಹೊಸ ಒಪ್ಪಂದಕ್ಕೆ ಸಹಿಹಾಕುವ ಮುನ್ನ ಎಚ್ಚರಿಕೆಯಿಂದಿರಿ.

Comments are closed.