ಹುಟ್ಟೂರಿನ ಜನರ ಕೊರೋನಾ ಸಂಕಷ್ಟಕ್ಕೆ ಮಿಡಿದ ಕೆಜಿಎಫ್ ನಿರ್ಮಾಪಕ…! 50 ಐಸಿಯು ಬೆಡ್ ಒದಗಿಸಿದ ವಿಜಯ್ ಕಿರಗಂದೂರು..!!

ಕೊರೋನಾ ಸಂಕಷ್ಟದಿಂದ ಜನಸಾಮಾನ್ಯರು ಸಹಾಯಹಸ್ತಕ್ಕೆ ಕಾಯುವಂತಾಗಿದ್ದರೇ, ಸೆಲೆಬ್ರೆಟಿಗಳು ಮಾನವೀಯತೆ ತೋರುತ್ತ ಅಗತ್ಯ ಉಳ್ಳವರಿಗೆ ನೆರವಾಗುತ್ತಿದ್ದಾರೆ. ಇದೀಗ  ಆ ಸಾಲಿಗೆ ವಿಜಯ್ ಕಿರಗಂದೂರು ಹೊಸ ಸೇರ್ಪಡೆಯಾಗಿದ್ದು, ಹುಟ್ಟೂರಿಗೆ ನೆರವಾಗಲು ಸಿದ್ಧವಾಗಿದ್ದಾರೆ ಕೆಜಿಎಫ್ ನಿರ್ಮಾಪಕ.

ಕೊರೋನಾ ಸಂಕಷ್ಟದಿಂದ ಜನರು ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಕಂಗಾಲಾಗಿದ್ದಾರೆ. ಹೀಗಾಗಿ ಹುಟ್ಟೂರಿನ ಜನರ ಸಂಕಷ್ಟಕ್ಕೆ ಸ್ಪಂದಿಸಲು ಮುಂಧಾಗಿರುವ ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು .

ಮಂಡ್ಯ ಜಿಲ್ಲೆಯ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ 500 ಎಲ್ ಪಿಎಂ ಸಾಮರ್ಥ್ಯದ ಸಕಲ ವ್ಯವಸ್ಥೆಗಳನ್ನೊಳಗೊಂಡ 50 ಐಸಿಯು ಬೆಡ್ ಒದಗಿಸಲು ವಿಜಯ್ ನಿರ್ಧರಿಸಿದ್ದಾರೆ.

https://kannada.newsnext.live/twitter-helphand-india-110cr-jack-ceo-corona-covid-19/

ತಮ್ಮ ಸಿನಿಮಾ ನಿರ್ಮಾಣದ ಹೊಂಬಾಳೆ ಫಿಲ್ಮಂ ಸಂಸ್ಥೆಯಡಿಯಲ್ಲಿ ನೆರವಾಗುವುದಾಗಿ ವಿಜಯ್ ಘೋಷಿಸಿದ್ದು, ಸೌಲಭ್ಯವನ್ನು ಅಗತ್ಯ ಉಳ್ಳವರು ಬಳಸಿಕೊಳ್ಳುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಈ ಹಿಂದೆಯೂ ವಿಜಯ್ ಕೊರೋನಾ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಲ್ಲಿ ಶ್ರಮಿಸಿದ್ದು, ತಮ್ಮ ನಿರ್ಮಾಣ ಸಂಸ್ಥೆಯ ಎಲ್ಲ ಉದ್ಯೋಗಿಗಳಿಗೆ ಉಚಿತವಾಗಿ ಕೊರೋನಾ ಲಸಿಕೆ ಕೊಡಿಸಿದ್ದರು.

https://kannada.newsnext.live/sarigamapa-singer-subhramani-wife-death-corona-virus/

ಕೇವಲ ವಿಜಯ್ ಕಿರಗಂದೂರು ಮಾತ್ರವಲ್ಲ ಸ್ಯಾಂಡಲ್ ವುಡ್ ನ ಸುದೀಪ್, ಉಪೇಂದ್ರ್, ಶ್ರೀಮುರುಳಿ,ರಾಗಿಣಿ,ಶೋಭರಾಜ್ ಸೇರಿದಂತೆ ಹಲವರು ಕೊರೋನಾ ಸೋಂಕಿತರ ಸಂಕಷ್ಟಕ್ಕೆ ನೆರವಾಗಿದ್ದಾರೆ.

Comments are closed.