ಬಂಡವಾಳ ಕೊರತೆ ಹಿನ್ನೆಲೆ….! ಮತ್ತೊಂದು ಬ್ಯಾಂಕ್ ಪರವಾನಿಗೆ ರದ್ದುಗೊಳಿಸಿದ ಆರ್ಬಿಐ…!!

ನವದೆಹಲಿ: ಬ್ಯಾಂಕ್ ಗಳ ಮೇಲೆ ತನ್ನ ಹದ್ದಿನ ಕಣ್ಣು ಇಟ್ಟಿರುವ ಆರ್ಬಿಐ, ಎಚ್ಡಿಎಫ್ಸಿ ಬ್ಯಾಂಕ್ ಮೇಲಿನ ನಿಯಂತ್ರಣದ ಬಳಿಕ   ಇನ್ನೊಂದು ಸಹಕಾರಿ ಬ್ಯಾಂಕ್ ನ ಪರವಾನಿಗೆ ರದ್ದು ಮಾಡಿದೆ.

ಅಗತ್ಯ ಪ್ರಮಾಣದ ಬಂಡವಾಳ ಇಲ್ಲದೇ ಇದ್ದರೂ ಆರ್ಥಿಕ ಚಟುವಟಿಕೆ ನಡೆಸುತ್ತಿದ್ದ ,  ದಿ.ಕರಾಡ್ ಜನತಾ ಸಹಕಾರಿ ಬ್ಯಾಂಕ್ ಗೆ  ಆರ್ಬಿಐಗೆ ಶಾಕ್ ನೀಡಿದ್ದು, ಪರವಾನಿಗೆ ರದ್ದು ಮಾಡಿದೆ. ಮಂಗಳವಾರ ಆರ್ಬಿಐ ಪರವಾನಿಗೆ ರದ್ದುಗೊಳಿಸಿ ಆದೇಶ ಹೊರಡಿಸಿದ್ದು, ಸೋಮವಾರಕ್ಕೆ ಎಲ್ಲ ವ್ಯವಹಾರಗಳನ್ನು ಕೊನೆಗೊಳಿಸುವಂತೆ ಆರ್ಬಿಐ ಸೂಚನೆ ನೀಡಿದೆ.

ದಿ.ಕರಾಡ್  ಜನತಾ ಸಹಕಾರಿ ಬ್ಯಾಂಕ್ ನ ಪರವಾನಿಗೆಯನ್ನು ರದ್ದುಗೊಳಿಸಿರುವ ಆರ್ಬಿಐ ಗ್ರಾಹಕರಲ್ಲಿ ಶೇಕಡಾ 99 ದಷ್ಟು ಜನರಿಗೆ ತಮ್ಮ ಠೇವಣಿಯ ಪೂರ್ತಿ ಮೊತ್ತ ವಾಪಸ್ ಸಿಗಲಿದೆ ಎಂದಿದೆ. ಅಲ್ಲದೇ,  ಈ ಹಣಕಾಸು ವಹಿವಾಟನ್ನು ನಗದು ರೂಪದಲ್ಲಿ ನಡೆಸುವುದಕ್ಕೆ ನಿರ್ಭಂಧ ಹೇರಿದೆ.

ಇನ್ಮುಂದೆ ಬ್ಯಾಂಕ್ ಯಾವುದೇ ರೀತಿಯ ಚಟುವಟಿಕೆಗಳನ್ನು ನಡೆಸದಂತೆ ಆರ್ಬಿಐ ಸೂಚಿಸಿದೆ. ಅಲ್ಲದೇ ಈ ಬ್ಯಾಂಕ್ ಇನ್ನು ಕಾರ್ಯನಿರ್ವಹಿಸಲು ಅವಕಾಶ ನೀಡಿದಲ್ಲಿ ಅದರಿಂದ ಗ್ರಾಹಕರ ಹಿತಕ್ಕೆ ಧಕ್ಕೆಯಾಗಲಿದೆ. ಅಲ್ಲದೇ ಈ ಬ್ಯಾಂಕ್ ಅಸ್ತಿತ್ವದಲ್ಲಿರೋದು ಕೂಡ ಠೇವಣಿದಾರರ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಆರ್ಬಿಐ ಹೇಳಿದ್ದು, ಪರವಾನಿಗೆ ರದ್ದು ಆದೇಶ ಹೊರಡಿಸಿದೆ.

ಮಹಾರಾಷ್ಟ್ರದ ಕರಾಡ್ ಮೂಲದ  ಈ ಸಹಕಾರಿ ಬ್ಯಾಂಕ್, 1917 ರಲ್ಲಿ ರಜಿಸ್ಟರ್ ಆಗಿದ್ದು,  ಇಷ್ಟು ವರ್ಷಗಳ ಕಾಲ ಸೇವೆ ಸಲ್ಲಿಸಿತ್ತು.

Comments are closed.