ಸುವರ್ಣಸೌಧವನ್ನು ಕೊವೀಡ್ ಕೇರ್ ಸೆಂಟರ್ ಮಾಡಿ….! ಸಿಎಂಗೆ ಶಾಸಕಿ ಅಂಜಲಿ ನಿಂಬಾಳ್ಕರ್ ಪತ್ರ…!!

ಕೊರೋನಾ ಎರಡನೇ ಅಲೆಗೆ ಕರ್ನಾಟಕ ಅಕ್ಷರಷಃ ನಲುಗಿ ಹೋಗಿದ್ದು, ರಾಜ್ಯದ ಎಲ್ಲೆಡೆ ಕೊರೋನಾ ಸೋಂಕಿತರಿಗೆ ಬೆಡ್, ಆಕ್ಸಿಜನ್ ಸೇರಿದಂತೆ ವೈದ್ಯಕೀಯ ಸೌಲಭ್ಯಗಳ ಕೊರತೆ ಎದುರಾಗಿದೆ. ಈ ಮಧ್ಯೆ ರೋಗಿಗಳ ಚಿಕಿತ್ಸೆಗಾಗಿ ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಸುವರ್ಣಸೌಧವನ್ನೇ  ಕೊವೀಡ್-19 ಚಿಕಿತ್ಸಾ ಕೇಂದ್ರ ಮಾಡಿ ಎಂದು ಕಾಂಗ್ರೆಸ್ ಶಾಸಕಿ ಸಿಎಂಗೆ ಆಗ್ರಹಿಸಿದ್ದಾರೆ.

https://kannada.newsnext.live/experts-say-risk-of-not-locking-down-32-lakh-people-infected-in-a-month/amp/

ಬೆಳಗಾವಿ ಗಡಿಭಾಗದ ಶಾಸಕಿ ಶ್ರೀಮತಿ ಅಂಜಲಿ ನಿಂಬಾಳ್ಕರ್ ಈ ಬಗ್ಗೆ ಸಿಎಂ ಬಿಎಸ್ವೈಗೆ ಪತ್ರ ಬರೆದಿದ್ದು, ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಆದರೆ ಚಿಕಿತ್ಸೆಗೆ ಬೆಡ್ ಸಿಗದೆ ಜನ ಸಾಯುತ್ತಿದ್ದಾರೆ. ಹೀಗಾಗಿ ಸುವರ್ಣಸೌಧವನ್ನು ಚಿಕಿತ್ಸಾ ಕೇಂದ್ರವಾಗಿ ಮಾಡಿ ಎಂದು  ಶಾಸಕಿ ಮನವಿ ಮಾಡಿದ್ದಾರೆ.

ಬೆಳಗಾವಿಯಲ್ಲಿ ಕೋಟ್ಯಾಂತರ ರೂಪಾಯಿ ವ್ಯಯಿಸಿ ಸುವರ್ಣಸೌಧ ನಿರ್ಮಿಸಲಾಗಿದೆ. ಆದರೆ ಎರಡು ವರ್ಷಗಳಿಂದ ಅಧಿವೇಶನ ನಡೆದಿಲ್ಲ. ಹೀಗಾಗಿ ಬೆಳಗಾವಿ ಸೋಂಕಿತರ ಚಿಕಿತ್ಸೆಗೆ ಈ ಸುವರ್ಣಸೌಧವನ್ನೇ ಬಳಸಿಕೊಳ್ಳಿ. ಅಗತ್ಯ ವೈದ್ಯಕೀಯ ಸೌಲಭ್ಯ, ವೈದ್ಯಕೀಯ ಸಿಬ್ಬಂದಿ ನೇಮಿಸಿ ಸೋಂಕಿತರ ಚಿಕಿತ್ಸೆಗೆ ವ್ಯವಸ್ಥೆ ಕಲ್ಪಿಸಿ. ಆ ಮೂಲಕ ಜನರ ಪ್ರಾಣ ಉಳಿಸಿ ಎಂದು ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಕೋರಿದ್ದಾರೆ.

https://kannada.newsnext.live/india-corona-virus-case-hike-today-report-414188-new-cases/amp/

ಆ ಮೂಲಕ ಬೆಳಗಾವಿ ಸೇರಿದಂತೆ ರಾಜ್ಯದ ವಿವಿಧೆಡೆ ಎದುರಾಗಿರುವ ಬೆಡ್ ವ್ಯವಸ್ಥೆಯ ಕೊರತೆಯನ್ನು  ಶಾಸಕಿ ಅಂಜಲಿ ನಿಂಬಾಳ್ಕರ್ ಟೀಕಿಸಿದ್ದು, ಜೊತೆಗೆ ಅಧಿವೇಶನಕ್ಕೆ ಬಳಸಿಕೊಳ್ಳದೇ ಖಾಲಿ ಬಿಟ್ಟಿರುವ ಸುವರ್ಣಸೌಧವನ್ನು ಕೊನೆ ಪಕ್ಷ ಸೋಂಕಿತರ ಚಿಕಿತ್ಸೆಗಾದರೂ ಬಳಸಿಕೊಳ್ಳುವ ಮೂಲಕ ಸದುಪಯೋಗ ಪಡಿಸಿಕೊಳ್ಳಿ ಎಂದು ವ್ಯಂಗ್ಯವಾಡಿದ್ದಾರೆ.

https://kannada.newsnext.live/corona-virus-hike-cm-meeting-today-lock-down-or-curfew-continue/amp/

ಗಡಿಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು, ಜನರು ಬೆಡ್ ಹಾಗೂ ಔಷಧಿ ಕೊರತೆಯಿಂದ ಪರದಾಡುತ್ತಿದ್ದಾರೆ.

Comments are closed.