H.D.Kumarswamy: ಸರ್ಕಾರದ ವಿರುದ್ಧ ಸಾಲು ಸಾಲು ಆರೋಪ…! ಅಧಿವೇಶನಕ್ಕೆ ಅವಕಾಶ ಕೋರಿ ರಾಜ್ಯಪಾಲರಿಗೆ ಎಚ್ಡಿಕೆ ಪತ್ರ…!!

ಕೊರೋನಾ ಎರಡನೇ ಅಲೆ ಹಾಗೂ ಮೊದಲನೆ ಅಲೆಯ ನಿರ್ವಹಣೆಯ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ವಿಶೇಷ ಅಧಿವೇಶನ ಕರೆಯಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಈ ಕುರಿತು ರಾಜ್ಯಪಾಲರಾದ ವಜೂಬಾಯಿ ವಾಲಾ ಅವರಿಗೆ ಪತ್ರ ಬರೆದಿರುವ ಎಚ್ಡಿಕೆ, ಕರ್ನಾಟಕದಲ್ಲಿ ಕೊವೀಡ್ ಸ್ಥಿತಿಗತಿ, ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ, ಆಡಳಿತದಲ್ಲಿ ಅನ್ಯರ ಹಸ್ತಕ್ಷೇಪ, ಕನ್ನಡಿಗರಿಗೆ ವಿವಿಧ ಕ್ಷೇತ್ರದಲ್ಲಿ ಆಗುತ್ತಿರುವ ಹಿನ್ನಡೆ ಕುರಿತಂತೆ ಗಂಭೀರ ಅಸಮಧಾನ ವ್ಯಕ್ತಪಡಿಸಿರುವಎಚ್ಡಿಕೆ ಈ ಕುರಿತು ಚರ್ಚೆ ತುರ್ತು ಅಧಿವೇಶನ ನಡೆಸುವಂತೆ ಕೋರಿದ್ದಾರೆ.

ರಾಜ್ಯದಲ್ಲಿ ಕೊರೋನಾ ಉಲ್ಬಣಿಸಿದ್ದು, ಸರ್ಕಾರ ಲಾಕ್ ಡೌನ್ ಘೋಷಿಸಿದ್ದು ನಿಮ್ಮ ಗಮನದಲ್ಲಿದೆ. ಆದರೆ ರೈತರು ಹಾಗೂ ಜನರು ಸಂಕಷ್ಟದ ಪರಿಸ್ಥಿತಿ ತಲುಪಿದ್ದು, ಬದುಕಿಗಾಗಿ ಪರದಾಡುವ ಸ್ಥಿತಿ ಇದೆ. ಆದರೆ ಸರ್ಕಾರ ಕೇವಲ ಅಲ್ಪ ಪ್ರಮಾಣದ ಪರಿಹಾರ ಮಾತ್ರ ಘೋಷಿಸಿದೆ. ಪರಿಹಾರ ಘೋಷಣೆಯ ವಿಚಾರದಲ್ಲಿ 224 ಸದಸ್ಯರನ್ನು ಗಮನಕ್ಕೆ ತೆಗೆದುಕೊಳ್ಳುವ ಕಾರ್ಯ ಮಾಡಿಲ್ಲ.

ಬಿಪಿಎಲ್ ಪಡಿತರುದಾರರಿಗೆ 1 ಲಕ್ಷ ಪರಿಹಾರ ಘೋಷಿಸಿದೆ. ಆದರೆ ಅದರಲ್ಲೂ ಹಲವು ಮಾನದಂಡ ಅನುಸರಿಸುತ್ತಿದೆ. ಇದು ಸರಿಯಲ್ಲ ಮಧ್ಯಮವರ್ಗದವರಿಗೂ ನೆರವಾಗಬೇಕಿತ್ತು. ಇದರಲ್ಲಿ ಸರ್ಕಾರ ಜಿಪುಣತನ ತೋರುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ವಿವಿಧ ಯೋಜನೆಗಳ ಜಾರಿಗೆ ಕಿಕ್ ಬ್ಯಾಕ್ ಸೇರಿದಂತೆ ರಾಜ್ಯ ಸರ್ಕಾರದ ಎಲ್ಲ ಇಲಾಖೆಗಳು ಭಾರಿ ಅಕ್ರಮ ಆರೋಪ ಎದುರಿಸುತ್ತಿವೆ. ಮೂರನೆ ಅಲೆಯ ಭೀತಿಯೂ ಎದುರಾಗಿದ್ದು, ಇದಕ್ಕೂ ಸರ್ಕಾರ ಸನ್ನದ್ಧವಾಗಿಲ್ಲ. ಹೀಗಾಗಿ ಅಧಿವೇಶನದ ಮೂಲಕ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವ ಅವಕಾಶಕ್ಕೆ ಕಾದಿರುವ ಕುಮಾರಸ್ವಾಮಿ ರಾಜ್ಯಪಾಲರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.  

Comments are closed.