America: ದೊಡ್ಡಣ್ಣನಿಗೆ ತಟ್ಟಿತು ಬರಗಾಲದ ಬಿಸಿ….! ಅಮೇರಿಕಾದಲ್ಲಿ ಹನಿ ಹನಿ ನೀರಿಗೂ ಪರದಾಟ…!!

             

ಕೊರೋನಾ ಮಹಾಮಾರಿಯಿಂದ ತತ್ತರಿಸಿದ ಅಮೇರಿಕಾಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು,  ಹನಿ ಹನಿ ನೀರಿಗೂ ತತ್ವಾರದ ಸ್ಥಿತಿ ಎದುರಾಗಿದ್ದು, ಮುಂದಿನ ದಿನಗಳಲ್ಲಿ ಕೃಷಿ ಸೇರಿದಂತೆ ಅಗತ್ಯ ಬಳಕೆಗೂ ನೀರಿಲ್ಲದೇ ಪರದಾಡುವ ಸ್ಥಿತಿ ಎದುರಾಗಲಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಮಳೆಯ ಕೊರತೆಯಿಂದ ಭೀಕರ ಬರಗಾಲ ಎದುರಾಗಿದ್ದು, ಇದರೊಂದಿಗೆ ಕೊಲೊರಾಡೋ ನದಿಗೆ ಅಡ್ಡಲಾಗಿ ನೆವಾಡಾ ಮತ್ತು ಅರಿಜೋನ್ ಗಡಿಯಲ್ಲಿ ನಿರ್ಮಿಸಿರುವ ಹೂವರ್ ಡ್ಯಾಂ ನ ನೀರಿನ ಮಟ್ಟ ವಿಪರೀತ ಕುಸಿತ ಕಂಡಿದ್ದು, ಜನರಿಗೆ ಆತಂಕ ಎದುರಾಗಿದೆ.

ಹೂವರ್ ಡ್ಯಾಂನ ನೀರಿನ ಮಟ್ಟ ಕುಸಿದಿರೋದರಿಂದ ಅಮೇರಿಕಾದ ಅಂದಾಜು 25 ಮಿಲಿಯನ್ ಜನಸಂಖ್ಯೆಗೆ ನೀರಿದ ಕೊರತೆ ಕಾಡಲಿದೆ. ತಿಂಗಳ ಆರಂಭದಲ್ಲೇ ದೇಶದಲ್ಲಿ ನೀರಿನ ಕೊರತೆ ಎದುರಾಗಿದೆ ಎಂದು ಸರ್ಕಾರ ಎಚ್ಚರಿಸಿತ್ತಾದರೂ ಇದೀಗ 15-20 ದಿನದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ ಎನ್ನಲಾಗಿದೆ.

ಹೂವರ್ ಡ್ಯಾಂನ ನೀರಿನ ಮಟ್ಟ 35 ಅಡಿಗೆ ಕುಸಿದಿದೆ. ಹೀಗಾಗಿ ನೀರಿನ ಕೊರತೆ ಸಮಸ್ಯೆ ನೀಗಿಸಲು ಸರ್ಕಾರ ಕೃಷಿಗೆ ನೀಡುತ್ತಿದ್ದ ನೀರಿನ ಪೊರೈಕೆ ನಿಲ್ಲಿಸಿದೆ. ಇದರಿಂದ ರೈತರು ಕಂಗಾಲಾಗಿದ್ದು, ಮಳೆಯೂ ಇಲ್ಲದೇ ನೀರಿನ ಪೊರೈಕೆಯೂ ಇಲ್ಲದೇ ಪರದಾಡುತ್ತಿದ್ದಾರೆ.

ಕಳೆದ 20 ವರ್ಷಗಳಿಂದಲೂ ಅಮೇರಿಕಾದ ರಾಜ್ಯಗಳು ನೀರಿನ ಪ್ರಮಾಣದಲ್ಲಿ ಕುಸಿತ ಅನುಭವಿಸುತ್ತಿದ್ದು, 1400 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಭೀಕರ ಬರಗಾಲ ಎದುರಿಸುತ್ತಿದೆ ಅಮೇರಿಕಾ. ಕ್ಯಾಲಿಪೋರ್ನಿಯಾ ಅತ್ಯಂತ ಹೆಚ್ಚು ನೀರಿನ ಅಭಾವ ಎದುರಿಸುತ್ತಿದೆ.

ಇದರೊಂದಿಗೆ ವಿಶ್ವದಲ್ಲೇ ಖ್ಯಾತಿ ಗಳಿಸಿದ ಕ್ಯಾಲಿಪೋರ್ನಿಯಾದ ಬಾದಾಮಿ ಬೆಳೆಗೂ ನೀರಿನ ಕೊರತೆ ಕಾಡುತ್ತಿದ್ದು, ಇದರಿಂದ ಅಂದಾಜು 50 ಸಾವಿರ ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗುತ್ತಿದೆ.

‘ಬೈಡನ್ ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳದಿದ್ದಲ್ಲಿ ಅಮೇರಿಕಾ ಜಲಕ್ಷಾಮಕ್ಕೆ ಬಲಿಯಾಗಲಿದೆ.ಹೀಗಾಗಿ ಸರ್ಕಾರ ತಕ್ಷಣ ಕುಡಿಯುವ ನೀರು ಒದಗಿಸಲು ಕ್ರಮಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗುತ್ತಿದೆ.

Comments are closed.