ಮಧ್ಯವಯಸ್ಕನೊಬ್ಬ ಹದಿಹರೆಯದ ಯುವತಿಯನ್ನು ಪ್ರೇಮಿಸುವ ಸ್ಟೋರಿಯೊಂದಿಗೆ ಮನೋರಂಜನೆಯ ಕ್ಷೇತ್ರಕ್ಕೆ ಕಾಲಿಟ್ಟ ಜೊತೆ-ಜೊತೆಯಲಿ ಈಗ ಹೆಣ್ಮಕ್ಕಳ ಮನಗೆದ್ದಿದೆ. ಆದರೇ ಸಧ್ಯ ದಲ್ಲೇ ಈ ಧಾರವಾಹಿ ಅಭಿಮಾನಿಗಳಿಗೆ ಶಾಕ್ ಕಾದಿದೆ.

ಜೊತೆ-ಜೊತೆಯಲಿ ಸೀರಿಯಲ್ ಧಾರಾವಾಹಿಯ TRP ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುತ್ತಲೇ ಇದೆ. ಇದಕ್ಕೆ ಕಾರಣ ಕತೆಯ ಗುಣಮಟ್ಟ ಮತ್ತು ಹೆಣೆದ ರೀತಿ.

ಹೀಗಾಗಿ ಜನರು 8.30 ಕ್ಕೆಲ್ಲ ಝೀ ಕನ್ನಡದ ಮುಂದೇ ಹಾಜರಾಗಿ ಬಿಡ್ತಾರೆ. ಆದರೇ ಜೊತೆ-ಜೊತೆಯಲಿ ಸೀರಿಯಲ್ ನ ಪ್ರಮುಖ ಆಕರ್ಷಣೆಯಾಗಿದ್ದ ಅನಿರುದ್ಧ ಈಗ ಸೀರಿಯಲ್ ನಿಂದ ಹೊರಬೀಳೋ ಸುದ್ದಿಬಂದಿದ್ದು ಅಭಿಮಾನಿಗಳು ಶಾಕ್ ಆಗಿದ್ದಾರೆ.

ಇದೇ ಜನವರಿಯಿಂದ ಆರಂಭವಾಗೋ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಮನೆಗೆ ಅನಿರುದ್ಧ ಸ್ಪರ್ಧಾಳುವಾಗಿ ಪ್ರವೇಶಿಸಲಿದ್ದು ಇದೇ ಕಾರಣಕ್ಕೆ ಸೀರಿಯಲ್‌ನಿಂದ ಹೊರಬರಲಿದ್ದಾರೆ ಎನ್ನಲಾಗುತ್ತಿದೆ.

ಸುದೀಪ್ ಆಂಕ್ಯರಿಂಗ್ ನಲ್ಲಿ ನಡೆಯೋ ಈ ರಿಯಾಲಿಟಿ ಶೋಗಾಗಿ ಅನಿರುದ್ಧ ಜೊತೆ ಜೊತೆಯಲಿ ಬಿಟ್ಟು ಹೊರಬರಲಿದ್ದು ಅವರನ್ನು ಬಿಟ್ಟು ಕತೆಯನ್ನು ಹೇಗೆ ಮುಂದುವರೆಸುತ್ತಾರೆ? ಅಥವಾ ಧಾರಾವಾಹಿಯನ್ನೇನಿಲ್ಲಿಸುತ್ತಾರಾ ಎಂಬುದರ ಬಗ್ಗೆ ಇನ್ನು ಸ್ಪಷ್ಟತೆ ಇಲ್ಲ.

ಅನಿರುದ್ಧ ಜೊತೆ ಡ್ರೋನ್ ಪ್ರತಾಪ,ಗಾಯಕ ಹನುಮಂತು ಸೇರಿ ಹಲವರು ಒಂಟಿ ಮನೆ ಸೇರಲಿದ್ದಾರೆ ಎಂಬ ಮಾತು ಕೇಳಿಬಂದಿದ್ದು ಬಿಗ್ ಬಾಸ್ ಸೀಸನ್ ಆರಂಭವಾದ ಮೇಲೆ ನಮ್ಮ ಕುತೂಹಲಕ್ಕೆ ಉತ್ತರ ಸಿಗಲಿದೆ