ಬಡವರ ಕಣ್ಣೀರಿಗೆ ಕರಗದ ರಾಜ್ಯಸರ್ಕಾರ….! ಲಾಕ್ ಡೌನ್ ವಿಶೇಷ ಪ್ಯಾಕೇಜ್ ಘೋಷಣೆಯಿಲ್ಲ ಎಂದ ಸಿಎಂ…!!

ರಾಜ್ಯದಲ್ಲಿ ಲಾಕ್ ಡೌನ್ ಹೇರಿಕೆ ಮಾಡಿ ಜನರ ಜೀವಕಾಪಾಡುವ ಸರ್ಕಸ್ ನಡೆಸಿರುವ ರಾಜ್ಯ ಸರ್ಕಾರ ಬಡವರ ಹಾಗೂ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸುವ ಸಾಧ್ಯತೆಗಳು ಮರಿಚೀಕೆಯಾಗಿದೆ. ಲಾಕ್ ಡೌನ್ ಘೋಷಣೆಯೊಂದಿಗೆ ಹುಟ್ಟಿಕೊಂಡಿದ್ದ ವಿಶೇಷ ಪ್ಯಾಕೇಜ್ ಹಾಗೂ ಸಹಾಯಧನದ ಆಸೆಗೆ ಸಿಎಂ ತಣ್ಣೀರು ಎರೆಚಿದ್ದಾರೆ.

https://kannada.newsnext.live/karnataka-chief-minister-change-ashwath-narayana-new-cm/

ಮಂಗಳವಾರ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಿಎಸ್ವೈ, ಲಾಕ್ ಡೌನ್ ಘೋಷಣೆ ಮಾಡಿರುವ ಕಾರಣಕ್ಕೆ ವಿಶೇಷ ಪ್ಯಾಕೇಜ್ ಘೋಷಣೆಮಾಡುವ ಚಿಂತನೆ ಇಲ್ಲ ಎಂದಿದ್ದಾರೆ.

https://kannada.newsnext.live/cricket-vedakrishnamoorthy-lost-mother-sister-letter-twitter/

ರಾಜ್ಯದಲ್ಲಿ 14 ದಿನಗಳ ಲಾಕ್ ಡೌನ್ ಘೋಷಣೆಯಾಗಿರೋದರಿಂದ ಬಡವರು, ಕೂಲಿಕಾರ್ಮಿಕರು,ವ್ಯಾಪಾರಿಗಳಿಗೆ ಸಂಕಷ್ಟ ಎದುರಾಗಿದೆ. ಹೀಗಾಗಿ ಆದ್ಯತೆಯ ಮೇರೆಗೆ ಕಾರ್ಮಿಕರು ಸೇರಿದಂತೆ ಬಿಪಿಎಲ್ ಪಡಿತರ ಚೀಟಿ ದಾರರಿಗೂ ಸಹಾಯಧನ ಹಾಗೂ ವಿಶೇಷ ಪ್ಯಾಕೇಜ್ ಘೋಷಿಸಬೇಕೆಂದು ವಿಪಕ್ಷಗಳು ಆಗ್ರಹಿಸಿದ್ದರು.

ಕನಿಷ್ಠ 6 ರಿಂದ 10 ಸಾವಿರ ರೂಪಾಯಿ ಹಣ ನೀಡಬೇಕೆಂದು ಮಾಜಿಸಿಎಂ ಸಿದ್ಧರಾಮಯ್ಯ ಒತ್ತಾಯಿಸಿದ್ದರು. ಆದರೆ ಯಾವುದೇ ಒತ್ತಾಯಕ್ಕೂ ಮಣಿಯದ ಸಿಎಂ ಬಿಎಸ್ವೈ ಪ್ಯಾಕೇಜ್ ಘೋಷಣೆಯ ಪ್ರಸ್ತಾಪವಿಲ್ಲ ಎಂದಿದ್ದಾರೆ.

ರಾಜ್ಯದಲ್ಲಿ ಲಾಕ್ ಡೌನ್ ನಿಂದ ಕೊರೋನಾ ಪ್ರಕರಣಗಳಲ್ಲಿ ಇಳಿಕೆ ಕಂಡುಬರುತ್ತಿದೆ. ಜನರು ಸಹಕಾರ ನೀಡಿದರೇ ಇನ್ನಷ್ಟು ಕಡಿಮೆಮಾಡಬಹುದು ಎಂದಿದ್ದಾರೆ.

Comments are closed.