ನೀರಿನಿಂದಲೂ ಓಡುತ್ತಂತೇ ಕಾರು…! ವಿದ್ಯಾರ್ಥಿಗಳ ಸಂಶೋಧನೆಗೆ ಅಚ್ಚರಿಗೊಂಡ ವಿಜ್ಞಾನಿಗಳು…!!

ಬೆಂಗಳೂರು: ಏರುತ್ತಿರುವ ಇಂಧನದ ಬೆಲೆ ವಾಹನ ಸವಾರರ ನಿದ್ದೆಗೆಡಿಸಿರುವಾಗಲೇ ಅಚ್ಚರಿಯ ಸಂಶೋಧನೆಯೊಂದು ದೇಶಿಯ ವಿದ್ಯಾರ್ಥಿಗಳಿಂದ ಹೊರಬಿದ್ದಿದ್ದು, ವಿದೇಶದ ವಿಜ್ಞಾನಿಗಳು ಈ ಸಂಶೋಧನೆ ಕಂಡು ಅಚ್ಚರಿಗೊಂಡಿದ್ದಾರೆ.

ಹೌದು ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಲಾಗ್ 9 ಎಂಬ ಸ್ಟಾರ್ಟಪ್ ವೊಂದು ನೀರಿನಿಂದ 300 ಕಿಲೋಮೀಟರ್ ಕಾರು ಓಡಿಸಬಲ್ಲ ತಂತ್ರಜ್ಞಾನವನ್ನು ಕಂಡು ಹಿಡಿಯುವ ಮೂಲಕ ನೀರು ಇಂಧನವಾಗಿ ಬಳಕೆಯಾಗಬಲ್ಲ ಸಾಧ್ಯತೆಗಳ ಮೇಲೆ ಬೆಳಕು ಚೆಲ್ಲಿದೆ.  ಈ ಸ್ಟಾರ್ಟಪ್ ಹೀಗೆ ನೀರು ಹಾಗೂ ಆಲ್ಯುಮಿನಿಯಂನಿಂದ ಓಡಬಲ್ಲ ಕಾರೊಂದನ್ನು ಅಭಿವೃದ್ಧಿ ಪಡಿಸಿದೆ.

ಕೇವಲ ನೀರು ಹಾಗೂ ಕೆಲವು ಮಾದರಿಯ ಆಲ್ಯೂಮಿನಿಯಂ ಪ್ಲೇಟ್ ಗಳನ್ನು ಬಳಸಿಕೊಂಡು ಶಕ್ತಿ ಉತ್ಪಾದಿಸಿ ಆ ಶಕ್ತಿಯಿಂದ ಕಾರು ಚಲಾಯಿಸುವುದಾಗಿ ಈ ಸ್ಟಾರ್ಟಪ್ ಹೇಳಿಕೊಂಡಿದೆ. ಈ ವಿಧಾನವನ್ನು ಅರಿತುಕೊಳ್ಳಲು ಹಾಗೂ ಫಾರ್ಮುಲಾ ಖರೀದಿಸಲು ವಿದೇಶಿ ಕಂಪನಿಗಳು ಮುಗಿಬಿದ್ದಿವೆ ಎನ್ನಲಾಗಿದೆ.  

ಲಾಗ್ 9 ಸ್ಟಾರ್ಟಪ್ ಅಭಿವೃದ್ಧಿ ಪಡಿಸಿದ  ಈ ಕಾರು 1 ಲೀ ಲೀಟರ್ ನೀರು ಹಾಗೂ ಆಲ್ಯೂಮಿನಿಯಂ ಪ್ಲೇಟ್ ಗಳ ಸಹಾಯದಿಂದ ಉತ್ಪಾದನೆಯಾದ ಶಕ್ತಿ ಬಳಸಿಕೊಂಡು 300 ಕಿಲೋಮೀಟರ್ ಓಡಲಿದೆ ಎನ್ನಲಾಗಿದ್ದು,  ಇದು ನಿಜವಾದರೇ ವಾಹನಗಳ ಮಾರುಕಟ್ಟೆಯ ಚಿತ್ರಣವೇ ಬದಲಾಗಲಿದೆ.

ಸಧ್ಯ ಯಾವ ಕಂಪನಿಯ ಕಾರುಗಳು ಲೀಟರ್ ಪೆಟ್ರೋಲ್-ಡಿಸೇಲ್ ಗೆ 20 ಕಿಲೋಮೀಟರ್  ಮೈಲೇಜ್ ದಾಟಿಲ್ಲ. ಹೀಗಿರುವಾಗ  ಈ ಸಂಶೋಧನೆ ಗ್ರಾಹಕರಿಗೆ ಸಂಜೀವಿನಿಯಾಗಲಿದ್ದು, ಈ ತಂತ್ರಜ್ಞಾನಕ್ಕಾಗಿ ವಿದೇಶಿ ಕಂಪನಿಗಳು ಭಾರತ ಮೂಲದ  ಈ ಲಾಗ್ 9 ಸ್ಟಾರ್ಟಪ್ ಎದುರು ಕ್ಯೂ ನಿಲ್ಲುವ ದೂರವಿಲ್ಲ. ‘

ಸಧ್ಯ ಸಂಶೋಧನೆ ಹಂತದಲ್ಲಿರುವ  ಈ ಫಾರ್ಮುಲಾ ಯಾವಾಗ ಬಳಕೆಗೆ ಸಿಗಲಿದೆ ಎಂಬುದರ ಬಗ್ಗೆ ಲಾಗ್ 9 ಯಾವುದೇ ಮಾಹಿತಿ ನೀಡಿಲ್ಲ. ಆದರೆ ವಿದ್ಯಾರ್ಥಿಗಳು ನೀರಿನಿಂದಲೇ ಓಡುವ ಕಾರ್ ತಯಾರಿಸಿದ್ದಾರೆ ಎಂದು ಹೇಳಿಕೊಂಡಿದ್ದು, ಇಂತಹದೊಂದು ಕಾರು ರಸ್ತೆಗಿಳಿಯುವ ಅಥವಾ ಡೆಮೋ ಸಿಗುವ ಕಾಲಕ್ಕಾಗಿ ಜನರು ಕಾತುರದಿಂದ ಕಾಯ್ತಿರೋದಂತ ನಿಜ.

Comments are closed.