ಮರಣದ ಬಳಿಕವೂ ಮನಗೆದ್ದ ಬಂಗಾರದ ಮನುಷ್ಯ…! ಡಾ. ರಾಜ್ ನೆಟ್ಟಿಗರು ಮೆಚ್ಚಿದ ಸಿನಿನಾಯಕ…!!

ಡಾ.ರಾಜಕುಮಾರ್… ಕರುನಾಡಿನ ಬಂಗಾರದ ಮನುಷ್ಯ. ಮನೋಜ್ಞ‌ಅಭಿನಯ ಹಾಗೂ ಸರಳತೆಯಿಂದ ವಿಶ್ವದ ಸಿನಿಪ್ರಿಯರನ್ನೇ ಗೆದ್ದ ಗಾನಗಂಧರ್ವ. ಹೀಗೆ ಎಂದೆಂದೂ ಮರೆಯದ ಡಾ.ರಾಜ್ ನಿಧನರಾದ ೧೪ ವರ್ಷದ ಬಳಿಕವೂ ಸಾಧನೆಯ ಪರ್ವ ಮುಂದುವರೆಸಿದ್ದು, ನೆಟ್ಟಿಗರ ಆಯ್ಕೆಯಲ್ಲಿ ಮೊದಲ ಸ್ಥಾನ ಗಳಿಸುವ ಮೂಲಕ ತಮ್ಮ ಜನಪ್ರಿಯತೆ ಕುಗ್ಗಿಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.

ವಿಶ್ವದ ಫೇಮಸ್ ಸರ್ಚ್ ಇಂಜಿನ್ ಯಾಹೂ ಭಾರತದ ಸಾರ್ವಕಾಲಿನ ಶ್ರೇಷ್ಠ ನಟ ಯಾರು ಎಂಬುದರ ಬಗ್ಗೆ ಒಂದು ಸ್ಪರ್ಧೆ ಏರ್ಪಡಿಸಿತ್ತು. ಈ ಸ್ಪರ್ಧೆಯಲ್ಲಿ ಬಳಕೆದಾರರಿಗೆ ಒಬ್ಬರಿಗೆ ಕನಿಷ್ಠ 10 ನಟರಿಗೆ ಮತ ಹಾಕುವ ಅವಕಾಶ ಕಲ್ಪಿಸಲಾಗಿತ್ತು.

ಈ ಸ್ಪರ್ಧೆಯಲ್ಲಿ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್, ಕಮಲಹಾಸನ್, ತೆಲುಗಿನ ಎನ್ ಟಿಆರ್, ಅಮಿತಾಭ್ ಬಚ್ಚನ್ ,ಅಮೀರ್ ಖಾನ್ ಸೇರಿದಂತೆ ಹಲವು ನಟರ ಹೆಸರಿತ್ತು. ಕನ್ನಡದಿಂದ‌ ಅಣ್ಣಾವ್ರ ಹೆಸರನ್ನು ಬಳಸಲಾಗಿತ್ತು. ಈ ಸ್ಪರ್ಧೆಯ ಫಲಿತಾಂಶದಲ್ಲಿ ಡಾ.ರಾಜಕುಮಾರ್ ಸಾರ್ವಕಾಲಿಕ ಶ್ರೇಷ್ಠ ನಟರಾಗಿ‌ ಹೊಮ್ಮಿದ್ದು ಅತ್ಯಂತ ಹೆಚ್ಚು ಅಂದ್ರೆ ಶೇಕಡಾ 16 ರಷ್ಟು ಮತಪಡೆದಿದ್ದಾರೆ.

ಡಿಸೆಂಬರ್ 10 ರವರೆಗೆ ಈ ಆಯ್ಕೆಗೆ ಅವಕಾಶ ನೀಡಲಾಗಿದ್ದು, ಲಕ್ಷಾಂತರ ಜನರು ಡಾ.ರಾಜ್ ಕುಮಾರ್ ಆಯ್ಕೆ ಮಾಡಿ ಜೈ ಎಂದಿದ್ದಾರೆ.

ತೆಲುಗು ಚಿತ್ರರಂಗದ ದಂತಕತೆ ಎನ್ ಟಿಆರ್‌ಎರಡನೇ ಸ್ಥಾನದಲ್ಲಿದ್ದಾರೆ. ಈ ಸ್ಪರ್ಧೆ ಡಾ.ರಾಜ್ ಕುಮಾರ್ ಜನಪ್ರಿಯತೆಗೆ ಸಾಕ್ಷಿಯಾಗಿದ್ದು, ಅವರ ನಿಧನದ ವರ್ಷಗಳ ಬಳಿಕವೂ ಅವರ ಜನಪ್ರಿಯತೆಯಲ್ಲಿ ಕೊಂಚವೂ ಕೊರತೆಯಾಗಿಲ್ಲ

Comments are closed.