ಮತ್ತೆ ಯಾವಾಗ ತೆರೆಗೆ ಬರ್ತಾರೆ ಮೇಘನಾ ರಾಜ್…! ಈ ಪ್ರಶ್ನೆಗೆ ಏನಂದ್ರು ಗೊತ್ತಾ ನ್ಯೂಮಮ್ಮಿ…!!

ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ನಟನಾವಿಶೇಷತೆಯಿಂದ ಮನಸೆಳೆದ ನಟಿ ಮೇಘನಾ ರಾಜ್. ವಿಭಿನ್ನ ಪಾತ್ರಗಳ ಮೂಲಕ ಪಕ್ಕದ ಮನೆ ಹುಡುಗಿ ಎನ್ನಿಸಿಕೊಂಡ ಮೇಘನಾ ರಾಜ್ ಸದ್ಯ ತಾಯ್ತನದ ಸಂಭ್ರಮದಲ್ಲಿದ್ದಾರೆ. ಮಗುವಿನ ಜೊತೆ ಎಂಜಾಯ್ ಮಾಡ್ತಿರೋ ಮೇಘನಾ ಸ್ಕ್ರಿನ್ ಗೆ ಕಮ್ ಬ್ಯಾಕ್ ಯಾವಾಗ ಅನ್ನೋದು ಅಭಿಮಾನಿಗಳ ಪ್ರಶ್ನೆ.

ಕಳೆದ ಅಕ್ಟೋಬರ್ 22 ರಂದು ಗಂಡುಮಗುವಿಗೆ ಜನ್ಮನೀಡಿರೋ ಮೇಘನಾ ರಾಜ್ ಸದ್ಯ ಮಗನ ಆರೈಕೆಯಲ್ಲೇ ಬ್ಯುಸಿಯಾಗಿದ್ದಾರೆ. ಆದರೆ ಅಭಿಮಾನಿಗಳಿಗೆ ಮಾತ್ರ ಮೇಘನಾರನ್ನು ಮತ್ತೆ ತೆರೆ ಮೇಲೆ ನೋಡೋ ಆಸೆ.

https://kannada.newsnext.live/karnataka-chief-minister-change-ashwath-narayana-new-cm/

ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಮೇಘನಾ ಪ್ರತಿಭಾರಿ ಲೈವ್ ಬಂದಾಗಲೂ ಮರಳಿ ಸಿನಿಮಾಗೆ ಯಾವಾಗ ಬರ್ತಿರಾ ಎಂದು ಕೇಳುತ್ತಲೇ ಇರುತ್ತಾರೆ. ಮದರ್ಸ್ ಡೇ ಪ್ರಯುಕ್ತ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಮೇಘನಾ ರಾಜ್, ಈ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

https://kannada.newsnext.live/karnataka-corona-lockdown-bsy-nospicealpkg-told-cm-bsy/

ನಾನು ಮಾನಸಿಕವಾಗಿ ನಟನೆಗೆ ಸಿದ್ಧವಾಗಿದ್ದೇನೆ. ಒಂದೆರಡು ಆಸಕ್ತಿದಾಯಕ ಕತೆಗಳು ಬಂದಿವೆ. ಆದರೆ ಇದು ನಟನೆಗೆ ಮರಳಲು ಸೂಕ್ತಕಾಲವಲ್ಲ ಎನ್ನಿಸುತ್ತಿದೆ. ನಾನು ಪ್ರತಿನಿತ್ಯ ಮನೆಯಿಂದ ಹೊರಗೆ ಹೋಗಿ ಬಂದು ಮನೆಯ ಜನರನ್ನು ಸಂಕಷ್ಟಕ್ಕೆ ದೂಡಲು ನಾನು ಸಿದ್ಧವಿಲ್ಲ. ಹೀಗಾಗಿ ಇನ್ನೊಂದಿಷ್ಟು ಕಾಲ ನಟನೆಗೆ ಮರಳುವುದಿಲ್ಲ ಎಂದಿದ್ದಾರೆ.

ನನ್ನ ಮಗ ಇನ್ನು ಚಿಕ್ಕವನು. ಹೀಗಾಗಿ ಈಗಲೇ ಅವನನ್ನು ಬಿಟ್ಟು ಧಾವಂತದ ಬದುಕಿಗೆ ಮರಳಲು ಮನಸ್ಸಿಲ್ಲ. ಅವನ ತಾಯಿಯಾಗಿ ಅವನ ಕೆಲಸಗಳನ್ನು ಮಾಡುತ್ತ ಮನೆಯಲ್ಲೇ ಸಮಯ ಕಳೆಯಲು ನನಗೆ ಇಷ್ಟ. ಹೀಗಾಗಿ ಸಧ್ಯಕ್ಕೆ ನಟನೆಗೆ ಮರಳುವುದಿಲ್ಲ ಎಂದಿದ್ದಾರೆ ಮೇಘನಾ ರಾಜ್.

ಕನ್ನಡ ಹಾಗೂ ಮಲೆಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಬಣ್ಣ ಹಚ್ಚಿನ ಮೇಘನಾ ನಟಿಸಿದ ಎರಡಕ್ಕೂ ಹೆಚ್ಚು ಚಿತ್ರಗಳು ರಿಲೀಸ್ ಗೆ ಕಾದಿವೆ.

Comments are closed.